Tj Vision Media

@chief394003162762379

09 Dec 2022.12:23 PM

2.3k Views

ಪರಿಕ್ರಮ ಚಾಂಪಿಯನ್ ಲೀಗ್ ಮತ್ತೆ ಆಗಮಿಸುತ್ತಿದೆ. ಇದು ಹತ್ತನೆಯ ವರ್ಷದ ಅವತರಿಣಿಕೆ ಕೆ.ಎಸ್.ಇ ಎಫ್ ಕಾಲ್ಚೆಂಡು ಕ್ರೀಡಾಂಗಣ, ಬೆಂಗಳೂರು. ಗೋವಾ, ಹೈದರಾಬಾದ್ ಸೇರಿದಂತೆ 16 ತಂಡಗಳು ಭಾಗವಹಿಸುತ್ತಿವೆ. ದಿನಾಂಕಗಳು ಡಿಸೆಂಬರ್ ತಿಂಗಳ 11, 12 ಮತ್ತು 13 . ಬಹಳ ವರ್ಷಗಳಿಂದಲೂ ಪರಿಕ್ರಮ ಚಾಂಪಿಯನ್ ಲೀಗನ್ನು ಸಂಘಟಿಸಿಕೊಂಡು ಬರಲಾಗುತ್ತಿದೆ.ಹಳೆಯ ಕಂದಚಾರಗಳಿಂದ ಹೊರಬಂದು ಮಕ್ಕಳಿಗೆ ಒಳ್ಳೆಯ ಮಟ್ಟದ ಆಟದ ಮೈದಾನವನ್ನು ಒದಗಿಸಿಕೊಟ್ಟಿದ್ದೇವೆ. ಎಲ್ಲರೂ ಒಟ್ಟಿಗೆ ಸೇರಿ ಕಾಲ್ಚೆಂಡು ಆಟವನ್ನು ಆನಂದಿಸುವ ಅವಕಾಶವನ್ನು ಸೃಷ್ಟಿಸಿದ್ದೇವೆ. ಶಾಲೆಯಲ್ಲಿ ಶುರುವಾದ ಈ ಆಟ ಇಂದು ಕರ್ನಾಟಕ ಕಲ್ಲ್ಚೆಂದು ಸಂಸ್ಥೆ ಹಾಗೂ ಅಖಿಲ ಭಾರತ ಕಾಲ್ಚೆಂಡು ಫೆಡರೇಶನ್ ಗಳು ಗುರುತಿಸುವ ಮಟ್ಟಕ್ಕೆ ಬೆಳೆದಿದೆ ಎಂದರೆ ಅತಿಶಯೋಕ್ತಿಯಾಗಲಾರದು.. ಹದಿನಾರು ವರ್ಷದ ಒಳಗಿನ ಅತ್ಯುತ್ತಮ ತಂಡ ಇದಾಗಿದೆ ಎಂದು ಹೇಳಲು ಹೆಮ್ಮೆ ಎನಿಸುತ್ತದೆ. ‘ಸಮಾನತೆಯ ಕಪ್’ ಗಾಗಿ ಹದಿನಾರು ತಂಡಗಳ ನಡುವೆ ಹೋರಾಟ ನಡೆಯಲಿದೆ. ಪ್ರತಿ ವರ್ಷದಂತೆ ಈ ವರ್ಷವೂ ಅತ್ಯುತ್ತಮ ಅನುಕೂಲಗಳನ್ನು ಹೊಂದಿರುವ ಕಾಲ್ಚೆಂಡು ಕ್ರೀಡಾಂಗಣದಲ್ಲಿ ಈ ಚಾಂಪಿಯನ್ ಲೀಗನ್ನು ನಡೆಸಲಾಗುವುದು. ಇಲ್ಲಿ ಎಲ್ಲ ರೀತಿಯ ಅನುಕೂಲಗಳು ಇರುತ್ತವೆ. ಎಲೆಕ್ಟ್ರಾನಿಕ್ ಅಂಕ ಪಟ್ಟಿ, ಕೃತಕ ಹುಲ್ಲು ಹಾಸು, ಆಟಗಾರರ ಚಾವಡಿ, ಪಂದ್ಯ ನಡೆಯುವ ಮೂರು ದಿನಗಳೂ ತುರ್ತು ವಾಹನದ ವ್ಯವಸ್ಥೆಗಳನ್ನು ಒದಗಿಸಲಾಗಿದೆ.

ಅನೇಕ ಯಶಸ್ವಿ ವರ್ಷಗಳು ಸಂದು ಹೋಗಿವೆ. ಇದನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಹೆಮ್ಮೆಯಾಗುತ್ತಿದೆ. ಪರಿಕ್ರಮ ಬಾಲಕಿಯರ ಕಾಲ್ಚೆಂಡು ತಂಡವೂ ಸಹ ಅಧ್ಬುತವಾಗಿ ರೂಪುಗೊಂಡಿದೆ. ಈ ವರ್ಷ ದೇಶದ ಅನೇಕ ಕಾಲ್ಚೆಂಡು ತಂಡಗಳು ನಮ್ಮ ‘ಕಾಲ್ಚೆಂಡು ಕ್ಲಬ್’ ಗೆ ಸೇರಿಕೊಂಡಿವೆ.

ನಮ್ಮ ಅನೇಕ ಹಳೆಯ ವಿದ್ಯಾರ್ಥಿಗಳು ಉತ್ತಮ ಕ್ರೀಡಾ ತರಬೇತಿ ನೀಡುವ ಕೇಂದ್ರಗಳಲ್ಲಿ ನೋಂದಣಿ ಮಾಡಿಕೊಂಡು ತಾವೇ ಸ್ವತಃ ತರಬೇತಿ ನೀಡುವ ಮಟ್ಟಕ್ಕೆ ಬೆಳೆದಿದ್ದಾರೆ. ಕೆಲವು ಹಳೆಯ ವಿದ್ಯಾರ್ಥಿಗಳು ತಾವೇ ಸ್ವತಹ ಕ್ರೀಡಾ ನಿರ್ವಹಣಾ ಕಂಪನಿಯಾದ ‘ರಾಪ್ಟ್ ಸ್ಪೋರ್ಟ್ಸ್’ ಎಂಬ ಸಂಸ್ಥೆಯನ್ನು ಬೆಂಗಳೂರಿನಲ್ಲಿ ತೆರೆದು ಅದರಲ್ಲಿ B ಮತ್ತು C ಪ್ರಶಸ್ತಿ ಪತ್ರವನ್ನು ಪಡೆದಿರುತ್ತಾರೆ. ನಮ್ಮ ಹಳೆಯ ವಿದ್ಯಾರ್ಥಿಯಾದ ಮೈರಬ (ಟೈಕ್ವಾಂಡೋ ಮತ್ತು ಕಾಲ್ಚೆಂಡು ಆಟಗಾರ) ಫಿಟ್ನೆಸ್ ಸ್ಟುಡಿಯೋವನ್ನು ಪ್ರಾರಂಭಿಸಿರುತ್ತಾನೆ. 2022 ರಲ್ಲಿ ಕಾಲ್ಚೆಂಡು ಚಾಂಪಿಯನ್ ಲೀಗ್ ನಲ್ಲಿ ಏನೇನು ನಿರೀಕ್ಷಿಸಬಹುದು?

ತರಬೇತುದಾರರ ಪ್ರತಿಜ್ಞೆ – ಎಲ್ಲ ತರಬೇತುದಾರರು ಸೇರಿ ಉತ್ತಮವಾದ ಆಟ ನಡೆಸುವ ಪ್ರತಿಜ್ಞೆಯನ್ನು ಮಾಡುವುದು. ಬಾಲಕರು ಮತ್ತು ಬಾಲಕಿಯರ ವಿಶೇಷ ಪ್ರದರ್ಶನಾ ಪಂದ್ಯವನ್ನು ಏರ್ಪಾಟು ಮಾಡಿರುವುದು. ವೃತ್ತಿಪರ ಆಟಗಾರರ ವಿಶೇಷ ಚಾವಡಿಯನ್ನು ನಿರ್ಮಿಸಿ ಅದರಿಂದ ಕಿರಿಯ ಆಟಗಾರರು ಹೆಮ್ಮೆಯಿಂದ ನಡೆದುಹೋಗುವಾಗ ಜನರು ಒಕ್ಕೊರಲಿನಿಂದ ಸ್ವಾಗತಿಸುವ ವ್ಯವಸ್ಥೆ ಮಾಡಿರುವುದು. ಅಧ್ಬುತ ವೈಯುಕ್ತಿಕ ಸಾಧನೆ ಮಾಡಿದ ಆಟಗಾರರನ್ನು ಗುರುತಿಸಿ ಅವರಿಗೆ ಪ್ರಶಸ್ತಿ ನೀಡುವುದು.

ಫೈನಲ್ ಪಂದ್ಯದ ಮೊದಲು ಪ್ರದರ್ಶನ ಪಂದ್ಯವನ್ನು ಏರ್ಪಡಿಸಿರುವುದು. ಸ್ಥಳದಲ್ಲಿರುವ ಆಯ್ಕೆಗಾರರು ಕೈಶಲ್ಯವುಳ್ಳ ಉತ್ತಮ ಆಟಗಾರನ್ನು ಗುರುತಿಸಿ ಆಯ್ಕೆ ಮಾಡಿ ‘ಪರಿಕ್ರಮ ಆಲ್ ಸ್ಟಾರ್’ ತಂಡವನ್ನು ರಚಿಸಿ, ಅದರೊಂದಿಗೆ ಬೆಂಗಳೂರಿನ ಪ್ರತಿಷ್ಟಿತ ಕಂಪನಿಗಳ CEO ಗಳ ತಂಡದೊಂದಿಗೆ 20 ನಿಮಿಷದ ಒಂದು ಪ್ರದರ್ಶನ ಪಂದ್ಯವನ್ನು ಆಡಿಸುವುದು. ಆಟದ ಮಟ್ಟವನ್ನು ಎತ್ತರಿಸಲು ಈ ಬಾರಿ 20-20 ನಿಮಿಷದ ಎರಡು ಭಾಗದ ಪಂದ್ಯಗಳನ್ನು ಆಡಿಸಲಾಗುವುದು ಮತ್ತು ಸೆಮಿ -ಫೈನಲ್ ಪಂದ್ಯವನ್ನು 25 - 25 ನಿಮಿಷದ ಭಾಗವಾಗಿ ಆಡಿಸುವುದು ಮತ್ತು ಫೈನಲ್ ಪಂದ್ಯವನ್ನು 30 – 30 ನಿಮಿಷದ ಭಾಗವಾಗಿ ಆಡಿಸುವುದು. “ಪ್ರತಿ ವರ್ಷವೂ ನಾವು ಬೆಳೆಯುತ್ತಿದ್ದೇವೆ, ವಿಕಾಸ ಹೊಂದುತ್ತಿದ್ದೇವೆ.

ಇದರೊಂದಿಗೆ PCL ನ್ನು ಬೆಂಗಳೂರು ನಗರದಲ್ಲಿ ಒಂದು ಅತ್ಯುತ್ತಮ ಕಾಲ್ಚೆಂಡು ಟೂರ್ನಮೆಂಟ್ ಮಾಡಲು ಅವಿರತ ಶ್ರಮಿಸುತ್ತಿದ್ದೇವೆ. ಈ ಒಂದು ಅವಕಾಶವನ್ನು ಬಳಸಿಕೊಂಡು ಉತ್ಸಾಹ ಮತ್ತು ಆನಂದಭರಿತ ಆಟವನ್ನು ಸೃಷ್ಟಿ ಮಾಡಲಾಗುವುದು. ಸಮಾನತೆಗಾಗಿ ಶಾಲೆಗಳಲ್ಲಿ ಕ್ರೀಡೆಯ ಪ್ರಾಮುಖ್ಯತೆ ಮತ್ತು ಅನುಕೂಲಗಳ ಬಗ್ಗೆ ಬೆಳಕು ಚೆಲ್ಲುವ ಕಾರ್ಯ ಮಾಡಲಾಗುತ್ತಿದೆ. ಇದನ್ನು ‘ಸಮಾನತೆಯ ಕಪ್’ ಎಂದು ಪ್ರತಿ ವರ್ಷವೂ ಕರೆಯಬಹುದು” ಎಂದು ಸಂಸ್ಥೆಯ CEO ಶ್ರೀಮತಿ ಶುಕ್ಲಬೋಸ್ ಹೇಳಿದ್ದಾರೆ.

ನಮಗೆ ಎಲ್ಲ ರೀತಿಯ ಸಹಕಾರ ಮತ್ತು ನೆರವು ನೀಡಿದ ಕರ್ನಾಟಕ ಕಾಲ್ಚೆಂಡು ಸಂಸ್ಥೆ ಮತ್ತು ಬೆಂಗಳೂರು ಕಾಲ್ಚೆಂಡು ಸಂಸ್ಥೆಗಳಿಗೆ ನಾವು ಧನ್ಯವಾದ ಹೇಳುತ್ತಿದ್ದೇವೆ. ಇದರೊಂದಿಗೆ ನಮಗೆ ಮುಖ್ಯವಾಗಿ ನೆರವಾಗಿ ನಿಂತ ಪ್ಲೇಟೋ, ಇನ್ವೆಂಚರ್ ಅಕ್ಯಾಡೆಮಿ, ಎಂಬಸಿ, ಐಡೆoಟಿಟಿ ಮತ್ತು ರಾಪಿಡ್ ಸ್ಪೋರ್ಟ್ಸ್ ಫಿಟ್ನೆಸ್ ಇವರಿಗೆ ಧನ್ಯವಾದ ತಿಳಿಸಲು ಬಯಸುತ್ತೇವೆ. ಕಾರ್ಯಕ್ರಮ: ಪರಿಕ್ರಮ ಚಾಂಪಿಯನ್ ಲೀಗ್ (PCL) ೨೦೨೨ ಯಾವಾಗ: 11, 12 13 ಡಿಸೆಂಬರ್ ೨೦೨೨ ಎಲ್ಲಿ: ಬೆಂಗಳೂರು ಕಾಲ್ಚೆಂಡು ಕ್ರೀಡಾಂಗಣ. ಅಶೋಕನಗರ.

ಪರಿಕ್ರಮ ಹ್ಯುಮಾನಿಟಿ ಫೌಂಡೆಶನ್ ಬಗ್ಗೆ ( www.parikrmafoundation.org) (Tj vision media - 9341997936)
Disclaimer

Disclaimer

This content has been published by the user directly on Dailyhunt, an intermediary platform. Dailyhunt has neither reviewed nor has knowledge of such content. Publisher: Tj Vision Media