Dailyhunt
OnePlus Nord CE 6 Lite ಫೋನಿನ ಬೆಲೆ ಮಾಹಿತಿ ಬಹಿರಂಗ! ಮೇ 7 ರಂದು ಲಾಂಚ್‌

OnePlus Nord CE 6 Lite ಫೋನಿನ ಬೆಲೆ ಮಾಹಿತಿ ಬಹಿರಂಗ! ಮೇ 7 ರಂದು ಲಾಂಚ್‌

Digit 3 days ago

ನ್‌ಪ್ಲಸ್ ಕಂಪನಿಯು ಸದ್ಯದಲ್ಲೇ ನಾರ್ಡ್‌ ಸರಣಿಯಲ್ಲಿ ಹೊಸದಾಗಿ ಎರಡು ಫೋನ್‌ಗಳನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಅವುಗಳು ಕ್ರಮವಾಗಿ OnePlus Nord CE 6 ಹಾಗೂ OnePlus Nord CE 6 Lite ಮಾಡೆಲ್‌ಗಳು ಆಗಿವೆ. ಇನ್ನು ಒನ್‌ಪ್ಲಸ್‌ ನಾರ್ಡ್‌ CE 6 ಲೈಟ್‌ ಫೋನ್‌ ಇದೇ ಮೇ 7 ರಂದು ಲಾಂಚ್‌ ಆಗಲಿದೆ.

ಹಾಗೆಯೇ ಒನ್‌ಪ್ಲಸ್‌ ನಾರ್ಡ್‌ CE 6 ಮೊಬೈಲ್‌ ಮೇ 6 ರಂದು ಬಿಡುಗಡೆ ಆಗಲಿದೆ. ಈ ಎರಡು ಫೋನ್‌ಗಳ ಲೀಕ್‌ ಫೀಚರ್ಸ್‌ ಈಗಾಗಲೇ ಮೊಬೈಲ್‌ ಪ್ರಿಯರ ಕುತೂಹಲ ಹೆಚ್ಚಿಸಿದೆ. ಅಂದಹಾಗೆ ಒನ್‌ಪ್ಲಸ್‌ ನಾರ್ಡ್‌ CE 6 ಲೈಟ್‌ ಫೋನಿನ ಬೆಲೆ ಬಗ್ಗೆ ಮಾಹಿತಿ ಸೋರಿಕೆಯಾಗಿದ್ದು, ಗ್ರಾಹಕರ ಕುತೂಹಲ ಮತ್ತಷ್ಟು ಹೆಚ್ಚಿಸಿದೆ. ಹಾಗಾದರೆ ಒನ್‌ಪ್ಲಸ್‌ ನಾರ್ಡ್‌ CE 6 ಲೈಟ್‌ ಫೋನಿನ ನಿರೀಕ್ಷಿತ ಬೆಲೆ ಹಾಗೂ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ.

Also Read : ನಿಮ್ಮ Smartphone ಸುರಕ್ಷಿತವಾಗಿದೆಯೇ? ಫೋನ್ ಹ್ಯಾಕ್ ಆಗದಂತೆ ತಡೆಯಲು ಹೀಗೆ ಮಾಡಿ!

OnePlus Nord CE 6 Lite: ನಿರೀಕ್ಷಿತ ಬೆಲೆ ಹಾಗೂ ಲಾಂಚ್

ಒನ್‌ಪ್ಲಸ್‌ ನಾರ್ಡ್‌ CE 6 ಸ್ಮಾರ್ಟ್‌ಫೋನ್‌ ಭಾರತದಲ್ಲಿ 20,000 ರೂ.ಗಳಿಂದ 25,000 ರೂ.ಗಳ ರೇಂಜ್‌ನಲ್ಲಿ ಬಿಡುಗಡೆ ಆಗಬಹುದು ಎಂದು ವರದಿಗಳಾಗಿವೆ. ಅಂದಹಾಗೆ ಈ ಮೊಬೈಲ್‌ ಇದೇ ಮೇ 7 ರಂದು ಮಧ್ಯಾಹ್ನ 12 ಗಂಟೆಗೆ ಭಾರತೀಯ ಮಾರುಕಟ್ಟೆಯಲ್ಲಿ ಅಧಿಕೃತವಾಗಿ ಲಾಂಚ್‌ ಆಗಲಿದೆ. ಈ ಮೊಬೈಲ್‌ ಲಾಂಚ್‌ ಬಳಿಕ ಅಮೆಜಾನ್‌ ತಾಣ ಹಾಗೂ ಕಂಪನಿಯ ಅಧಿಕೃತ ಆನ್‌ಲೈನ್‌ ಸ್ಟೋರ್‌ ಮೂಲಕ ಸೇಲ್‌ ಪ್ರಾರಂಭ ಮಾಡಲಿದೆ. ಭಾರತದಲ್ಲಿ ಈ ಫೋನ್‌ ಫ್ರೆಶ್ ಬ್ಲೂ, ಲೂನಾರ್ ಪರ್ಲ್ ಮತ್ತು ಪಿಚ್ ಬ್ಲ್ಯಾಕ್ ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಾಗುವ ಸಾಧ್ಯತೆಗಳು ಇವೆ.

ಒನ್‌ಪ್ಲಸ್‌ ನಾರ್ಡ್‌ CE 6 ನಿರೀಕ್ಷಿತ ಫೀಚರ್ಸ್‌

ಮಾರುಕಟ್ಟೆಗೆ ಹೊಸದಾಗಿ ಲಗ್ಗೆ ಇಡಲಿರುವ ಒನ್‌ಪ್ಲಸ್‌ ನಾರ್ಡ್‌ CE 6 ಸ್ಮಾರ್ಟ್‌ಫೋನ್‌ ಡಿಸ್‌ಪ್ಲೇಯು 144Hz ರಿಫ್ರೆಶ್‌ ರೇಟ್‌ ಜೊತೆಗೆ 1.5K ರೆಸಲ್ಯೂಶನ್ ಸೌಲಭ್ಯ ಪಡೆದಿರುವುದು ಪ್ರಮುಖ ಹೈಲೈಟ್‌ಗಳಲ್ಲಿ ಒಂದಾಗಿದೆ. ಹಾಗೆಯೇ ಇದು ಕ್ವಾಲ್ಕಮ್‌ ಸ್ನಾಪ್‌ಡ್ರಾಗನ್ 7s ಜೆನ್ 4 ಚಿಪ್‌ಸೆಟ್ ಪ್ರೊಸೆಸರ್‌ ಸೌಲಭ್ಯ ಪಡೆದಿರುವುದು ಪಕ್ಕಾ ಎನ್ನಲಾಗಿದೆ. ಇದರೊಂದಿಗೆ ಈ ಫೋನ್‌ 8,000mAh ಸಾಮರ್ಥ್ಯದ ಬಿಗ್ ಬ್ಯಾಟರಿ ಸಪೋರ್ಟ್‌ ಒಳಗೊಂಡಿರುವ ಸಾಧ್ಯತೆಗಳು ಅಧಿಕ ಆಗಿವೆ. ಅಲ್ಲದೇ ಇದು ಆಂಡ್ರಾಯ್ಡ್ 16 ಆಧಾರಿತ ಆಕ್ಸಿಜನ್‌ಓಎಸ್ 16 ನಲ್ಲಿ ಕಾರ್ಯನಿರ್ವಹಿಸಲಿದೆ.

ಒನ್‌ಪ್ಲಸ್‌ ನಾರ್ಡ್‌ CE 6 ಸ್ಮಾರ್ಟ್‌ಫೋನ್‌ ಹಿಂಬದಿ ಡ್ಯುಯಲ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಪಡೆದುಕೊಂಡಿರಲಿದೆ. ಇದರ ಪ್ರಾಥಮಿಕ ಕ್ಯಾಮೆರಾವು 50 ಮೆಗಾಪಿಕ್ಸೆಲ್ Sony Lytia ಸೆನ್ಸಾರ್‌ ಅನ್ನು ಪಡೆದಿರಲಿದೆ. ಸೆಕೆಂಡರಿ ಕ್ಯಾಮೆರಾವು 8MP ಅಲ್ಟ್ರಾ ವೈಡ್ ಲೆನ್ಸ್ ಸೌಲಭ್ಯದಲ್ಲಿ ಇರಲಿದೆ. ಇನ್ನು ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ ಈ ಫೋನ್‌ 32MP ಕ್ಯಾಮೆರಾ ರಚನೆ ಪಡೆದುಕೊಂಡಿರಲಿದೆ. ಈ ಫೋನ್‌ 27W ರಿವರ್ಸ್ ಚಾರ್ಜಿಂಗ್ ಸೌಲಭ್ಯ ಸಹ ಪಡೆದಿರುವ ಸಾಧ್ಯತೆಗಳು ಇವೆ.

Read more news like this on www.digit.in

Dailyhunt
Disclaimer: This content has not been generated, created or edited by Dailyhunt. Publisher: Digit kannada