ಈ ಸಂಜೆ

802k Followers

ಬ್ರಾಹ್ಮಣ ಅರ್ಚಕರು, ಅಡುಗೆ ತಯಾರಿಸುವವರಿಗೆ 5 ಲಕ್ಷ ಆರೋಗ್ಯ ವಿಮೆ ಜಾರಿ

10 Oct 2020.1:50 PM

ಬೆಂಗಳೂರು, ಅ.10- ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವ ರಾಜ್ಯದ ಅರ್ಚಕರು ಮತ್ತು ಅಡುಗೆ ತಯಾರಿಸುವ ಬ್ರಾಹ್ಮಣರಿಗೆ 5 ಲಕ್ಷ ಆರೋಗ್ಯ ವಿಮೆ ಮಾಡುವುದಾಗಿ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಇಂದಿಲ್ಲಿ ಘೋಷಿಸಿದೆ.

ಇಂದು ನಡೆದ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ರಾಜ್ಯ ಕಾರ್ಯಕಾರಿ ಸಮಿತಿಯಲ್ಲಿ ಅಧ್ಯಕ್ಷ ಎಚ್.ಎಸ್.ಸಚ್ಚಿದಾನಂದಮೂರ್ತಿ ಅವರು ದೇವಾಲಯಗಳಲ್ಲಿ ಪೂಜೆ-ಪುನಸ್ಕಾರ ನಡೆಸುವ ಅರ್ಚಕರು ಮತ್ತು ಅಡುಗೆ ತಯಾರಿಸುವವರಿಗೆ ಮಂಡಳಿ ವತಿಯಿಂದ 5 ಲಕ್ಷ ಆರೋಗ್ಯ ವಿಮೆ ನೀಡುವುದಾಗಿ ಪ್ರಕಟಿಸಿದರು.

ಆರೋಗ್ಯ ವಿಮೆ ಯೋಜನೆಯ ಸಂಪೂರ್ಣ ಹಣವನ್ನು ಮಂಡಳಿಯಿಂದಲೇ ನೀಡಲಾಗುವುದು. ಸದ್ಯದಲ್ಲೇ ಇದನ್ನು ಅಕೃತವಾಗಿ ಜಾರಿ ಮಾಡಲಾಗುವುದು ಎಂದು ಸಚ್ಚಿದಾನಂದಮೂರ್ತಿ ಘೋಷಿಸಿದರು.
ರಾಜ್ಯದಲ್ಲಿರುವ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಅರ್ಚಕರು ಮತ್ತು ಪುರೋಹಿತರ ಅಂಕಿ-ಅಂಶಗಳನ್ನು ಸಂಗ್ರಹಿಸುವುದೇ ಬಹುದೊಡ್ಡ ಸವಾಲಾಗಿದೆ.

ಹೀಗಾಗಿ ಕಾರ್ಯಕಾರಿ ಮಂಡಳಿಯ ಸದಸ್ಯರು ತಕ್ಷಣವೇ ದತ್ತಾಂಶಗಳನ್ನು ಸಂಗ್ರಹಿಸುವಂತೆ ಸೂಚನೆ ಕೊಟ್ಟರು.

ಯಾವ ಯಾವ ಪ್ರದೇಶಗಳಲ್ಲಿ ಅರ್ಚಕರು ಮತ್ತು ಪುರೋಹಿತರು ವಾಸವಾಗಿದ್ದರೋ ಅಂತಹ ಕಡೆ ಮಂಡಳಿ ಸದಸ್ಯರು ಖುದ್ದು ತೆರಳಿ ಮಾಹಿತಿ ಕಲೆ ಹಾಕಬೇಕು. ವಿದ್ಯಾವಂತ ಯುವಕರು ಕೂಡ ಈ ಬಗ್ಗೆ ಮಾಹಿತಿ ನೀಡಬೇಕು ಎಂದು ಮನವಿ ಮಾಡಿದ್ದಾರೆ.

ಸರ್ಕಾರದ ಯೋಜನೆಗಳನ್ನು ಪಡೆಯುವಾಗ ನಮ್ಮ ಸಮುದಾಯದವರು ಅಂಜಿಕೆ ಪಟ್ಟುಕೊಂಡು ಹಿಂದುಳಿಯುವುದು ಬೇಡ. ಆರ್ಥಿಕವಾಗಿ ಹಿಂದುಳಿದವರು ಸರ್ಕಾರದ ಪ್ರತಿಯೊಂದು ಸೌಲಭ್ಯಗಳನ್ನೂ ಮುಂದೆ ಬಂದು ಪಡೆಯಬೇಕು ಎಂದು ಕಿವಿಮಾತು ಹೇಳಿದರು.

ಸರ್ಕಾರದ ಸೌಲಭ್ಯಗಳನ್ನು ಪಡೆಯುವುದು ನಮ್ಮ ಮೂಲಭೂತ ಹಕ್ಕು. ಇದಕ್ಕೆ ಅಂಜಿಕೆ ಪಡಬೇಕಾದ ಅಗತ್ಯವಿಲ್ಲ. ನಮ್ಮ ಸಮುದಾಯದ ವಿದ್ಯಾವಂತ ಯುವಕರು ಈ ಬಗ್ಗೆ ಜಾಗೃತಿ ಮೂಡಿಸಬೇಕು.

ತಮ್ಮ ಅಕಾರಾವಯಲ್ಲಿ ಸಮುದಾಯದ ಏಳಿಗೆಗಾಗಿ ಶಕ್ತಿ ಮೀರಿ ಪ್ರಯತ್ನಿಸುತ್ತೇನೆ ಎಂದು ಸಚ್ಚಿದಾನಂದ ಮೂರ್ತಿ ಆಶ್ವಾಸನೆ ನೀಡಿದರು.
ಮಂಡಳಿಯ ಪದಾಕಾರಿಗಳು ಹಾಗೂ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.

Disclaimer

Disclaimer

This story is auto-aggregated by a computer program and has not been created or edited by Dailyhunt Publisher: eesanje

#Hashtags