Thursday, 17 Sep, 9.53 pm Cinisuddi

ಪ್ರಮುಖ ಸುದ್ದಿಗಳು
ಡಿ.ಎಸ್ ಮ್ಯಾಕ್ಸ್ ನಿಂದ ಕೊರೋನ ಕುರಿತಾದ 'ಭೂಮಿ ಬದಲಾಗಿಲ್ಲ, ದೈವ ಕೈಬಿಟ್ಟಿಲ್ಲ' ಹಾಡು ಬಿಡುಗಡೆ.

ಕೊರೋನ ಹಾವಳಿಯಿಂದ ಈ ವರ್ಷ ಸಂಕಷ್ಟ ಒಳಗಾಗಿರುವ ಸಂಖ್ಯೆ ಬಹಳ. ಇತ್ತೀಚೆಗಂತೂ ಕೊರೋನ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಹಾಗೆ ಅದೇ ಸಂಖ್ಯೆಯಲ್ಲಿ ಗುಣಮುಖರಾಗುತ್ತಿದ್ದಾರೆ. ನಾವು ಜಾಗರೂಕತೆಯಿಂದ ಇರಬೇಕು . ಆಗ ಯಾವುದನ್ನು ಧೈರ್ಯವಾಗಿ ಎದುರಿಸಬಹುದು.

ಈ ನಿಟ್ಟಿನಲ್ಲಿ ಡಿ.ಎಸ್ ಮ್ಯಾಕ್ಸ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ॥ ಎಸ್.ಪಿ ದಯಾನಂದ್ ರವರು ಸಹ "ಭೂಮಿ ಬದಲಾಗಿಲ್ಲ, ದೈವ ಕೈಬಿಟ್ಟಿಲ್ಲ" ಎಂಬ ಹಾಡನ್ನು ನಿರ್ಮಾಣ ಮಾಡಿದ್ದಾರೆ. ಉತ್ಸಾಹಿ ಕಲಾವಿದರಿಗೆ ಪ್ರತಿಭಾವಂತರಿಗೆ ಅವಕಾಶ ನೀಡಿ ಸಾರ್ವಜನಿಕರಿಗೆ ಡಿಎಕ್ಸ್ ಮ್ಯಾಕ್ಸ್ ಡಾ॥ ಎಸ್. ಪಿ. ದಯಾನಂದ್ ರವರು ಭೂಮಿ ಬದಲಾಗಿಲ್ಲ ದೈವ ಕೈಬಿಟ್ಟಿಲ್ಲ ಎಂಬ ಹಾಡನ್ನು ನಿರ್ಮಿಸಿ ಧೈರ್ಯ ಮತ್ತು ಉತ್ಸಾಹವನ್ನು ತುಂಬಿದ್ದಾರೆ.

ಈ ಹಾಡನ್ನು ಅಭಿಲಾಷ್ ಜಿ.ವಿ ಬರೆದು, ಹಾಡಿದ್ದಾರೆ. ನಿರ್ದೇಶನ ಕೂಡ ಅಭಿಲಾಷ್ ಅವರದೆ. ಈ ಹಾಡಿನಲ್ಲಿ ವರನಟ ಡಾ. ರಾಜ್​ಕುಮಾರ್, ಡಾ||ವಿಷ್ಣುವರ್ಧನ್, ಕರಾಟೆ ಕಿಂಗ್ ಶಂಕರ್ ನಾಗ್, ರೆಬೆಲ್ ಸ್ಟಾರ್ ಅಂಬರೀಶ್​ ಅವರ ಧ್ವನಿ ಅನುಕರಣೆ ಮಾಡುವ ಮೂಲಕ ಕೋರೋನಾ ಬಗ್ಗೆ ಅಭಿಲಾಷ್ ಎಚ್ಚರಿಸಿದ್ದಾರೆ.

ಈ ಹಾಡಿಗೆ ಅನಂತ್ ಆರ್ಯನ್ ಅವರು ಎಲ್ಲ ವರ್ಗದ ಜನರಿಗೂ ಇಷ್ಟವಾಗುವಂತೆ ಸಂಗೀತ ಸಂಯೋಜಿಸಿದ್ದಾರೆ. ಧ್ವನಿ ಗ್ರಹಣದಲ್ಲಿ ರಾಜ್ಯ ಪ್ರಶಸ್ತಿ ವಿಜೇತರಾದ ಪಳನಿ ಡಿ ಸೇನಾಪತಿ ರವರು ಮಾಸ್ಟರಿಂಗ್ ಮಿಕ್ಸಿಂಗ್ ಮಾಡಿದ್ದಾರೆ.

ಛಾಯಾಗ್ರಹಣ ಪ್ರಶಾಂತ್ ಎಮ್ ಯಾದವ್, ಸಂಕಲನ ರಾಘವೇಂದ್ರ ಕೆ.ಆರ್ , ವಿ ಎಫ್‌ಎಕ್ಸ್ ಮತ್ತು ಕಲರಿಂಗ್ ಕೀ ಲೈಟ್ಸ್ ಸಂಸ್ಥೆಯ
ಮಂಜು ಕೆಬಿ ,ಅನಿಲ್ ಸಾಗರ್ ,ಸಂಗಮೇಶ್ ವಾಲೆ ಮಾಡಿದ್ದಾರೆ
ಬೆಂಗಳೂರು ನಿರ್ಗಮಿತ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಬೆಂಗಳೂರು ನಗರ ಪೊಲೀಸ್ ಉಪ ಆಯುಕ್ತರಾದ ಕೆ. ರಾಮಚಂದ್ರ ಹಾಗೂ ಡಿಎಸ್ ಮ್ಯಾಕ್ಸ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ॥ ಎಸ್ ಪಿ ದಯಾನಂದ್ ರವರು ಅಭಿಲಾಶ್ ಅವರ ಈ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಭೂಮಿ ಬದಲಾಗಿಲ್ಲ ದೈವ ಕೈ ಬಿಟ್ಟಿಲ್ಲ ಹಾಡಿನ ಪೋಸ್ಟರನ್ನು ಬೆಂಗಳೂರು ನಗರ ಪೊಲೀಸ್‌ ಕೇಂದ್ರ ಕಛೇರಿಯಲ್ಲಿ ಉಪ ಕಮಿಷನರ್ ಕೆ .ರಾಮಚಂದ್ರ ಮತ್ತು ಅಸಿಸ್ಟೆಂಟ್ ಕಮೀಷನರ್ ಆದ ಅಜಯ್ ಕುಮಾರ್ ರವರ ನೇತೃತ್ವದಲ್ಲಿ ಹಾಡಿನ ಪೋಸ್ಟರ್ ಬಿಡುಗಡೆ ಮಾಡಲಾಯಿತು ..
ಹಾಡಿನ ಬಿಡುಗಡೆಗೂ ಮುನ್ನ ಮಾತನಾಡಿದ ಡಾಕ್ಟರ್ ಎಸ್ಪಿ ದಯಾನಂದ್ ರವರು ನಮ್ಮ ಹಾಡಿನ ಶೀರ್ಷಿಕೆ ಹೇಳುವ ರೀತಿ ಕೊರೊನಾದಿಂದ "ಭೂಮಿ ಬದಲಾಗಿಲ್ಲ, ದೈವ ಕೈಬಿಟ್ಟಿಲ್ಲ "

ಎಲ್ಲರೂ ಧೈರ್ಯ ,ಉತ್ಸಾಹ ಮತ್ತು ಆತ್ಮ ವಿಶ್ವಾಸದಿಂದ ನಡೆದು ಕೊರೊನಾಗೆ ಎಚ್ಚರ ವಹಿಸಿ ಕೊರೊನಾದಿಂದ ಭಯಮುಕ್ತರಾಗಿ ಎಂದು ಹೇಳುದ್ದಾರೆ. A2 Music ಯೂಟ್ಯೂಬ್ ಚಾನೆಲ್ ನಲ್ಲಿ ಹಾಡು ಬಿಡುಗಡೆಯಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಅಪಾರ ಸಂಖ್ಯೆಯಲ್ಲಿ ವೀಕ್ಷಣೆಯಾಗಿದ್ದು, ನೋಡುಗರ ಮೆಚ್ಚುಗೆಗೆ ಪಾತ್ರವಾಗಿದೆ. ಈ ವರ್ಷದಲ್ಲಿ ನಾನು ಕೇಳಿದ ಅತ್ಯುತ್ತಮವಾದ ಹಾಡು ನಮ್ಮ "ಭೂಮಿ ಬದಲಾಗಿಲ್ಲ ,ದೈವ ಕೈ ಬಿಟ್ಟಿಲ್ಲ" ಎಂಬುದು ಎಸ್ ಪಿ ದಯಾನಂದ್ ಅವರ ಅಭಿಪ್ರಾಯ.

ಹಾಡಿನ ಸಂಗೀತ ನಿರ್ದೇಶಕರಾದ ಅನಂತ್ ಆರ್ಯನ್ ರವರು ಸಹ ತಮ್ಮ ಅಭಿಪ್ರಾಯ ತಿಳಿಸಿ ಸಾಹಿತ್ಯ ಸನ್ನಿವೇಶಗಳಿಗೆ ಸೂಕ್ತವಾಗಿ ಇದೆ ಎಂದು ಹೇಳುತ್ತ ನಿರ್ಮಾಪಕರು ನೀಡಿದ ಪ್ರೋತ್ಸಾಹವನ್ನು ಮತ್ತೊಮ್ಮೆ ನೆನೆದು ಸಂಪೂರ್ಣ ತಂಡದ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ..

ಈ ಹಾಡಿನ ನಿರ್ದೇಶಕ ಅಭಿಲಾಷ್ ರವರು ಮಾತನಾಡಿ
ಕೊರೊನ ಹಾಡಿನ ಮೂಲಕ ಸಾಹಿತ್ಯ ಬರೆದು ನಿರ್ದೇಶನ ಮಾಡಲು ಮೊದಲ ಬಾರಿಗೆ ಅವಕಾಶ ಕೊಟ್ಟಂತಹ ಹಾಡಿನ ನಿರ್ಮಾಪಕರಾದ ಡಾ॥ ಎಸ್ ಪಿ ದಯಾನಂದರವರಿಗೆ ಹೃದಯಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ, ಜೊತೆಗೆ ಸಂಗೀತ ನಿರ್ದೇಶಕರದ ಅನಂತ್ ಆರ್ಯನ್ ರವರಿಗೂ ಮತ್ತು ಉಳಿದ ಎಲ್ಲಾ ತಜ್ಞರಿಗೂ ಧನ್ಯವಾದಗಳನ್ನು ತಿಳಿಸಿದ್ದಾರೆ.

ನಾವು ಮುನ್ನೆಚರಿಕೆಯಿಂದ ಇದ್ದರೆ ಕೊರೊನಾವನ್ನು ಹೋಗಲಾಡಿಸುವುದು ಕಷ್ಟದ ಕೆಲಸವೇನಲ್ಲ ಎಂಬುದು ಈ ಹಾಡಿನ ಸಾರಾಂಶ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Cinisuddi
Top