Dailyhunt
ನಾಳೆಯಿಂದ Redmi A7 Pro 5G ಮೊಬೈಲ್‌ ಖರೀದಿಗೆ ಲಭ್ಯ! ಬೆಲೆ ಹಾಗೂ ಫೀಚರ್ಸ್‌ ನೋಡಿ

ನಾಳೆಯಿಂದ Redmi A7 Pro 5G ಮೊಬೈಲ್‌ ಖರೀದಿಗೆ ಲಭ್ಯ! ಬೆಲೆ ಹಾಗೂ ಫೀಚರ್ಸ್‌ ನೋಡಿ

Digit 2 days ago

ರೆಡ್ಮಿ ಕಂಪನಿಯ ನೂತನ Redmi A7 Pro 5G ಸ್ಮಾರ್ಟ್‌ಫೋನ್ ಅಗ್ಗದ ದರದ ಮೂಲಕ ಈಗಾಗಲೇ ಗ್ರಾಹಕರ ಗಮನ ಸೆಳೆದಿದೆ. ಅಂದಹಾಗೆ ಈ ಮೊಬೈಲ್‌ ನಾಳೆ (ಏಪ್ರಿಲ್‌ 15 ರಂದು) ದೇಶೀಯ ಮಾರುಕಟ್ಟೆಯಲ್ಲಿ ಸೇಲ್‌ ಶುರು ಮಾಡಲಿದೆ. ಈ ನೂತನ ಮೊಬೈಲ್‌ ಆಕ್ಟಾ-ಕೋರ್ Unisoc T8300 ಪ್ರೊಸೆಸರ್‌ ಒಳಗೊಂಡಿರುವ ಜೊತೆಗೆ 6,300mAh ಸಾಮರ್ಥ್ಯದ ಬಿಗ್ ಬ್ಯಾಟರಿ ಬ್ಯಾಕ್‌ಅಪ್‌ ಪಡೆದುಕೊಂಡಿದೆ.

ಅಲ್ಲದೇ ಈ ಮೊಬೈಲ್‌ನ ಡಿಸ್‌ಪ್ಲೇಯು 120Hz ವರೆಗೆ ರಿಫ್ರೆಶ್ ರೇಟ್‌ ಹೊಂದಿದೆ. ಅಲ್ಲದೇ ಈ ಫೋನ್‌ ಬ್ಲ್ಯಾಕ್‌, ಮಿಸ್ಟ್ ಬ್ಲೂ ಮತ್ತು ಸನ್‌ಸೆಟ್ ಆರೆಂಜ್ ಕಲರ್‌ ಆಯ್ಕೆಯೊಂದಿಗೆ ಎಂಟ್ರಿ ಕೊಟ್ಟಿದೆ. ಹಾಗಾದರೇ ರೆಡ್ಮಿ A7 ಪ್ರೊ 5G ಮೊಬೈಲ್‌ ಫೋನಿನ ಮಾರಾಟ, ಬೆಲೆ, ಫೀಚರ್ಸ್‌ಗಳ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.

Also Read : Jio ಟೆಲಿಕಾಂನ ಈ ಕಡಿಮೆ ಬೆಲೆಯ ಪ್ಲಾನ್‌ನಲ್ಲಿ 84 ದಿನಗಳ ವ್ಯಾಲಿಡಿಟಿ! ಇಲ್ಲಿದೆ ಪೂರ್ಣ ಮಾಹಿತಿ

Redmi A7 Pro 5G ಬೆಲೆ ಹಾಗೂ ಲಭ್ಯತೆ

ದೇಶಿಯ ಮೊಬೈಲ್‌ ಮಾರುಕಟ್ಟೆ ಪ್ರವೇಶಿಸಿರುವ ರೆಡ್ಮಿ A7 ಪ್ರೊ 5G ಸ್ಮಾರ್ಟ್‌ಫೋನ್‌ ನಾಳೆ (ಏಪ್ರಿಲ್‌ 15 ರಂದು) ಮಧ್ಯಾಹ್ನ 12 ರಂದು ಮಾರಾಟ ಪ್ರಾರಂಭ ಮಾಡಲಿದೆ. ಈ ಫೋನ್ ಎರಡು ಸ್ಟೋರೇಜ್‌ ವೇರಿಯಂಟ್‌ ಆಯ್ಕೆಗಳನ್ನು ಒಳಗೊಂಡಿದೆ. ಇದರ 4GB RAM + 64GB ಸ್ಟೋರೇಜ್ ವೇರಿಯಂಟ್‌ ಬೆಲೆ 11,499 ರೂ.ಗಳು ಆಗಿದೆ. ಹಾಗೆಯೇ 128GB ಸ್ಟೋರೇಜ್ ವೇರಿಯಂಟ್‌ ಬೆಲೆ 12,499 ರೂ.ಗಳು ಆಗಿದೆ. ಅಂದಹಾಗೆ ಈ ಮೊಬೈಲ್‌ ಬ್ಲ್ಯಾಕ್‌, ಮಿಸ್ಟ್ ಬ್ಲೂ ಮತ್ತು ಸನ್‌ಸೆಟ್ ಆರೆಂಜ್ ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಲಭ್ಯ.

ರೆಡ್ಮಿ A7 ಪ್ರೊ 5G ಮೊಬೈಲ್‌ ಫೀಚರ್ಸ್‌

ಹೊಸ ರೆಡ್ಮಿ A7 ಪ್ರೊ 5G ಮೊಬೈಲ್‌ 6.9 ಇಂಚಿನ HD+ LCD ಡಿಸ್‌ಪ್ಲೇ ಅನ್ನು ಹೊಂದಿರುವ ಜೊತೆಗೆ ಇದರ ಸ್ಕ್ರೀನ್‌ 120Hz ವರೆಗೆ ರಿಫ್ರೆಶ್ ರೇಟ್‌ ಅನ್ನು ಪಡೆದಿದೆ. ಇದರ ಡಿಸ್‌ಪ್ಲೇಯು 800 nits ಪೀಕ್‌ ಬ್ರೈಟ್ನೆಸ್‌ ಬೆಂಬಲ ಹೊಂದಿದೆ. ಇದರೊಂದಿಗೆ ಈ ಫೋನ್‌ ಆಕ್ಟಾ ಕೋರ್ Unisoc T8300 ಪ್ರೊಸೆಸರ್‌ ಚಿಪ್‌ಸೆಟ್ ಪ್ರೊಸೆಸರ್‌ನಲ್ಲಿ ಕೆಲಸ ಮಾಡಲಿದೆ. ಅಲ್ಲದೇ ಮೈಕ್ರೊ ಎಸ್‌ಡಿ ಕಾರ್ಡ್ ಮೂಲಕ 2TB ವರೆಗೆ ಬಾಹ್ಯ ಮೆಮೊರಿ ವಿಸ್ತರಿಸುವ ಅವಕಾಶ ಒಳಗೊಂಡಿದೆ.

ಹಾಗೆಯೇ ರೆಡ್ಮಿ A7 ಪ್ರೊ 5G ಮೊಬೈಲ್‌ ಹಿಂಭಾಗದಲ್ಲಿ ಡ್ಯುಯಲ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಪಡೆದುಕೊಂಡಿವೆ. ಇದರ ಪ್ರಾಥಮಿಕ ಕ್ಯಾಮೆರಾವು 32 ಮೆಗಾಪಿಕ್ಸೆಲ್ ಸೆನ್ಸರ್ ಸಾಮರ್ಥ್ಯದಲ್ಲಿ ಇದೆ ಹಾಗೆಯೇ ಸೆಕೆಂಡರಿ ಕ್ಯಾಮೆರಾವು 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ರಚನೆ ಹೊಂದಿದೆ. ಇನ್ನು ಸೆಲ್ಫಿ ಮತ್ತು ವೀಡಿಯೊ ಕರೆಗಳಿಗಾಗಿ ಮುಂಭಾಗದಲ್ಲಿ ಈ ಮೊಬೈಲ್‌ 8 ಮೆಗಾಪಿಕ್ಸೆಲ್ ಕ್ಯಾಮೆರಾ ಪಡೆದುಕೊಂಡಿದೆ. ಹಾಗೆಯೇ ಈ ಮೊಬೈಲ್‌ 6,300mAh ಬ್ಯಾಟರಿ ಬ್ಯಾಕ್‌ಅಪ್‌ ಜೊತೆಗೆ 15W ವೈರ್ಡ್ ಫಾಸ್ಟ್ ಚಾರ್ಜಿಂಗ್‌ ಅನ್ನು ಪಡೆದುಕೊಂಡಿದೆ.

Read more news like this on www.digit.in

Dailyhunt
Disclaimer: This content has not been generated, created or edited by Dailyhunt. Publisher: Digit kannada