Monday, 26 Apr, 5.24 pm Filmi Beat

ಬಾಲಿವುಡ್
ಗೌತಮ್ ಗಂಭೀರ್ ಫೌಂಡೇಶನ್‌ಗೆ 1 ಕೋಟಿ ನೆರವು ನೀಡಿದ ಅಕ್ಷಯ್ ಕುಮಾರ್

ದೆಹಲಿಯಲ್ಲಿ ಆಕ್ಸಿಜನ್ ಸಮಸ್ಯೆ ಎದುರಾಗಿದೆ. ಕೋವಿಡ್ ರೋಗಿಗಳಿಗೆ ಅಗತ್ಯವೆನಿಸುವಷ್ಟು ಆಕ್ಸಿಜನ್ ಸಿಗುತ್ತಿಲ್ಲ ಎಂಬ ವರದಿಗಳು ಆಗಿವೆ. ಇದೀಗ, ಸಂಸದ ಗೌತಮ್ ಗಂಭೀರ್ ಫೌಂಡೇಶನ್‌ಗೆ ಬಾಲಿವುಡ್ ನಟ ಅಕ್ಷಯ್ ಕುಮಾರ್ 1 ಕೋಟಿ ನೆರವು ನೀಡಿದ್ದಾರೆ.

ಅಕ್ಷಯ್ ಕುಮಾರ್ ಅವರು ಒಂದು ಕೋಟಿ ಸಹಾಯ ಮಾಡಿದ್ದಕ್ಕೆ ಗೌತಮ್ ಗಂಭೀರ್ ಟ್ವಿಟ್ಟರ್‌ ಮೂಲಕ ಧನ್ಯವಾದ ತಿಳಿಸಿದ್ದಾರೆ. ''ಈ ಕತ್ತಲೆಯಲ್ಲಿ ಪ್ರತಿಯೊಂದು ಸಹಾಯವು ಭರವಸೆಯ ಬೆಳಕಾಗುತ್ತದೆ'' ಎಂದಿದ್ದಾರೆ.

ಹೋಮ್ ಕ್ವಾರಂಟೈನ್ ನಲ್ಲಿದ್ದ ನಟ ಅಕ್ಷಯ್ ಕುಮಾರ್ ಆಸ್ಪತ್ರೆಗೆ ದಾಖಲು

''ಆಕ್ಸಿಜನ್, ಆಹಾರ ಹಾಗೂ ಔಷಧಿಗಳಿಗಾಗಿ ಈ ಹಣ ಬಳಕೆಯಾಗುತ್ತದೆ'' ಎಂದು ಗೌತಮ್ ಗಂಭೀರ್ ತಿಳಿಸಿದ್ದಾರೆ.

ಗಂಭೀರ್ ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಅಕ್ಷಯ್ ಕುಮಾರ್ ''ಇದು ಅತ್ಯಂತ ಕಠಿಣ ಸಮಯ. ಇಂತಹ ಸಂದರ್ಭದಲ್ಲಿ ನಾನು ನಿಮ್ಮ ಜೊತೆ ಕೈ ಜೋಡಿಸಿದ್ದು ಖುಷಿಯಾಗಿದೆ. ಆದಷ್ಟೂ ಬೇಗ ಈ ಸಮಸ್ಯೆಯಿಂದ ನಾವು ಹೊರಬರಬೇಕಿದೆ ಎಂದು ಆಶಿಸುತ್ತೇನೆ. ಸುರಕ್ಷಿತೆಯಂದಿರಿ'' ಎಂದಿದ್ದಾರೆ.

ದೇಶದಲ್ಲಿ ಯಾವುದೇ ಅವಘಡ, ಪರಿಸರ ವಿಕೋಪ ಹಾಗೂ ಇನ್ನಿತರ ಸಮಸ್ಯೆಗಳು ಉಂಟಾದಾಗ ನಟ ಅಕ್ಷಯ್ ಕುಮಾರ್ ತಮ್ಮಿಂದ ಆಗುವ ಸಹಾಯಗಳನ್ನು ಮಾಡಿದ್ದಾರೆ.

ಅಭಿಮಾನಿಗಳು ಏನೇ ಪ್ರಶ್ಮೆ ಕೇಳಿದ್ರೂ ಉತ್ತರ ಕೊಡ್ತಾರೆ - ರಮ್ಯಾ | Filmibeat Kannada

ಕಳೆದ ವರ್ಷ ಪ್ರಧಾನಿ ನಿಧಿಗೆ 25 ಕೋಟಿ ದೇಣಿಗೆ ನೀಡಿದ್ದರು. ಮುಂಬೈ ಪೊಲೀಸರ ಫೌಂಡೇಶನ್‌ಗೆ 2 ಕೋಟಿ ಕೊಟ್ಟಿದ್ದರು. ಅಸ್ಸಾಂ ಮುಖ್ಯಮಂತ್ರಿ ನಿಧಿಗೆ 1 ಕೋಟಿ ನೆರವು ಘೋಷಿಸಿದ್ದರು. 2015ರಲ್ಲಿ ಚೆನ್ನೈನಲ್ಲಿ ಪ್ರವಾಹ ಉಂಟಾದಾಗ 1 ಕೋಟಿ ಸಹಾಯ ಮಾಡಿದ್ದರು. ಕೇರಳಕ್ಕೂ ನೆರವು ನೀಡಿದ್ದರು.

source: filmibeat.com

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: FilmiBeat Kannada
Top