Tuesday, 15 Sep, 4.18 pm ePatrike.com

ಹೋಮ್
ಮಿಂಟೊ ಸೇವೆ ಸ್ಥಗಿತ: ಸಾವಿರಾರು ಕಂಗಳು ಅತಂತ್ರ

epatrike: karnataka news

ಬೆಂಗಳೂರು: ಸಾವಿರಾರು ಜನರ ಬಾಳಿಗೆ ಬೆಳಕು ನೀಡಿರುವ ಮಿಂಟೊ ಕಣ್ಣಾಸ್ಪತ್ರೆ ಶಸ್ತ್ರ ಚಿಕಿತ್ಸೆಗೆ ಇನ್ನೂ ಬಾಗಿಲು ತೆರೆಯದೇ ಹಲವರು ಬದುಕನ್ನು ಅತಂತ್ರವಾಗಿಸಿದೆ.

ರಸ್ತೆ ಗಲ್ಲಿಗಳಲ್ಲಿರುವ ಬಾರು, ಪಬ್ಬುಗಳನ್ನು ತೆರೆಯಲು ಅನುಮತಿ ನೀಡಿರುವ ಸರಕಾರ ಕೋವಿಡ್ ನೆಪವೊಡ್ಡಿ ಮಿಂಟೊ ಆಸ್ಪತ್ರೆಯಲ್ಲಿ ಸ್ಥಗಿತಗೊಳಿಸಿರುವ ಕಣ್ಣಿನ ಶಸ್ತ್ರಚಿಕಿತ್ಸೆ ಮರು ಆರಂಭಕ್ಕೆ ಇನ್ನೂ ಮನಸ್ಸು ಮಾಡಿಲ್ಲ.

ಕಳೆದ ಆರು ತಿಂಗಳಿನಿಂದ ಮಿಂಟೊ ಆಸ್ಪತ್ರೆಯಲ್ಲಿ ಯಾವುದೇ ಶಸ್ತ್ರ ಚಿಕಿತ್ಸೆಗಳಾಗಿಲ್ಲ. ಇದರಿಂದಾಗಿ ತುರ್ತಾಗಿ ಚಿಕಿತ್ಸೆಯ ಅಗತ್ಯವಿದ್ದ ಅನೇಕರ ಬಳಿನಲ್ಲಿ ಶಾಶ್ವತ ಕತ್ತಲು ಕವಿಯುವ ಅಪಾಯ ತಲೆದೋರಿದೆ.

ಸುಮಾರು 15 ಸಾವಿರ ಮಂದಿ ಕಣ್ಣಿ ತುರ್ತು ಶಸ್ತ್ರ ಚಿಕಿತ್ಸೆಯ ಅವಶ್ಯಕತೆಯಲ್ಲಿದ್ದು, ಸರಕಾರದ ನೀತಿಯಿಂದಾಗಿ ಅಸಹಾಯಕರಾಗಿದ್ದಾರೆ.

ಕೊರೋನಾ ಹಿನ್ನೆಲೆಯಲ್ಲಿ ಜನರಿಗೆ ಅತಿ ಅವಶ್ಯಕವಾಗಿರುವ ರಾಷ್ಟ್ರೀಯ ಅಂಧತ್ವ ನಿವಾರಣಾ ಕಾರ್ಯಕ್ರಮವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ.

ಇದರಿಂದಾಗಿ ಅನೇಕರಿಗೆ ಭಾರೀ ತೊಂದರೆ ಉಂಟಾಗಿದೆ ಎನ್ನುತ್ತಾರೆ ರಾಷ್ಟ್ರೀಯ ನೇತ್ರಾಧಿಕಾರಿಗಳ ಸಂಘದ ಅಧ್ಯಕ್ಷ ಎಂ. ವೆಂಕಟೇಶ್.

ಸೀಕ್ತ ಸಮಯದಲ್ಲಿ ಕೆಟರಾಕ್ಟ್ ಶಸ್ತ್ರಚಿಕಿತ್ಸೆ, ಲೇಸರ್‌ ಚಿಕಿತ್ಸೆ, ಸೂಕ್ತ ಸಮಯದಲ್ಲಿ ಚಿಕಿತ್ಸೆ ನಡೆಯದಿದ್ದರೇ ಜನ ಅಂಧರಾಗುವ ಅಪಾಯ ಇದೆ.

ಪ್ರತಿದಿನ ಮಿಂಟೋ ಆಸ್ಪತ್ರೆಗೆ ಸಾವಿರಾರು ಸಂಖ್ಯೆಯಲ್ಲಿ ಜನ ಕಣ್ಣಿನ ಬಾಧೆ ನಿವಾರಣೆಗೆ ಆಗಮಿಸುತ್ತಾರೆ. ಆದರೆ ಸರಕಾರದ ಈ ನಿರ್ಲಕ್ಷ್ಯದಿಂದಾಗಿ ಹಲವಾರು ಮಂದಿ ಅಪಾಯದ ಅಂಚಿನಲ್ಲಿದ್ದಾರೆ ಎನ್ನುವುದು ವೆಂಕಟೇಶ್ ಅವರ ದೂರಾಗಿದೆ.

Web Title: thousands suffer as minto eye hospital yet to reopen for surgeries

The post ಮಿಂಟೊ ಸೇವೆ ಸ್ಥಗಿತ: ಸಾವಿರಾರು ಕಂಗಳು ಅತಂತ್ರ appeared first on epatrike.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: ePatrike
Top