Wednesday, 27 Jan, 12.56 pm ಬಿಸಿ ಸುದ್ದಿ

ರಾಷ್ಟ್ರೀಯ ಸುದ್ದಿ
ವಿಶ್ವದಾದ್ಯಂತ ಕೊರೋನಾ ಸೋಂಕಿತರ ಸಂಖ್ಯೆ 10 ಕೋಟಿ ದಾಟಿದೆ..!ವಿಶ್ವದಾದ್ಯಂತ ಕೊರೋನಾ ಸೋಂಕಿತರ ಸಂಖ್ಯೆ 10 ಕೋಟಿ ದಾಟಿದೆ..!

ವಾಷಿಂಗ್ಟನ್; ವಿಶ್ವದಾದ್ಯಂತ ಮಹಾಮಾರಿ ಕೊರೊನ ಸೋಂಕಿನ ವಿರುದ್ಧ ಲಸಿಕಾ ಅಭಿಯಾನ ಪ್ರಾರಂಭವಾಗಿದ್ದರೂ ಸೋಂಕಿತರ ಸಂಖ್ಯೆ 10 ಕೋಟಿ ದಾಟಿದೆ. ಜಾಗತಿಕವಾಗಿ ಕೊರೊನ ಸೋಂಕಿತರ ಸಂಖ್ಯೆ 10ಕೋಟಿ ದಾಟಿದ್ದು, ಸುಮಾರು 2,151,242 ಜನರು ಬಲಿ ಪಡದಿದೆ ಎಂದು ರಾಷ್ಟ್ರೀಯ ಆರೋಗ್ಯ ಸಂಸ್ಥೆ ಮಾಹಿತಿ ನೀಡಿದೆ.

2019 ರಲ್ಲಿ ಚೀನಾದಲ್ಲಿ ಕಾಣಿಸಿಕೊಂಡ ಕೊರೊನ ಸೋಂಕು 2020 ರ ಆರಂಭದ ವೇಳೆಗೆ ಪ್ರಪಂಚದ ಇತರೆ ದೇಶಗಳಿಗೆ ಹರಡಿತ್ತು. ಸೋಂಕಿಗೆ ಒಳಗಾದ ಬಹುಪಾಲು ಜನರು ಒಂದು ವಾರ ಅಥವಾ ತಿಂಗಳುಗಳವರೆಗೆ ರೋಗಲಕ್ಷಣಗಳಿಂದ ಬಳಲುತ್ತಿದ್ದು, ಬೇರೆ ರೋಗದಿಂದ ಭಾದಿಸುತ್ತಿರುವ ಈ ಸೋಂಕಿಗೆ ಬಲಿಯಾಗುತ್ತಿದ್ದಾರೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: BC Suddi
Top