Friday, 23 Apr, 11.58 am ಈ ಸಂಜೆ

ರಾಷ್ಟ್ರೀಯ ಸುದ್ದಿ
ವಿಶ್ವದಾಖಲೆ ಮೀರಿ ಮುನ್ನುಗ್ಗಿದ ಭಾರತ: ಒಂದೇ ದಿನ 3.32 ಲಕ್ಷ ಮಂದಿಗೆ ಕೊರೊನಾ ದೃಢ

ನವದೆಹಲಿ,ಏ.23-ದೇಶದಲ್ಲಿ ಕೊರೊನಾ ಸೋಂಕಿನ ಪ್ರಮಾಣ ವಿಶ್ವದಾಖಲೆಯನ್ನು ಮೀರಿ ಮುನ್ನುಗ್ಗುತ್ತಿದೆ. ಕಳೆದ 24 ಗಂಟೆಗಳಲ್ಲಿ 3.32.730 ಲಕ್ಷ ಮಂದಿಗೆ ಮಹಾಮಾರಿ ಒಕ್ಕರಿಸಿದೆ. ಸೋಂಕಿನ ಈ ನಾಗಾಲೋಟದಿಂದ ದೇಶದ ಒಟ್ಟು ಸೋಂಕಿತರ ಸಂಖ್ಯೆ 1,62,63,695 ಕೋಟಿಯಾಗಿದೆ ಎಂದು ಕೇಂದ್ರ ಸಚಿವಾಲಯದ ಅಂಕಿ ಅಂಶಗಳು ಉಲ್ಲೇಖಿಸಿವೆ.

ಇದರ ಜತೆಗೆ ನಿನ್ನೆಯಿಂದ 2263 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಇದರಿಂದ ಮಹಾಮಾರಿಗೆ ಬಲಿಯಾದವರ ಒಟ್ಟು ಸಂಖ್ಯೆ 1,86,920 ಲಕ್ಷ ಮಂದಿಗೆ ಏರಿಕೆಯಾಗಿದೆ. ದಿನೇ ದಿನೇ ಚೇತರಿಕೆ ಪ್ರಮಾಣ ಕುಸಿಯುತ್ತಿದ್ದು, ಸಕ್ರಿಯ ಸೋಂಕಿತರ ಸಂಖ್ಯೆ 24 ಲಕ್ಷದ ಗಡಿ ದಾಟಿದೆ.

1.62 ಕೋಟಿ ಸೋಂಕಿತರ ಪೈಕಿ 1,36 ಕೋಟಿ ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಸೋಂಕು ಹೆಚ್ಚಳವಾಗುತ್ತಿರುವುದರಿಂದ ದೇಶದ್ಯಾಂತ ತಪಾಸಣೆ ಸಾಮಥ್ರ್ಯ ಹೆಚ್ಚಳ ಮಾಡಲಾಗಿದೆ. ಇದುವರೆಗೂ 27,44,45,653 ಮಂದಿಯ ಸ್ವಾಬ್ ಪರೀಕ್ಷೆ ನಡೆಸಲಾಗಿದೆ.

ಇದರ ಜೊತೆಗೆ ಲಸಿಕಾ ಆಂದೋಲನ ತ್ವರಿತಗೊಳಿಸಲಾಗಿದ್ದರೂ ಸೋಂಕು ಏರುಗತಿಯಲ್ಲಿ ಸಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: eesanje
Top