ಬಾಲಿವುಡ್
ರಾಷ್ಟ್ರ ಪ್ರಶಸ್ತಿ ವಿಜೇತೆ ನಿರ್ದೇಶಕಿ ಸುಮಿತ್ರಾ ಭಾವೆ ನಿಧನ
ಖ್ಯಾತ ಮರಾಠಿ ಚಲನಚಿತ್ರ ನಿರ್ದೇಶಕಿ, ಬರಹಗಾರ್ತಿ ಹಾಗೂ ರಾಷ್ಟ್ರ ಪ್ರಶಸ್ತಿ ವಿಜೇತೆ ಸುಮಿತ್ರಾ ಭಾವೆ ಅವರು ಸೋಮವಾರ (ಏಪ್ರಿಲ್ 19) ಪುಣೆಯಲ್ಲಿ ನಿಧನರಾಗಿದ್ದಾರೆ ಎಂದು ವರದಿಯಾಗಿದೆ.
ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಸುಮಿತ್ರಾ ಭಾವೆ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆಗೆ ಸ್ಪಂದಿಸದ ಕಾರಣ 78 ವರ್ಷದ ಹಿರಿಯ ನಿರ್ದೇಶಕಿ ಇಂದು ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ.
ರಾಷ್ಟ್ರ ಪ್ರಶಸ್ತಿ 'ಕೋರ್ಟ್' ಚಿತ್ರದ ನಟ ವೀರ ಸಾತಿದಾರ್ ಕೊರೊನಾದಿಂದ ಸಾವು
ಸುಮಿತ್ರಾ ಭಾವೆ ಅವರ ನಿಧನಕ್ಕೆ ಚಿತ್ರರಂಗದ ಹಲವರು ಸಂತಾಪ ಸೂಚಿಸಿದ್ದಾರೆ. ನಿರ್ದೇಶಕ ಸುನಿಲ್ ಸುಕ್ತಂಕರ್ ಮತ್ತು ಸುಮಿತ್ರಾ ಭಾವೆ ಜೋಡಿ ಹಲವು ಹಿಟ್ ಚಿತ್ರ ಜಂಟಿಯಾಗಿ ನಿರ್ದೇಶಿಸಿದ್ದು, ಮರಾಠಿ ಚಿತ್ರರಂಗದ ಏಳಿಗೆ ಹಾಗೂ ಬೆಳವಣಿಗೆಯಲ್ಲಿ ಇವರಿಬ್ಬರ ಕೊಡುಗೆ ಅಪಾರ ಎಂದು ಪರಿಗಣಿಸಲಾಗಿದೆ.
ಸುಮಿತ್ರಾ ಭಾವೆ ನಿರ್ದೇಶನದ ಕಾಸವ್, ಸಂಹಿತಾ, ಅಸ್ತು, ವೆಲ್ಕಮ್ ಹೋಮ್, ವಾಸ್ತುಪುರುಷ್, ದಹವಿ ಫಾ, ದೇವ್ರೈ ಅಂತಹ ಚಿತ್ರಗಳಿಗೆ ಹಲವು ಪ್ರಶಸ್ತಿಗಳು ಲಭ್ಯವಾಗಿದೆ.
ಸುಮಿತ್ರಾ ಭಾವೆ ಅವರ ಕಾಸವ್ ಸಿನಿಮಾ 64ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ ಅತ್ಯುತ್ತಮ ಸಿನಿಮಾ ಗೋಲ್ಡನ್ ಲೋಟಸ್ ಪ್ರಶಸ್ತಿ (ಸ್ವರ್ಣ ಕಮಲ) ಪಡೆದುಕೊಂಡಿದೆ.
ಇವತ್ತಿನ ಮುಖ್ಯಮಂತ್ರಿ ಯಡಿಯೂರಪ್ಪನಾ ವಿಜಯೇಂದ್ರನಾ?? | Filmibeat Kannada
ವಿಶೇಷವೆಂದರೆ, ಚೈತನ್ಯ ತಮ್ಹಾನೆ ಅವರ ಕೊನೆಯ 'The Disciple' ಚಿತ್ರಕ್ಕೆ ಸುಮಿತ್ರಾ ಭಾವೆ ಹಿನ್ನೆಲೆ ಧ್ವನಿ ನೀಡಿದ್ದರು.
source: filmibeat.com
related stories
-
ಅಂತಾರಾಷ್ಟ್ರೀಯ ಸುದ್ದಿ ಹಾಲಿವುಡ್ ನಟ ಅಂಥೋಣಿ ಹಾಪ್ಕಿನ್ಸ್ ಗೆ ಆಸ್ಕರ್ ಪ್ರಶಸ್ತಿ
-
ರಾಷ್ಟ್ರೀಯ ಪಂಡಿತ್ ರಾಜನ್ ಮಿಶ್ರಾ ನಿಧನಕ್ಕೆ ಪ್ರಧಾನ ಮಂತ್ರಿ ಸಂತಾಪ
-
ರಾಷ್ಟ್ರೀಯ ಆಸ್ಕರ್ ಪ್ರಶಸ್ತಿ ಪ್ರದಾನ: ನೋಮ್ಯಾಡ್ಲ್ಯಾಂಡ್ ಉತ್ತಮ ಚಿತ್ರ