Wednesday, 16 Sep, 4.49 pm ePatrike.com

ಹೋಮ್
ಬರುತ್ತಿದೆ 10 ಕೋಟಿ ಡೋಸ್ ಕೋವಿಡ್ ಲಸಿಕೆ

epatrike: karnataka news

ಹೊಸದಿಲ್ಲಿ: ಕೇಂದ್ರ ಸರಕಾರ ಅನುಮತಿ ಣೀಡಿದರೇ ಶೀಘ್ರದಲ್ಲಿಯೇ ಭಾರತಕ್ಕೆ 10 ಕೋಟಿ ಡೋಸಿ‌ನಷ್ಟು ಕೋವಿಡ್ ಲಸಿಕೆ ಲಭ್ಯವಾಗಲಿದೆ.

ಕೋವಿಡ್ ಮಾರಿಗೆ ವಿಶ್ವದಲ್ಲಿಯೇ ಮೊದಲ ಲಸಿಕೆ ಕಂಡುಹಿಡಿದಿರುವ ರಷ್ಯವು ಭಾರತಕ್ಕೆ ಲಸಿಕೆ ಪೂರೈಸಲು ಸಿದ್ಧವಿರುವುದಾಗಿ ಹೇಳಿದೆ.

ಡಾ. ರೆಡ್ಡೀಸ್ ಲ್ಯಾಬ್ ಮೂಲಕ ತನ್ನ ಲಸಿಕೆ ಮಾರಾಟ ಮಾಡಲು ಸಿದ್ಧ ಎಂದು ರಷ್ಯ ಸರಕಾರವು ಹೇಳಿದೆ.

ಈ ಬಗ್ಗೆ ಕೇಂದ್ರ ಸರಕಾರ ನಿರ್ಧಾರ ಕೈಗೊಳ್ಳಬೇಕಿದ್ದು, ಅದು ಹಸಿರು ನಿಶಾನೆ ತೋರಿದರೇ ಭಾರೀ ಪ್ರಮಾಣದಲ್ಲಿ ಲಸಿಕೆ ಪೂರೈಕೆಯಾಗಲಿದೆ.

ಇತ್ತೀಚೆಗೆ ಮಾಸ್ಕೋದಲ್ಲಿ ನಡೆದ ಶೃಂಗಸಭೇ ಸಂದರ್ಭದಲ್ಲಿ ಭಾರತದ ಮಾರುಕಟ್ಟೆಗೆ ತಾನು ಅಭಿವೃದ್ಧಿಪಡಿಸಿರುವ ಸ್ಪುಟ್ನಿಕ್ ಲಸಿಕೆ ಪೂರೈಸಲು ಅನುಮತಿ ನೀಡುವಂತೆ ರಷ್ಯ ಸರಕಾರವು ಭಾರತವನ್ನು ಕೇಳಿತ್ತು.

ಈ ಮಧ್ಯೆ ಭಾರತದಲ್ಲಿಯೇ ಲಸಿಕೆ ಪ್ರಯೋಗ ಮುಂದುವರಿದ ಹಂತದಲ್ಲಿದ್ದು, ಹೊರ ದೇಶಗಳಿಂದ ಲಸಿಕೆ ತರಿಸಿಕೊಳ್ಳಬೇಕೆ ಬೇಡವೇ ಎನ್ನವುದು ಸರಕಾರದ ಜಿಜ್ಞಾಸೆಯಾಗಿದೆ.

ವರ್ಞಾಂತ್ಯದ ವೇಳೆಗೆ ದೇಶೀಯ ಲಸಿಕೆ ಸಿದ್ಧವಾಗುವ ಆಶಾಭಾವ ಇದ್ದು, ಅದನ್ನು ಯಾರಿಗೆಲ್ಲ ಮೊದಲು ನೀಡಬೇಕು ಎಂಬ ಕಟ್ಟಳೆಗಳನ್ನು ರೂಪಿಸುವ ಕೆಲಸದಲ್ಲಿ ಸರಕಾರವು ಈಗಾಗಲೇ ಕಾರ್‍ಯಪ್ರವೃತ್ತವಾಗಿದೆ.

Web Title: india to get 10 crore dose of covid vaccine

The post ಬರುತ್ತಿದೆ 10 ಕೋಟಿ ಡೋಸ್ ಕೋವಿಡ್ ಲಸಿಕೆ appeared first on epatrike.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: ePatrike
Top