ರಾಜ್ಯ ಸುದ್ದಿ
ಎನ್‍ಒಸಿ ಇಲ್ಲದೆ ಟ್ರಾನ್ಸ್‍ಫಾರ್ಮ್‍ರ್: ಸಚಿವ ಸುನೀಲ್‍ಕುಮಾರ್
ಬೆಂಗಳೂರು, ಸೆ.7-ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಮನೆ ಕಟ್ಟಿ ವಿದ್ಯುತ್ ಸಂಪರ್ಕ ಪಡೆಯಲಾಗದವರಿಗೆ ನೂರು ದಿನದೊಳಗೆ ಎನ್‍ಒಸಿ ಇಲ್ಲದೆ ವಿದ್ಯುತ್ ಪಡೆಯಲು ಟ್ರಾನ್ಸ್‍ಫಾರ್ಮ್‍ರ್ ಬ್ಯಾಂಕ್ ಮಾಡಲು ನಿರ್ಧರಿಸಲಾಗಿದೆ ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವ ವಿ.ಸುನೀಲ್‍ಕುಮಾರ್ ಹೇಳಿದರು.
ಪಕ್ಷದ ಕಚೇರಿಯಲ್ಲಿ ಕಾರ್ಯಕರ್ತರನ್ನು ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ರಾಮೀಣ ಭಾಗಗಳಲ್ಲಿ ಕಷ್ಟಪಟ್ಟು ಮನೆ ಕಟ್ಟಿಕೊಂಡಿರುವ ಬಡವರು ವಿದ್ಯುತ್ ಪಡೆಯಲಾಗದೆ ತೊಂದರೆ ಅನುಭವಿಸುತ್ತಿದ್ದಾರೆ. ಇದನ್ನು ತಪ್ಪಿಸಲು ಬೆಳಕು ಯೋಜನೆಯಡಿ ನೂರು ದಿನದೊಳಗೆ ಎನ್‍ಒಸಿ ಇಲ್ಲದೆ ಟ್ರಾನ್ಸ್‍ಫಾರ್ಮ್‍ರ್ ಬ್ಯಾಂಕ್ ಪ್ರಾರಂಭಿಸುತ್ತೇವೆ ಎಂದು ತಿಳಿಸಿದರು.
ಪ್ರತಿಯೊಂದು ಮನೆಗೂ ವಿದ್ಯುತ್ ಪೂರೈಸಬೇಕು ಎಂಬುದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕನಸಾಗಿದೆ. ಆ ನಿಟ್ಟಿನಲ್ಲಿ ರಾಜ್ಯದ ಯಾವುದೇ ಭಾಗದಲ್ಲೂ ಟ್ರಾನ್ಸ್‍ಫಾರ್ಮ್‍ರ್‍ಗಳು ಕೆಟ್ಟು ಹೋದರೆ 24 ಗಂಟೆಯೊಳಗೆ ಬದಲಾಯಿಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದರು.
ಗಂಗಾ ಕಲ್ಯಾಣ ಯೋಜನೆಯಡಿ ನಾವು ಬಡವರಿಗೆ ಬೋರ್‍ವೆಲ್‍ಗಳನ್ನು ಹಾಕಿಸಿ ಕೊಡುತ್ತೇವೆ. ಅನೇಕರು ವಿದ್ಯುತ್ ಬಿಲ್ ಪಾವತಿ ಸಲಾಗದಂತಹ ಸ್ಥಿತಿಯಲ್ಲಿದ್ದಾರೆ. ನೀರಾವರಿ ನಿಗಮದಿಂದ ಬೋರ್‍ವೆಲ್ ಕೊರೆಸುತ್ತೇವೆ. ವಿದ್ಯುತ್ ನಿಗಮದಿಂದ ಹಣವನ್ನು ಭರ್ತಿ ಮಾಡಬೇಕು. ಇನ್ನು ಮುಂದೆ ನಿಗಮವು ಪಾವತಿಸಿದ 30 ದಿನದೊಳಗೆ ವಿದ್ಯುತ್ ಸಂಪರ್ಕ ಕಲ್ಪಿಸಿಕೊಡಲು ಅಧಿಕಾರಿಗಳಿಗೆ ಸೂಚನೆ ಕೊಟ್ಟಿರುವುದಾಗಿ ಮಾಹಿತಿ ನೀಡಿದರು. ಇನ್ನು ಮುಂದೆ ಸರ್ಕಾರಿ ಕಚೇರಿಗಳಲ್ಲಿ ಪ್ರೀಪೇಡ್ ಮೀಟರ್ ಯೋಜನೆಯನ್ನು ಆರಂಭಿಸಲು ತೀರ್ಮಾನಿಸಿ ದ್ದೇವೆ.
ಪ್ರೀಪೇಡ್ ಮೀಟರ್ ಅಳವಡಿಕೆಯಾದರೆ ಎಷ್ಟು ಅಗತ್ಯವಿರತ್ತದೋ ಅಷ್ಟು ವಿದ್ಯುತ್ ಬಳಕೆ ಮಾಡಿಕೊಳ್ಳಬಹುದು. ಅಲ್ಲದೆ ಪದೇ ಪದೇ ಬಾಕಿ ಹಣವನ್ನು ಕಟ್ಟುವಂತೆ ಗೋಗರಿಯುವ ಪ್ರಮೇಯವೂ ತಪ್ಪುತ್ತದೆ ಎಂದು ಅಭಿಪ್ರಾಯ ಪಟ್ಟರು. ಸರ್ಕಾರಿ ಕಚೇರಿಗಳಲ್ಲಿ ವಿದ್ಯುತ್ ಬಿಲ್‍ಪಾವತಿ ಮಾಡದೇ ಇರುವುದರಿಂದ ಸಂಸ್ಥೆ ನಷ್ಟದಲ್ಲಿದೆ. ಕೈಗಾರಿಕಾ ಸಂಘ -ಸಂಸ್ಥೆಗಳು ನಾನು ಸಚಿವನಾದ ನಂತರ ಬಂದು ಪ್ರೀಪೇಡ್ ಮೀಟರ್ ಅಳವಡಿಸುವಂತೆ ಮನವಿ ಮಾಡಿದ್ದರು. ಹೀಗಾಗಿ ಸರ್ಕಾರಿ ಸಂಸ್ಥೆಗಳಲ್ಲಿ ಇದನ್ನು ಅಳವಡಿಸಲು ತೀರ್ಮಾನಿಸಲಾಗಿದೆ ಎಂದು ಸಮರ್ಥಿಸಿಕೊಂಡರು.
ಮುಖ್ಯಮಂತ್ರಿಗಳ ಸಲಹೆ ಮೇರೆಗೆ ವರ್ಗಾವಣೆ ದಂಧೆಗೆ ಬ್ರೇಕ್ ಹಾಕಲು ತೀರ್ಮಾನಿಸಲಾಗಿದೆ. ಪರಿಸ್ಥಿತಿ ನೋಡಿಕೊಂಡು ಅಧಿಕಾರಿಗಳನ್ನು ವರ್ಗಾವಣೆ ಮಾಡುತ್ತೇವೆ. ಬೇಕಾಬಿಟ್ಟಿ ವರ್ಗಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದರು. ಎಲೆಕ್ಟ್ರಿಕಲ್ ವೆಹಿಕಲ್ ರೀಚಾರ್ಜ್ ಕೇಂದ್ರಗಳನ್ನು ಸಹ ಜಿಲ್ಲಾ ಮತ್ತು ಪ್ರವಾಸೋದ್ಯಮ ಕೇಂದ್ರಗಳಲ್ಲಿ ತೆರೆಯುತ್ತೇವೆ. ರಾಜ್ಯದ ಪ್ರವಾಸಿ ತಾಣಗಳಿಗೆ ದೇಶ-ವಿದೇಶಗಳಿಂದ ಪ್ರತಿ ದಿನ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ಅವರಿಗೆ ಅನುಕೂಲ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಈ ರೀಚಾರ್ಜ್ ಕೇಂದ್ರ ತೆರೆಯಲಾಗುತ್ತಿದೆ ಎಂದರು.
ಡಾಟಾ ಬ್ಯಾಂಕ್ ಸ್ಥಾಪನೆ: ನಾಡು, ನುಡಿ, ಸಾಹಿತ್ಯ, ಕಲೆ ಸೇರಿದಂತೆ ಮತ್ತಿತರ ಕ್ಷೇತ್ರಗಳಲ್ಲಿ ಸಾಧಿನೆ ಮಾಡಿದ ಸಾಧಕರಿಗೆ ಸರ್ಕಾರವೇ ಗುರುತಿಸಿ ಪ್ರಶಸ್ತಿ ನೀಡಬೇಕು. ಆದರೆ, ದುರಂತವೆಂದರೆ ಅರ್ಜಿ ಹಾಕಿ ಪ್ರಶಸ್ತಿ ಪಡೆಯುವಂತಾಗಿದೆ ಎಂದು ವಿಷಾದಿಸಿದರು. ಆರ್ಥಿಕವಾಗಿ ಪ್ರಬಲರಾಗಿರುವವರು ಬೆಂಗಳೂರಿಗೆ ಬಂದು ಅರ್ಜಿ ಹಾಕುತ್ತಾರೆ. ಆದರೆ, ಅಷ್ಟೇನು ಸಬಲರಲ್ಲದವರು ಅರ್ಜಿ ಹಾಕಲು ಸಾಧ್ಯವಾಗುತ್ತಿಲ್ಲ. ಇದನ್ನು ತಪ್ಪಿಸಲು ಡಾಟಾ ಬ್ಯಾಂಕ್ ಸ್ಥಾಪನೆ ಮಾಡುತ್ತೇವೆ ಎಂದು ಸುನೀಲ್‍ಕುಮಾರ್ ಹೇಳಿದರು.
ಇದರ ಮೂಲಕ ಸಾಧಕರನ್ನು ಗುರುತಿಸಿ ಅವರಿಗೆ ಸರ್ಕಾರವೇ ಹುಡುಕಿ ಪ್ರಶಸ್ತಿ ಕೊಡಲಿದೆ. ಜತೆಗೆ ಅಮೃತ ಮಹೋತ್ಸವ ಕಾರ್ಯಕ್ರಮ ಮಾಡಲಾಗುವುದು. ಸ್ವಾತಂತ್ರ್ಯ ಹೋರಾಟಕ್ಕೆ ಕರ್ನಾಟಕದ ಕೊಡುಗೆಯನ್ನು ಚಿತ್ರಣದ ಮೂಲಕ ಹೊರ ತರಲಿದ್ದೇವೆ ಎಂದು ತಿಳಿಸಿದರು.
ಗ್ರಾಮೀಣ ಭಾಗಗಳಲ್ಲಿ ಕೃಷಿ ಪಂಪ್‍ಸೆಟ್ ಯೋಜನೆ ಮೂಲಕ 7 ಗಂಟೆ ವಿದ್ಯುತ್ ಪೂರೈಕೆ ಮಾಡಲು ಚಿಂತನೆ ನಡೆಸಲಾಗಿದೆ. ರಾಜ್ಯದ 60ಕ್ಕೂ ಹೆಚ್ಚು ಕಡೆ ಜಾಗಗÀಳಲ್ಲಿ ನಿರಂತರ ವಿದ್ಯುತ್ ಪೂರೈಕೆ ಮಾಡಲು ಯೋಜನೆ ರೂಪಿಸಲಾಗುತ್ತದೆ ಎಂದು ಸಚಿವರು ಮಾಹಿತಿ ನೀಡಿದರು.
ಇಲಾಖೆಯಲ್ಲಿ ಹಲವು ದಿನಗಳಿಂದ ಖಾಲಿ ಇರುವ ಲೈನ್‍ಮೆನ್‍ಗಳು, ಜೂನಿಯರ್ ಎಂಜಿನಿಯರ್ ಸೇರಿದಂತೆ ಬಾಕಿ ಇರುವ ಮತ್ತಿತರ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ವಹಿಸಲಾಗುತ್ತದೆ ಎಂದು ತಿಳಿಸಿದರು.
related stories
-
ಸುದ್ದಿ ಕಲಾತ್ಮಕ ಉಮಾಮಹೇಶ್ವರ ಶಿಲ್ಪ ಪತ್ತೆ
-
ಟಾಪ್ 10 ಸುದ್ದಿ ನ್ಯಾಯಾಂಗ ವ್ಯವಸ್ಥೆಯಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಹೆಚ್ಚಲಿ : ರಾಷ್ಟ್ರಪತಿ
-
ತಾಜಾ ಸುದ್ದಿ ದಾವಣಗೆರೆಯಲ್ಲಿ 120ಕ್ಕೂ ಹೆಚ್ಚು ಜನರಲ್ಲಿ ಡೆಂಗ್ಯೂ ಪತ್ತೆ