“ಪ್ರತಿ ವರ್ಷವೂ ನಾವು ಬೆಳೆಯುತ್ತಿದ್ದೇವೆ, ವಿಕಾಸ ಹೊಂದುತ್ತಿದ್ದೇವೆ.
ಇದರೊಂದಿಗೆ PCL ನ್ನು ಬೆಂಗಳೂರು ನಗರದಲ್ಲಿ ಒಂದು ಅತ್ಯುತ್ತಮ ಕಾಲ್ಚೆಂಡು ಟೂರ್ನಮೆಂಟ್ ಮಾಡಲು ಅವಿರತ ಶ್ರಮಿಸುತ್ತಿದ್ದೇವೆ. ಈ ಒಂದು ಅವಕಾಶವನ್ನು ಬಳಸಿಕೊಂಡು ಉತ್ಸಾಹ ಮತ್ತು ಆನಂದಭರಿತ ಆಟವನ್ನು ಸೃಷ್ಟಿ ಮಾಡಲಾಗುವುದು. ಸಮಾನತೆಗಾಗಿ ಶಾಲೆಗಳಲ್ಲಿ ಕ್ರೀಡೆಯ ಪ್ರಾಮುಖ್ಯತೆ ಮತ್ತು ಅನುಕೂಲಗಳ ಬಗ್ಗೆ ಬೆಳಕು ಚೆಲ್ಲುವ ಕಾರ್ಯ ಮಾಡಲಾಗುತ್ತಿದೆ. ಇದನ್ನು ‘ಸಮಾನತೆಯ ಕಪ್’ ಎಂದು ಪ್ರತಿ ವರ್ಷವೂ ಕರೆಯಬಹುದು” ಎಂದು ಸಂಸ್ಥೆಯ CEO ಶ್ರೀಮತಿ ಶುಕ್ಲಬೋಸ್ ಹೇಳಿದ್ದಾರೆ.
ನಮಗೆ ಎಲ್ಲ ರೀತಿಯ ಸಹಕಾರ ಮತ್ತು ನೆರವು ನೀಡಿದ ಕರ್ನಾಟಕ ಕಾಲ್ಚೆಂಡು ಸಂಸ್ಥೆ ಮತ್ತು ಬೆಂಗಳೂರು ಕಾಲ್ಚೆಂಡು ಸಂಸ್ಥೆಗಳಿಗೆ ನಾವು ಧನ್ಯವಾದ ಹೇಳುತ್ತಿದ್ದೇವೆ. ಇದರೊಂದಿಗೆ ನಮಗೆ ಮುಖ್ಯವಾಗಿ ನೆರವಾಗಿ ನಿಂತ ಪ್ಲೇಟೋ, ಇನ್ವೆಂಚರ್ ಅಕ್ಯಾಡೆಮಿ, ಎಂಬಸಿ, ಐಡೆoಟಿಟಿ ಮತ್ತು ರಾಪಿಡ್ ಸ್ಪೋರ್ಟ್ಸ್ ಫಿಟ್ನೆಸ್ ಇವರಿಗೆ ಧನ್ಯವಾದ ತಿಳಿಸಲು ಬಯಸುತ್ತೇವೆ. ಕಾರ್ಯಕ್ರಮ: ಪರಿಕ್ರಮ ಚಾಂಪಿಯನ್ ಲೀಗ್ (PCL) ೨೦೨೨ ಯಾವಾಗ: 11, 12 13 ಡಿಸೆಂಬರ್ ೨೦೨೨ ಎಲ್ಲಿ: ಬೆಂಗಳೂರು ಕಾಲ್ಚೆಂಡು ಕ್ರೀಡಾಂಗಣ. ಅಶೋಕನಗರ.
ಪರಿಕ್ರಮ ಹ್ಯುಮಾನಿಟಿ ಫೌಂಡೆಶನ್ ಬಗ್ಗೆ (
www.parikrmafoundation.org) (Tj vision media - 9341997936)