Dailyhunt
ಮೊಬೈಲ್‌ನಲ್ಲಿ OTT ಕಾರ್ಯಕ್ರಮಗಳನ್ನು ವೀಕ್ಷಿಸುವ ಗ್ರಾಹಕರಿಗೆ Jio ಟೆಲಿಕಾಂನ ಈ ಅಗ್ಗದ ಪ್ಲಾನ್ ಬೆಸ್ಟ್‌!

ಮೊಬೈಲ್‌ನಲ್ಲಿ OTT ಕಾರ್ಯಕ್ರಮಗಳನ್ನು ವೀಕ್ಷಿಸುವ ಗ್ರಾಹಕರಿಗೆ Jio ಟೆಲಿಕಾಂನ ಈ ಅಗ್ಗದ ಪ್ಲಾನ್ ಬೆಸ್ಟ್‌!

Digit 1 week ago

ಲೀಡಿಂಗ್ ಟೆಲಿಕಾಂ ಎನಿಸಿರುವ ರಿಲಾಯನ್ಸ್‌ Jio ಮಾರುಕಟ್ಟೆಯಲ್ಲಿ ವಿ ಹಾಗೂ ಏರ್‌ಟೆಲ್‌ ಕಂಪನಿಗಳಿಗೆ ಪೈಪೋಟಿ ನೀಡುತ್ತಾ ಸಾಗಿದೆ. ಜಿಯೋ ಟೆಲಿಕಾಂ ಭಿನ್ನ ಬೆಲೆಯಲ್ಲಿ ಹಲವು ರೀಚಾರ್ಜ್‌ ಯೋಜನೆಗಳನ್ನು ಪರಿಚಯಿಸುವ ಮೂಲಕ ಗ್ರಾಹಕರಿಗೆ ಆಪ್ತ ಎನಿಸಿದೆ. ಇನ್ನು ಸಂಸ್ಥೆಯ ಕೆಲವು ಯೋಜನೆಗಳು ಅಗ್ಗದ ದರದಲ್ಲಿ ಗಮನ ಸೆಳೆದಿದ್ದರೆ ಮತ್ತೆ ಕೆಲವು ಪ್ಲಾನ್‌ಗಳು ಆಕರ್ಷಕ ಪ್ರಯೋಜನಗಳ ಮೂಲಕ ಸದ್ದು ಮಾಡಿವೆ.

ಆ ಪೈಕಿ ಜಿಯೋ ಟೆಲಿಕಾಂನ 500 ರೂ.ಗಳ ಬೆಲೆಯ ಪ್ರೀಪೇಯ್ಡ್‌ ರೀಚಾರ್ಜ್‌ ಪ್ಲಾನ್‌ ಹೆಚ್ಚು ಆಕರ್ಷಕವಾಗಿ ಕಾಣಿಸಿಕೊಂಡಿದೆ. ಈ ಬಜೆಟ್ ಬೆಲೆಯ ಯೋಜನೆಯು ದೈನಂದಿನ ಡೇಟಾ ಸೌಲಭ್ಯ ಪಡೆದುಕೊಂಡಿರುವ ಜೊತೆಗೆ OTT ಚಂದಾದಾರಿಕೆಯ ಪ್ರಯೋಜನ ಸಹ ಪಡೆದುಕೊಂಡಿದೆ. ಹೆಚ್ಚುವರಿಯಾಗಿ ಓಟಿಟಿ ಪ್ರಯೋಜನ ಸಹ ಒಳಗೊಂಡಿದೆ. ಹಾಗಾದರೆ ಜಿಯೋ ಟೆಲಿಕಾಂನ 500 ರೂ.ಗಳ ಪ್ರೀಪೇಯ್ಡ್‌ ರೀಚಾರ್ಜ್‌ ಯೋಜನೆಯ ಸಂಪೂರ್ಣ ಮಾಹಿತಿ ಮುಂದೆ ತಿಳಿಯೋಣ.

Also Read : ಗ್ರಾಹಕರ ಗಮನ ಸೆಳೆದಿರುವ OPPO K13x 5G ಮೊಬೈಲ್‌ ಬೆಲೆಯಲ್ಲಿ ಈಗ ಭರ್ಜರಿ ಇಳಿಕೆ!

Jio ಟೆಲಿಕಾಂನ 500 ರೂ.ಗಳ ಪ್ಲಾನ್ ಮಾಹಿತಿ

ಜಿಯೋ ಟೆಲಿಕಾಂನ 500 ರೂಗಳ ಪ್ರೀಪೇಯ್ಡ್‌ ರೀಚಾರ್ಜ್‌ ಪ್ಲಾನಿನಲ್ಲಿ ಬಳಕೆದಾರರಿಗೆ ಪ್ರತಿದಿನ 2GB ಡೇಟಾ ಪ್ರಯೋಜನ ಲಭ್ಯವಾಗಲಿದೆ ಅಲ್ಲದೇ ಒಟ್ಟಾರೇ ವ್ಯಾಲಿಡಿಟಿ ಅವಧಿಗೆ ಒಟ್ಟು 56GB Data ಸೌಲಭ್ಯ ದೊರೆಯುತ್ತದೆ. ಅಂದಹಾಗೆ ಈ ಯೋಜನೆಯು 28 ದಿನಗಳ ವ್ಯಾಲಿಡಿಟಿ ಪ್ರಯೋಜನ ಹೊಂದಿದೆ. ಹಾಗೆಯೇ ಈ ಪ್ಲಾನಿನಲ್ಲಿ ಬಳಕೆದಾರರಿಗೆ ಅನ್‌ಲಿಮಿಟೆಡ್‌ ವಾಯ್ಸ್‌ ಕಾಲ್‌ ಸೌಲಭ್ಯ ಸಹ ಸಿಗಲಿದೆ. ಇದರ ಜೊತೆಗೆ ಪ್ರತಿದಿನ 100 SMS ಸೌಲಭ್ಯ ಸಹ ಲಭ್ಯ. ಹಾಗೆಯೇ ಈ ಪ್ಲಾನಿನಲ್ಲಿ JioTV ಹಾಗೂ JioAICloud ಚಂದಾದಾರಿಕೆ ಸೌಲಭ್ಯ ಲಭ್ಯ.

ಅಧಿಕ OTT ಚಂದಾದಾರಿಕೆ ಸೌಲಭ್ಯ

ಜಿಯೋದ ಈ ಯೋಜನೆಯಲ್ಲಿ ಗ್ರಾಹಕರಿಗೆ 12ಕ್ಕೂ ಅಧಿಕ ಓಟಿಟಿ ಚಂದಾದಾರಿಕೆಯ ಸೌಲಭ್ಯ ದೊರೆಯುತ್ತದೆ. ಅಂದಹಾಗೆ ಈ ಪ್ಲಾನಿನಲ್ಲಿ YouTube Premium, Prime Video Mobile, JioHotstar, Sony LIV, ZEE5, Lionsgate Play, Discovery+, Sun NXT, Kanchha Lannka, Planet Marathi, Chaupal, Hoichoi, FanCode, JioTV ಹಾಗೂ JioAICloud ಓಟಿಟಿ ಸೌಲಭ್ಯ ಸಿಗಲಿದೆ.

ಜಿಯೋದ ಇತರೆ ಆಕರ್ಷಕ ಪ್ಲಾನ್‌ಗಳ ಮಾಹಿತಿ

ಜಿಯೋ ಸಂಸ್ಥೆಯ 899 ರೂಗಳ ಪ್ರೀಪೇಯ್ಡ್‌ ರೀಚಾರ್ಜ್‌ ಯೋಜನೆಯಲ್ಲಿ ಬಳಕೆದಾರರಿಗೆ ಪ್ರತಿದಿನ 2GB ಡೇಟಾ ಹಾಗೂ 20GB ಹೆಚ್ಚುವರಿ ಡೇಟಾ ಪ್ರಯೋಜನ ಸಿಗಲಿದೆ. ಅಲ್ಲದೇ ಒಟ್ಟಾರೇ ವ್ಯಾಲಿಡಿಟಿ ಅವಧಿಗೆ ಒಟ್ಟು 200 GB Data ಸೌಲಭ್ಯ ದೊರೆಯುತ್ತದೆ. ಅಂದಹಾಗೆ ಈ ಯೋಜನೆಯು 90 ದಿನಗಳ ವ್ಯಾಲಿಡಿಟಿ ಪ್ರಯೋಜನ ಹೊಂದಿದೆ. ಹಾಗೆಯೇ ಈ ಪ್ಲಾನಿನಲ್ಲಿ ಬಳಕೆದಾರರಿಗೆ ಅನ್‌ಲಿಮಿಟೆಡ್‌ ವಾಯ್ಸ್‌ ಕಾಲ್‌ ಸೌಲಭ್ಯ ಸಹ ಸಿಗಲಿದೆ. ಇದರ ಜೊತೆಗೆ ಪ್ರತಿದಿನ 100 SMS ಸೌಲಭ್ಯ ಸಹ ಲಭ್ಯ. ಹಾಗೆಯೇ ಈ ಪ್ಲಾನಿನಲ್ಲಿ JioTV ಹಾಗೂ JioAICloud ಚಂದಾದಾರಿಕೆ ಸೌಲಭ್ಯ ಲಭ್ಯ.

Read more news like this on www.digit.in

Dailyhunt
Disclaimer: This content has not been generated, created or edited by Dailyhunt. Publisher: Digit kannada