Dailyhunt
ವಚನ: -ಸಂಗಮೇಶ್ವರದ ಅಪ್ಪಣ್ಣ

ವಚನ: -ಸಂಗಮೇಶ್ವರದ ಅಪ್ಪಣ್ಣ

ನಿತ್ಯ ನಿಮ್ಮ ಬಿಸಿ ಸುದ್ದಿಯಲ್ಲಿ 12 ನೇ ಶತಮಾನದಲ್ಲಿ ಶರಣರು ರಚಿಸಿದ ವಚನಗಳನ್ನು ನಿಮ್ಮಗಳ ಅವಗಾಹನೆಗೆ

ವಚನ:

ಹೊತ್ತಾರಿನ ಹೊತ್ತು ಮಲಮೂತ್ರ ವಿಸರ್ಜನಕ್ಕೆ ಹೋಯಿತ್ತು.

ಮಧ್ಯಾಹ್ನದ ಹೊತ್ತು ಹಸಿವು ತೃಷೆಗೆ ಹೋಯಿತ್ತು.

ಮೂರನೆಯ ಜಾವದ ಹೊತ್ತು ಹೊಟ್ಟೆತುಂಬಿದ ಬಳಿಕ,

ಕಾಯದ ಕಳವಳವ ಕೈಕೊಂಬುದಯ್ಯಾ.

ಇರುಳಾದ ಬಳಿಕ ನಿದ್ರೆಗೈದು,

ಬೆಳಗಾಹನ್ನಬರ ಸತ್ತಂತಿಹೆನು ಹೆಣನಾಗಿ ಏನುವನರಿಯದೆ.

ಅಯ್ಯಾ, ನಿಮ್ಮ ನೆನೆವವರ ಚರಣಕ್ಕೆ ಶರಣೆಂಬೆನಯ್ಯಾ,ಬಸವಪ್ರಿಯ ಕೂಡಲಚೆನ್ನಸಂಗಮದೇವಾ.

-ಸಂಗಮೇಶ್ವರದ ಅಪ್ಪಣ್ಣ

Dailyhunt
Disclaimer: This content has not been generated, created or edited by Dailyhunt. Publisher: BC Suddi