Sunday, 25 Apr, 12.03 pm ಬಿಸಿ ಸುದ್ದಿ

ಹೋಂ
ವೀಕೆಂಡ್ ಕರ್ಫ್ಯೂ: ಬೆಂಗಳೂರಿನಲ್ಲಿ ವಶಕ್ಕೆ ಪಡೆದ ವಾಹನಗಳೆಷ್ಟು ಗೊತ್ತೇ?

ಬೆಂಗಳೂರು: ವೀಕೆಂಡ್ ಕರ್ಫ್ಯೂನ ಮೊದಲ ದಿನವಾದ ಶನಿವಾರ(ಎ.24) ಬೆಂಗಳೂರು ನಗರದಲ್ಲಿ ಕರ್ಫ್ಯೂ ಉಲ್ಲಂಘನೆಗೆ ಸಂಬಂಧಿಸಿ ಒಟ್ಟು 1265 ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಲಾಗಿದ್ದು, ಶನಿವಾರ ಬೆಂಗಳೂರು ನಗರದಲ್ಲಿ ಕರ್ಫ್ಯೂ ಸಮಯದಲ್ಲಿ ಬೆಳಗ್ಗೆ 10ರಿಂದ ರಾತ್ರಿ 8 ಗಂಟೆಯವರೆಗೆ 1,142 ದ್ವಿಚಕ್ರ, 48 ತ್ರಿಚಕ್ರ ಮತ್ತು 75 ಚತುಷ್ಕಕ್ರದ ವಾಹನಗಳು ಸೇರಿ ಒಟ್ಟು1,265 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಕೇಂದ್ರ-6, ಪಶ್ಚಿಮ-9, ಮತ್ತು ಆಗ್ನೇಯ ವಿಭಾಗ-8 ಸೇರಿ ಒಟ್ಟು 23 ಎನ್.ಡಿ.ಎಂ.ಎ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಹೇಳಲಾಗಿದೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: BC Suddi
Top