Wednesday, 16 Sep, 7.43 pm CLN Multimedia News

Posts
ನಟಿ ಸಂಜನಾ ಗಲ್ರಾನಿಗೆ ಎರಡು ದಿನ ನ್ಯಾಯಾಂಗ ಬಂಧನ

ಬೆಂಗಳೂರು, ಸೆ.16: ಸ್ಯಾಂಡಲ್‍ವುಡ್ ಡ್ರಗ್ಸ್ ಆರೋಪ ಪ್ರಕರಣ ಸಂಬಂಧ ಸಂಜನಾ ಗಲ್ರಾನಿಗೆ ಸೆ.18ರವರೆಗೆ ನ್ಯಾಯಾಂಗ ಬಂಧನಕ್ಕೆ ವಿಧಿಸಿ ನಗರದ 1ನೆ ಎಸಿಎಂಎಂ ಕೋರ್ಟ್ ಆದೇಶಿಸಿದೆ.

ಸ್ಯಾಂಡಲವುಡ್‍ಗೆ ಡ್ರಗ್ಸ್ ಜಾಲದ ನಂಟಿನ ಆರೋಪ ಕೇಸ್ ವಿಚಾರವಾಗಿ ವಿಚಾರಣೆ ನಡೆಸಿದ 1ನೇ ಎಸಿಎಂಎಂ ಕೋರ್ಟ್ ಜಡ್ಜ್ ನಟಿ ಸಂಜನಾ ಗಲ್ರಾನಿಗೆ ಸೆ.18ವರೆಗೂ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಿದೆ.

ಡ್ರಗ್ಸ್​ ಪೆಡ್ಲರ್​ ರಾಹುಲ್​, ಸಂಜನಾರ ರಾಖಿ ಬ್ರದರ್​. ಡ್ರಗ್ಸ್​ ಮಾಫಿಯಾದ ಪ್ರಮುಖ ಆರೋಪಿ ಕ್ಯಾಸಿನೋ ಶೇಖ್​ ಫಾಝಿಲ್​ನ ಪಾರ್ಟಿಗಳಲ್ಲಿ ಸಂಜನಾ ಪಾಲ್ಗೊಂಡಿದ್ದರು. ಡ್ರಗ್ಸ್​ ದಂಧೆಗೂ ಸಂಜನಾಗೂ ಲಿಂಕ್​ ಇರುವ ಹಾಗೂ ಡ್ರಗ್ಸ್ ಕೇಸ್​ನ ಇತರ ಆರೋಪಿಗಳ ಹೇಳಿಕೆ ಮೇರೆಗೆ ಗಲ್ರಾನಿಯನ್ನು ಸಿಸಿಬಿ ಬಂಧಿಸಿದೆ.

ಬುಧವಾರ ಸಿಸಿಬಿ ಪೊಲೀಸರು ಸಂಜನಾ ಗಲ್ರಾನಿಯನ್ನು ವಶಕ್ಕೆ ಕೇಳಲಿಲ್ಲ. ಸಂಜನಾ ಜೊತೆ ಇಂದು ನ್ಯಾಯಾಲಯದ ಮುಂದೆ ವಿರೇನ್ ಖನ್ನಾ, ರವಿಶಂಕರ್‌ ಹಾಜರುಪಡಿಸಲಾಗಿತ್ತು. ಆರೋಪಿಗಳನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: CLN Multimedia News
Top