Dailyhunt Logo
  • Light mode
    Follow system
    Dark mode
    • Play Story
    • App Story
ಡೇ ಕೇರ್‌ನಲ್ಲಿ ಮಕ್ಕಳ ಮೇಲೆ ದೌರ್ಜನ್ಯ ಪ್ರಕರಣ : ಮಹಿಳೆ ಬಂಧನ, ಉಳಿದ ಆರೋಪಿಗಳಿಗೆ ಶೋಧ

ಡೇ ಕೇರ್‌ನಲ್ಲಿ ಮಕ್ಕಳ ಮೇಲೆ ದೌರ್ಜನ್ಯ ಪ್ರಕರಣ : ಮಹಿಳೆ ಬಂಧನ, ಉಳಿದ ಆರೋಪಿಗಳಿಗೆ ಶೋಧ

ಈ ಸಂಜೆ 1 week ago

Child abuse case at day care: Woman arrested

ಬೆಂಗಳೂರು,ಜು.3-ನಗರದ ಪ್ರತಿಷ್ಠಿತ ಐಟಿ ಸಂಸ್ಥೆಯಾದ ಕ್ಯಾಪ್ಜೆಮಿನಿ ಆವರಣದಲ್ಲಿರುವ ಡೇಕೇರ್‌ ಕೇಂದ್ರದಲ್ಲಿ ಪುಟ್ಟ ಮಕ್ಕಳ ಮೇಲೆ ನಡೆದಿದೆ ಎನ್ನಲಾದ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ, ಹೆಚ್‌ಎಎಲ್‌ ಠಾಣೆ ಪೊಲೀಸರು ಮಹಿಳೆಯೊಬ್ಬರನ್ನು ಬಂಧಿಸಿ ತನಿಖೆಯನ್ನು ಚುರುಕುಗೊಳಿಸಿದ್ದಾರೆ.

ಬಂಧಿತ ಮಹಿಳೆಯನ್ನು ವಿಜಯಲಕ್ಷಿ ಎಂದು ಗುರುತಿಸ ಲಾಗಿದೆ. ದಾಖಲಾಗಿರುವ ಎ‌‍ಐಆರ್‌ನಲ್ಲಿ ಇವರನ್ನು ಎರಡನೇ ಆರೋಪಿ ಎಂದು ಉಲ್ಲೇಖಿಸಲಾಗಿದೆ. ಲೆಮರೆಸಿಕೊಂಡಿರುವ ಉಳಿದ ಆರೋಪಿಗಳ ಬಂಧನಕ್ಕೆ ಶೋಧ ಕಾರ್ಯ ಮುಂದುವರೆದಿದೆ.
ತನಿಖಾಧಿಕಾರಿಗಳು ಡೇಕೇರ್‌ ಕೇಂದ್ರದ ಸಿಸಿಟಿವಿ ದೃಶ್ಯಾವಳಿಗಳನ್ನು ಕೂಲಂಕಷವಾಗಿ ಪರಿಶೀಲಿಸಿದ ನಂತರ, ದೌರ್ಜನ್ಯದಲ್ಲಿ ವಿಜಯಲಕ್ಷಿಯ ಪಾತ್ರವಿರುವುದು ದೃಢಪಟ್ಟಿದೆ. ಇದರ ಬೆನ್ನಲ್ಲೇ ಆಕೆಯನ್ನು ಬಂಧಿಸಿದ್ದಾರೆ.

ಆರೋಪಿಯ ಮೇಲೆ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್‌‍) ಮತ್ತು ಬಾಲಾಪರಾಧಿ ನ್ಯಾಯ ಕಾಯ್ದೆಯ ಕಠಿಣ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದಲ್ಲದೆ, ಪ್ರಕರಣದಲ್ಲಿ ಶಾಮೀಲಾದ ಇತರ ಮೂವರು ಆರೋಪಿಗಳಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌‍ ನೀಡಲಾಗಿದೆ. ಈ ಬಂಧನವು ತನಿಖೆಯ ಆರಂಭಿಕ ಹಂತದ ಮೊದಲ ಹೆಜ್ಜೆಯಾಗಿದೆ. ಪೊಲೀಸರು ತನಿಖೆಯನ್ನು ಮುಂದುವರಿಸಿದ್ದು, ಪ್ರಕರಣದಲ್ಲಿ ಭಾಗಿಯಾಗಿರುವ ಇತರರನ್ನೂ ಶೀಘ್ರವೇ ವಶಕ್ಕೆ ಪಡೆಯುವ ನಿರೀಕ್ಷೆಯಿದೆ.

ನಗರದ ಕ್ಯಾಪ್ಜೆಮಿನಿಯ ಕ್ಯಾಂಪಸ್‌‍ನಲ್ಲಿರುವ ಡೇಕೇರ್‌ ಕೇಂದ್ರದಲ್ಲಿ ಮಕ್ಕಳನ್ನು ಬಲವಂತವಾಗಿ ವಾಷಿಂಗ್‌ ಮೆಷಿನ್‌ ಡ್ರಮ್‌ಗೆ ಹಾಕಿ, ನೀರನ್ನು ಸಿಂಪಡಿಸಿ, ಸ್ನಾನಗೃಹಗಳಲ್ಲಿ ಬಂಧಿಸಿಡುತ್ತಿರುವುದು ವೈರಲ್‌ ಆದ ವೀಡಿಯೊಗಳು ಭಾರೀ ಆಕ್ರೋಶಕ್ಕೆ ಕಾರಣವಾಗಿವೆ.
ಸಾಮಾಜಿಕ ಜಾಲ ತಾಣದಲ್ಲಿ ವೈರಲ್‌ ಆದ ವಿಡಿಯೋ ದೃಶ್ಯಗಳು ಎಂಥವರನ್ನೂ ಬೆಚ್ಚಿಬೀಳಿಸುವಂತಿತ್ತು. ಈ ದೃಶ್ಯಗಳು ಬೆಳಕಿಗೆ ಬಂದ ತಕ್ಷಣ, ಪೋಷಕರು ಮತ್ತು ನಾಗರಿಕ ಸಮಾಜದಿಂದ ತೀವ್ರ ಪ್ರತಿಭಟನೆ ವ್ಯಕ್ತವಾಗಿತ್ತು.

ವಿಷಯದ ಗಂಭೀರತೆಯನ್ನು ಅರಿತ ಕ್ಯಾಪ್ಜೆಮಿನಿ ಆಡಳಿತ ಮಂಡಳಿಯು, ಬೆಂಗಳೂರಿನ ಕ್ಯಾಂಪಸ್‌‍ನಲ್ಲಿರುವ ಡೇಕೇರ್‌ ಕೇಂದ್ರವನ್ನು ತಾತ್ಕಾಲಿಕವಾಗಿ ಮುಚ್ಚುವುದಾಗಿ ಘೋಷಿಸಿತು.
ಉದ್ಯೋಗಿಗಳು ಮತ್ತು ಅವರ ಕುಟುಂಬಗಳ ಸುರಕ್ಷತೆ ನಮ ಪ್ರಮುಖ ಆದ್ಯತೆ. ತನಿಖಾ ಸಂಸ್ಥೆಗಳೊಂದಿಗೆ ನಾವು ಸಂಪೂರ್ಣವಾಗಿ ಸಹಕರಿಸುತ್ತಿದ್ದೇವೆ ಎಂದು ಕಂಪನಿಯು ಅಧಿಕೃತ ಹೇಳಿಕೆ ನೀಡಿದೆ. ಆದಾಗ್ಯೂ, ಇಂತಹ ಹೈ-ಪ್ರೆೈಲ್‌ ಸಂಸ್ಥೆಯಲ್ಲಿ ಇಂತಹ ಘಟನೆ ನಡೆಯಲು ಮೂಲಸೌಕರ್ಯಗಳ ಮೇಲ್ವಿಚಾರಣೆಯಲ್ಲಿನ ಲೋಪಗಳೇ ಕಾರಣ ಎಂಬ ಆರೋಪಗಳು ಕೇಳಿಬರುತ್ತಿವೆ.

ಆಯೋಗ ಮಧ್ಯಪ್ರವೇಶ:
ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು, ತನಿಖಾ ಅಧಿಕಾರಿಗಳಿಂದ ವಿವರವಾದ ವರದಿಯನ್ನು ಕೋರಿದೆ. ಆಯೋಗವು ಈ ಪ್ರಕರಣವನ್ನು ಸ್ವತಂತ್ರವಾಗಿ ಪರಿಶೀಲಿಸುತ್ತಿದ್ದು, ಇಂತಹ ಕೇಂದ್ರಗಳಲ್ಲಿ ಮಕ್ಕಳ ಸುರಕ್ಷತೆಯನ್ನು ಖಾತ್ರಿಪಡಿಸಲು ಕಟ್ಟುನಿಟ್ಟಾದ ನಿಯಮಾವಳಿಗಳನ್ನು ರೂಪಿಸುವ ಒತ್ತಡ ಹೆಚ್ಚಾಗಿದೆ.

ಬೆಂಗಳೂರು,ಜು.3-ನಗರದ ಪ್ರತಿಷ್ಠಿತ ಐಟಿ ಸಂಸ್ಥೆಯಾದ ಕ್ಯಾಪ್ಜೆಮಿನಿ ಆವರಣದಲ್ಲಿರುವ ಡೇಕೇರ್‌ ಕೇಂದ್ರದಲ್ಲಿ ಪುಟ್ಟ ಮಕ್ಕಳ ಮೇಲೆ ನಡೆದಿದೆ ಎನ್ನಲಾದ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ, ಹೆಚ್‌ಎಎಲ್‌ ಠಾಣೆ ಪೊಲೀಸರು ಮಹಿಳೆಯೊಬ್ಬರನ್ನು ಬಂಧಿಸಿ ತನಿಖೆಯನ್ನು ಚುರುಕುಗೊಳಿಸಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: eesanje