ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಸೈಬರ್ ವಂಚಕರ ಜಾಲ ದಿನದಿಂದ ದಿನಕ್ಕೆ ಭೀಕರವಾಗುತ್ತಿದ್ದು, ರಾಜ್ಯದ ಇತಿಹಾಸದಲ್ಲೇ ಅತಿ ದೊಡ್ಡ ಎನ್ನಲಾದ 'ಡಿಜಿಟಲ್ ಅರೆಸ್ಟ್' (Digital Arrest) ಮಹಾವಂಚನೆ ಬೆಳಕಿಗೆ ಬಂದಿದೆ. ಶಿವಾಜಿನಗರದ ನಿವಾಸಿಯಾದ ಲಕ್ಷ್ಮಿ ರಾಮಮೂರ್ತಿ (74) ಎಂಬ ನಿವೃತ್ತ ಮಹಿಳಾ ಶಿಕ್ಷಕಿಯನ್ನು ಬರೋಬ್ಬರಿ 5 ತಿಂಗಳ ಕಾಲ ಡಿಜಿಟಲ್ ಕಾವಲಿನಲ್ಲಿಟ್ಟು, ಅವರಿಂದ ರೂ.
24 ಕೋಟಿ ಹಣವನ್ನು ಸೈಬರ್ ಖದೀಮರು ದೋಚಿದ್ದರು. ಬ್ಯಾಂಕ್ ಮ್ಯಾನೇಜರ್ ನೀಡಿದ ಮಾಹಿತಿಯ ಮೇರೆಗೆ ತನಿಖೆಗೆ ಮುಂದಾದ ಸಿಸಿಬಿ ಮತ್ತು ಕರ್ನಾಟಕ ಸೈಬರ್ ಕಮಾಂಡ್ ಪೊಲೀಸರು ದೇಶದ ವಿವಿಧೆಡೆ ದಾಳಿ ನಡೆಸಿ ಗೌರವ್ ಕುಮಾರ್, ಓಂ ಪ್ರಕಾಶ್ ರಾಜ್‌ಪುತ್ ಸೇರಿದಂತೆ ಐದು ಮಂದಿ ಅಂತರರಾಜ್ಯ ವಂಚಕರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ವೃದ್ದೆ ಲಕ್ಷ್ಮಿ ರಾಮಮೂರ್ತಿ ಅವರು ಇತ್ತೀಚೆಗೆ ಬೆಂಗಳೂರು ಮತ್ತು ಮುಂಬೈನಲ್ಲಿ ತಮ್ಮ ಪ್ರಾಪರ್ಟಿ (ಆಸ್ತಿ) ಮಾರಾಟ ಮಾಡಿದ್ದರು. ಇದರಿಂದ ಅವರಿಗೆ ಕೋಟ್ಯಂತರ ರೂಪಾಯಿ ಹಣ ಬ್ಯಾಂಕ್ ಖಾತೆಗೆ ಬಂದಿತ್ತು. ಈ ಬ್ಯಾಂಕ್ ವಹಿವಾಟು ಮಾಹಿತಿಯನ್ನುಪಡೆದ ಸೈಬರ್ ವಂಚಕರು, ಕಳೆದ ಜನವರಿ ತಿಂಗಳಲ್ಲಿ ವೃದ್ಧೆಯನ್ನು ಸಂಪರ್ಕಿಸಿದ್ದರು. ತಾವು ಸಿಬಿಐ (CBI) ಮತ್ತು ಇಡಿ (ED) ಅಧಿಕಾರಿಗಳೆಂದು ಪರಿಚಯಿಸಿಕೊಂಡ ಖದೀಮರು, "ನಿಮ್ಮ ಖಾತೆಗೆ ಬಂದಿರುವ ಹಣ ಅಕ್ರಮ ಹಣ ವರ್ಗಾವಣೆ ದಂಧೆಗೆ ಲಿಂಕ್ ಆಗಿದೆ" ಎಂದು ಹೆದರಿಸಿದ್ದರು. ಅಲ್ಲಿಂದ ಮೇ ತಿಂಗಳವರೆಗೆ ವೃದ್ಧೆಯನ್ನು ನಿರಂತರವಾಗಿ ವಿಡಿಯೋ ಕಾಲ್ ಮೂಲಕ ಕಣ್ಗಾವಲಿನಲ್ಲಿಟ್ಟು, ಯಾರಿಗೂ ವಿಷಯ ತಿಳಿಸದಂತೆ 'ಡಿಜಿಟಲ್ ಅರೆಸ್ಟ್' ಮಾಡಿ ತೀವ್ರ ಮಾನಸಿಕ ಒತ್ತಡ ಹೇರಿದ್ದರು. ಅಕೌಂಟ್ ವೆರಿಫಿಕೇಶನ್ ಹೆಸರಿನಲ್ಲಿ ಹಂತ-ಹಂತವಾಗಿ ಬರೋಬ್ಬರಿ 24 ಕೋಟಿ ರೂಪಾಯಿಯನ್ನು ವಿವಿಧ 22 ಮುದ್ರಾ ಅಕೌಂಟ್‌ಗಳಿಗೆ ವರ್ಗಾವಣೆ ಮಾಡಿಸಿಕೊಂಡಿದ್ದರು.
ಬ್ಯಾಂಕ್ ಮ್ಯಾನೇಜರ್ ಸಮಯಪ್ರಜ್ಞೆ; ಆಪತ್ಬಾಂಧವರಾದ ಪೊಲೀಸರು!
ಕೋಟಿ ಕೋಟಿ ಹಣ ಕೊಟ್ಟರೂ ವಂಚಕರ ದಾಹ ತೀರಿರಲಿಲ್ಲ. "ಇನ್ನೂ ಹಣ ನೀಡದಿದ್ದರೆ ಜೈಲಿಗೆ ಹಾಕ್ತೀವಿ" ಎಂದು ಹೆದರಿಸಿದ್ದಕ್ಕೆ, ವೃದ್ಧೆ ಲಕ್ಷ್ಮಿ ಅವರು ತಮ್ಮ ಮನೆಯಲ್ಲಿದ್ದ 1 ಕೆಜಿ 300 ಗ್ರಾಂ ಚಿನ್ನದ ಒಡವೆಗಳನ್ನು ಅಡಮಾನ ಇಟ್ಟು ಹಣ ಪಡೆಯಲು ಐಸಿಐಸಿಐ ಬ್ಯಾಂಕ್‌ನ ಕಂಟೋನ್ಮೆಂಟ್ ಬ್ರಾಂಚ್‌ಗೆ ಬಂದಿದ್ದರು. ವೃದ್ಧೆ ಇಷ್ಟೊಂದು ದೊಡ್ಡ ಪ್ರಮಾಣದ ಚಿನ್ನಾಭರಣ ತಂದಿರುವುದನ್ನು ಕಂಡು ಅನುಮಾನಗೊಂಡ ಬ್ಯಾಂಕ್ ಮ್ಯಾನೇಜರ್, ತಕ್ಷಣವೇ ಸೈಬರ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಬ್ಯಾಂಕ್‌ಗೆ ಧಾವಿಸಿದ ಸಿಸಿಬಿ ಸೈಬರ್ ಪೊಲೀಸರ ತಂಡ ವೃದ್ಧೆಯನ್ನು ವಿಚಾರಿಸಿದೆ. ಮೊದಮೊದಲು ಭಯದಿಂದ ಬಾಯಿಬಿಡದ ವೃದ್ಧೆ, ಪೊಲೀಸರು ಕೌನ್ಸೆಲಿಂಗ್ ನಡೆಸಿ ಧೈರ್ಯ ತುಂಬಿದಾಗ ತಾನು ಡಿಜಿಟಲ್ ಅರೆಸ್ಟ್ ಆಗಿರುವ ಸತ್ಯ ಬಿಚ್ಚಿಟ್ಟಿದ್ದಾರೆ.
ದೇಶಾದ್ಯಂತ ಸಿಸಿಬಿ ಬೇಟೆ- 5 ಮಂದಿ ಬಂಧನ
ವೃದ್ಧೆಯಿಂದ ದೂರು ದಾಖಲಿಸಿಕೊಂಡ ತಕ್ಷಣ ಕಾರ್ಯಾಚರಣೆಗೆ ಇಳಿದ ಪೊಲೀಸರು, ವಿದೇಶದಲ್ಲಿರುವ ವೃದ್ಧೆಯ ಮಕ್ಕಳಿಗೆ ಮಾಹಿತಿ ನೀಡಿದ್ದಾರೆ. ತದನಂತರ ತಾಂತ್ರಿಕ ವಿಶ್ಲೇಷಣೆ ನಡೆಸಿ ಮುಂಬೈ, ಅಲಹಾಬಾದ್, ದೆಹಲಿ ಮೂಲದ ಆರೋಪಿಗಳಾದ ಗೌರವ್ ಕುಮಾರ್, ಓಂ ಪ್ರಕಾಶ್ ರಾಜ್‌ಪುತ್ ಸೇರಿದಂತೆ ಐವರನ್ನು ಕಂಬಿ ಹಿಂದೆ ತಳ್ಳಿದ್ದಾರೆ.: ವಂಚಕರು ಹಣ ವರ್ಗಾವಣೆ ಮಾಡಿಕೊಂಡಿದ್ದ ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡಲಾಗಿದ್ದು, ಸದ್ಯಕ್ಕೆ 60 ಲಕ್ಷಕ್ಕೂ ಅಧಿಕ ಹಣವಿರುವ ಖಾತೆಗಳನ್ನು ಸೀಜ್ ಮಾಡಲಾಗಿದೆ. ಸೈಬರ್ ಹೆಲ್ಪ್‌ಲೈನ್ ಮೂಲಕ ಮತ್ತಷ್ಟು ಹಣವನ್ನು ಹೋಲ್ಡ್ ಮಾಡಲು ಪೊಲೀಸರು ಯತ್ನಿಸುತ್ತಿದ್ದಾರೆ.
ನಿಮ್ಮ ವಾಟ್ಸಾಪ್ ಅಥವಾ ವಿಡಿಯೋ ಕಾಲ್‌ನಲ್ಲಿ ಯಾರಾದರೂ ಅಧಿಕಾರಿಗಳ ಸೋಗಿನಲ್ಲಿ ಬಂದು ಹೆದರಿಸಿದರೆ ಭಯಪಡಬೇಡಿ. ಕಾನೂನಿನಲ್ಲಿ 'ಡಿಜಿಟಲ್ ಅರೆಸ್ಟ್' ಎಂಬ ಯಾವುದೇ ವ್ಯವಸ್ಥೆ ಇಲ್ಲ ಎಂದು ಪೊಲೀಸರು ಸಾರ್ವಜನಿಕರಿಗೆ ಮತ್ತೊಮ್ಮೆ ಎಚ್ಚರಿಸಿದ್ದಾರೆ.
ವೃದ್ದೆ ಲಕ್ಷ್ಮಿ ರಾಮಮೂರ್ತಿ ಅವರು ಇತ್ತೀಚೆಗೆ ಬೆಂಗಳೂರು ಮತ್ತು ಮುಂಬೈನಲ್ಲಿ ತಮ್ಮ ಪ್ರಾಪರ್ಟಿ (ಆಸ್ತಿ) ಮಾರಾಟ ಮಾಡಿದ್ದರು. ಇದರಿಂದ ಅವರಿಗೆ ಕೋಟ್ಯಂತರ ರೂಪಾಯಿ ಹಣ ಬ್ಯಾಂಕ್ ಖಾತೆಗೆ ಬಂದಿತ್ತು. ಈ ಬ್ಯಾಂಕ್ ವಹಿವಾಟು ಮಾಹಿತಿಯನ್ನುಪಡೆದ ಸೈಬರ್ ವಂಚಕರು, ಕಳೆದ ಜನವರಿ ತಿಂಗಳಲ್ಲಿ ವೃದ್ಧೆಯನ್ನು ಸಂಪರ್ಕಿಸಿದ್ದರು. ತಾವು ಸಿಬಿಐ (CBI) ಮತ್ತು ಇಡಿ (ED) ಅಧಿಕಾರಿಗಳೆಂದು ಪರಿಚಯಿಸಿಕೊಂಡ ಖದೀಮರು, "ನಿಮ್ಮ ಖಾತೆಗೆ ಬಂದಿರುವ ಹಣ ಅಕ್ರಮ ಹಣ ವರ್ಗಾವಣೆ ದಂಧೆಗೆ ಲಿಂಕ್ ಆಗಿದೆ" ಎಂದು ಹೆದರಿಸಿದ್ದರು.ಅಲ್ಲಿಂದ ಮೇ ತಿಂಗಳವರೆಗೆ ವೃದ್ಧೆಯನ್ನು ನಿರಂತರವಾಗಿ ವಿಡಿಯೋ ಕಾಲ್ ಮೂಲಕ ಕಣ್ಗಾವಲಿನಲ್ಲಿಟ್ಟು, ಯಾರಿಗೂ ವಿಷಯ ತಿಳಿಸದಂತೆ 'ಡಿಜಿಟಲ್ ಅರೆಸ್ಟ್' ಮಾಡಿ ತೀವ್ರ ಮಾನಸಿಕ ಒತ್ತಡ ಹೇರಿದ್ದರು. ಅಕೌಂಟ್ ವೆರಿಫಿಕೇಶನ್ ಹೆಸರಿನಲ್ಲಿ ಹಂತ-ಹಂತವಾಗಿ ಬರೋಬ್ಬರಿ 24 ಕೋಟಿ ರೂಪಾಯಿಯನ್ನು ವಿವಿಧ 22 ಮುದ್ರಾ ಅಕೌಂಟ್‌ಗಳಿಗೆ ವರ್ಗಾವಣೆ ಮಾಡಿಸಿಕೊಂಡಿದ್ದರು.
ಬ್ಯಾಂಕ್ ಮ್ಯಾನೇಜರ್ ಸಮಯಪ್ರಜ್ಞೆ: ಆಪತ್ಬಾಂಧವರಾದ ಪೊಲೀಸರು!
ಕೋಟಿ ಕೋಟಿ ಹಣ ಕೊಟ್ಟರೂ ವಂಚಕರ ಧಾಹ ತೀರಿರಲಿಲ್ಲ. "ಇನ್ನೂ ಹಣ ನೀಡದಿದ್ದರೆ ಜೈಲಿಗೆ ಹಾಕ್ತೀವಿ" ಎಂದು ಹೆದರಿಸಿದ್ದಕ್ಕೆ, ವೃದ್ಧೆ ಲಕ್ಷ್ಮಿ ಅವರು ತಮ್ಮ ಮನೆಯಲ್ಲಿದ್ದ 1 ಕೆಜಿ 300 ಗ್ರಾಂ ಚಿನ್ನದ ಒಡವೆಗಳನ್ನು ಅಡಮಾನ ಇಟ್ಟು ಹಣ ಪಡೆಯಲು ಐಸಿಐಸಿಐ ಬ್ಯಾಂಕ್‌ನ ಕಂಟೋನ್ಮೆಂಟ್ ಬ್ರಾಂಚ್‌ಗೆ ಬಂದಿದ್ದರು.ವೃದ್ಧೆ ಇಷ್ಟೊಂದು ದೊಡ್ಡ ಪ್ರಮಾಣದ ಚಿನ್ನಾಭರಣ ತಂದಿರುವುದನ್ನು ಕಂಡು ಅನುಮಾನಗೊಂಡ ಬ್ಯಾಂಕ್ ಮ್ಯಾನೇಜರ್, ತಕ್ಷಣವೇ ಸೈಬರ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಬ್ಯಾಂಕ್‌ಗೆ ಧಾವಿಸಿದ ಸಿಸಿಬಿ ಸೈಬರ್ ಪೊಲೀಸರ ತಂಡ ವೃದ್ಧೆಯನ್ನು ವಿಚಾರಿಸಿದೆ. ಮೊದಮೊದಲು ಭಯದಿಂದ ಬಾಯಿಬಿಡದ ವೃದ್ಧೆ, ಪೊಲೀಸರು ಕೌನ್ಸೆಲಿಂಗ್ ನಡೆಸಿ ಧೈರ್ಯ ತುಂಬಿದಾಗ ತಾನು ಡಿಜಿಟಲ್ ಅರೆಸ್ಟ್ ಆಗಿರುವ ಸತ್ಯ ಬಿಚ್ಚಿಟ್ಟಿದ್ದಾರೆ.
#DigitalArrest #CyberCrime #BengaluruCyberPolice #CCBBangalore #CyberFraud #LaxmiRamamurthy #Shivajinagar #ICICIBank #CyberSafety #KannadaNews #FreedomTV #BengaluruAlert #InterStateGangDigitalArrest #CyberCrime #BengaluruCyberPolice #CCBBangalore #CyberFraud #LaxmiRamamurthy #Shivajinagar #ICICIBank #CyberSafety #KannadaNews #FreedomTV #BengaluruAlert #InterStateGang
