Dailyhunt Logo
  • Light mode
    Follow system
    Dark mode
    • Play Story
    • App Story
ಗೋವಾ ಜೈಲುಗಳಲ್ಲಿ ಕಠಿಣ ನಿಮಯ ಜಾರಿ : ಮೊಬೈಲ್‌ ಪತ್ತೆಯಾದರೆ 3 ವರ್ಷ ಜೈಲು ಶಿಕ್ಷೆ

ಗೋವಾ ಜೈಲುಗಳಲ್ಲಿ ಕಠಿಣ ನಿಮಯ ಜಾರಿ : ಮೊಬೈಲ್‌ ಪತ್ತೆಯಾದರೆ 3 ವರ್ಷ ಜೈಲು ಶಿಕ್ಷೆ

ಈ ಸಂಜೆ 1 week ago

ಣಜಿ,ಆ2- ಗೋವಾ ವಿಧಾನಸಭೆಯು ಜೈಲುಗಳ ಆವರಣದಲ್ಲಿ ಭದ್ರತೆಯನ್ನು ಬಿಗಿಗೊಳಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇರಿಸಿದ್ದು, ಜೈಲಿನೊಳಗೆ ನಡೆಯುವ ಕಾನೂನುಬಾಹಿರ ಚಟುವಟಿಕೆಗಳು, ಮೊಬೈಲ್‌ ಫೋನ್‌ಗಳ ಬಳಕೆ ಹಾಗೂ ನಿಷಿದ್ಧ ವಸ್ತುಗಳ ಕಳ್ಳಸಾಗಣೆಯನ್ನು ತಡೆಯಲು ಗೋವಾ ಕಾರಾಗೃಹ ಮತ್ತು ತಿದ್ದುಪಡಿ ಸೇವೆಗಳ ಮಸೂದೆ 2026 ಅನ್ನು ಅಂಗೀಕರಿಸಲಾಗಿದೆ.

ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ ಮಂಡಿಸಿದ ಈ ಹೊಸ ಮಸೂದೆಗೆ ಧ್ವನಿ ಮತದ ಮೂಲಕ ಅಧಿಕೃತ ಮುದ್ರೆ ಬಿದ್ದಿದೆ.

ಜೈಲಿನೊಳಗೆ ಮೊಬೈಲ್‌ ಫೋನ್‌ ಅಥವಾ ಯಾವುದೇ ನಿಷೇಧಿತ ಎಲೆಕ್ಟ್ರಾನಿಕ್‌ ಸಂವಹನ ಸಾಧನಗಳನ್ನು ಹೊಂದಿರುವುದು ಅಥವಾ ಬಳಸುವುದು ಇನ್ನು ಮುಂದೆ ಸಂಜ್ಞೇಯ ಮತ್ತು ಜಾಮೀನು ರಹಿತ ಅಪರಾಧವಾಗಿದೆ. ಇದಕ್ಕೆ 3 ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ 25,000 ರೂ.ಗಳವರೆಗೆ ದಂಡ ವಿಧಿಸಲಾಗುತ್ತದೆ. ಈಗಾಗಲೇ ಬೇರೆ ಪ್ರಕರಣಗಳಲ್ಲಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳಿಗೆ ಈ ಅಪರಾಧ ಸಾಬೀತಾದರೆ, ಅವರ ಹಿಂದಿನ ಶಿಕ್ಷೆಯ ಅವಧಿ ಮುಗಿದ ತಕ್ಷಣವೇ ಈ ಹೊಸ ಶಿಕ್ಷೆ ಜಾರಿಗೆ ಬರಲಿದೆ.

ಕೇವಲ ಕೈದಿಗಳು ಮಾತ್ರವಲ್ಲದೆ, ಅಂತಹ ಕೃತ್ಯಗಳಿಗೆ ಅಥವಾ ಅನಧಿಕೃತ ಸಂವಹನಕ್ಕೆ ತಿಳಿದೂ ಸಹಕರಿಸುವ ಅಥವಾ ಅವಕಾಶ ಕಲ್ಪಿಸುವ ಜೈಲು ಸಿಬ್ಬಂದಿ ಹಾಗೂ ಅಧಿಕಾರಿಗಳೂ ಸಹ ಕಠಿಣ ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ. ಜೈಲುಗಳಲ್ಲಿ ಮೊಬೈಲ್‌ ಬಳಕೆ ತಡೆಯಲು ಸುಧಾರಿತ ಜಾಮಿಂಗ್‌ ಪರಿಹಾರಗಳು, ಅನಿರೀಕ್ಷಿತ ತಪಾಸಣೆಗಳು ಹಾಗೂ ಹೆಚ್ಚಿನ ಅಪಾಯವಿರುವ ಬ್ಯಾರಕ್‌ಗಳಲ್ಲಿ ನಿರಂತರ ಗುಪ್ತಚರ ಕಣ್ಗಾವಲು ಇರಿಸಲಾಗುತ್ತದೆ.

ಕೈದಿಗಳು ಮತ್ತು ಸಿಬ್ಬಂದಿ ನಡುವೆ ಅನಧಿಕೃತ ಒಡನಾಟ ಬೆಳೆಯುವುದನ್ನು ತಪ್ಪಿಸಲು (ಕೈದಿ-ಸಿಬ್ಬಂದಿ ಸಂಬಂಧ), ಸೂಕ್ಷ್ಮ ಸೆಲ್‌ಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಯನ್ನು ಕಾಲಕಾಲಕ್ಕೆ ನಿಯಮಿತವಾಗಿ ಬದಲಾಯಿಸಲಾಗುತ್ತದೆ. ಈ ಮಸೂದೆಯು ಕೇಂದ್ರ ಗೃಹ ಸಚಿವಾಲಯದ ೞಮಾದರಿ ಕಾರಾಗೃಹಗಳು ಮತ್ತು ತಿದ್ದುಪಡಿ ಸೇವೆಗಳ ಕಾಯ್ದೆ, 2023ೞರ ಆಧಾರದ ಮೇಲೆ ರೂಪುಗೊಂಡಿದೆ. ಜೈಲುಗಳಲ್ಲಿ ಸಂಘಟಿತ ಅಪರಾಧ ಜಾಲಗಳು, ಸಾಕ್ಷಿಗಳಿಗೆ ಬೆದರಿಕೆ ಹಾಕುವುದು ಮತ್ತು ಹೊರಗಿನವರೊಂದಿಗೆ ಕೈದಿಗಳ ಅಕ್ರಮ ಸಂಪರ್ಕಕ್ಕೆ ಕಡಿವಾಣ ಹಾಕುವುದು ಈ ಕಾಯ್ದೆಯ ಮುಖ್ಯ ಉದ್ದೇಶವಾಗಿದೆ. ಇದರೊಂದಿಗೆ ಜೈಲಿನಲ್ಲಿ ಕೈದಿಗಳ ಪುನರ್ವಸತಿ, ಕೌಶಲ್ಯ ಅಭಿವೃದ್ಧಿ ಹಾಗೂ ಮಾನವ ಹಕ್ಕುಗಳ ರಕ್ಷಣೆಗೆ ಒತ್ತು ನೀಡುತ್ತಲೇ ಭದ್ರತೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ.

ಪಣಜಿ,ಆ2- ಗೋವಾ ವಿಧಾನಸಭೆಯು ಜೈಲುಗಳ ಆವರಣದಲ್ಲಿ ಭದ್ರತೆಯನ್ನು ಬಿಗಿಗೊಳಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇರಿಸಿದ್ದು, ಜೈಲಿನೊಳಗೆ ನಡೆಯುವ ಕಾನೂನುಬಾಹಿರ ಚಟುವಟಿಕೆಗಳು, ಮೊಬೈಲ್‌ ಫೋನ್‌ಗಳ ಬಳಕೆ ಹಾಗೂ ನಿಷಿದ್ಧ ವಸ್ತುಗಳ ಕಳ್ಳಸಾಗಣೆಯನ್ನು ತಡೆಯಲು ಗೋವಾ ಕಾರಾಗೃಹ ಮತ್ತು ತಿದ್ದುಪಡಿ ಸೇವೆಗಳ ಮಸೂದೆ 2026 ಅನ್ನು ಅಂಗೀಕರಿಸಲಾಗಿದೆ. ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ ಮಂಡಿಸಿದ ಈ ಹೊಸ ಮಸೂದೆಗೆ ಧ್ವನಿ ಮತದ ಮೂಲಕ ಅಧಿಕೃತ ಮುದ್ರೆ ಬಿದ್ದಿದೆ.

Dailyhunt
Disclaimer: This content has not been generated, created or edited by Dailyhunt. Publisher: eesanje