Dailyhunt Logo
  • Light mode
    Follow system
    Dark mode
    • Play Story
    • App Story

ಕೇರಳದಲ್ಲಿ ಯುಡಿಎಫ್ ಯುಗ - ವಿ.ಡಿ. ಸತೀಶನ್ ಸಂಪುಟದಲ್ಲಿ 20 ಸಚಿವರು

Freedomtv 1 week ago

ತಿರುವನಂತಪುರ: ಕೇರಳ ರಾಜಕೀಯದಲ್ಲಿ ಹೊಸ ಅಧ್ಯಾಯ ಆರಂಭವಾಗಿದೆ. ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (UDF) ಸರ್ಕಾರ ರಚನೆಯಾಗಿದ್ದು ವಿ.ಡಿ. ಸತೀಶನ್ ಅವರು ನೂತನ ಮುಖ್ಯಮಂತ್ರಿಯಾಗಿ ಗದ್ದುಗೆಗೇರಿದರು. ಈ ವಿನೂತನ ಸಂಪುಟದಲ್ಲಿ ಹಳೆಯ ಅನುಭವ ಮತ್ತು ಹೊಸ ಉತ್ಸಾಹದ ಸಮ್ಮಿಲನ ಕಂಡುಬಂದಿದೆ.

ನೂತನ ಸಚಿವ ಸಂಪುಟ
ವಿ.ಡಿ. ಸತೀಶನ್ ನೇತೃತ್ವದ ಸಂಪುಟದಲ್ಲಿ ಒಟ್ಟು 20 ಸಚಿವರು ಇರಲಿದ್ದು, ಈ ಪೈಕಿ 14 ಮಂದಿ ಹೊಸಬರಿಗೆ ಅವಕಾಶ ನೀಡುವ ಮೂಲಕ ಕಾಂಗ್ರೆಸ್ ಹೈಕಮಾಂಡ್ ಅಚ್ಚರಿ ಮೂಡಿಸಿದೆ. ತಮಿಳುನಾಡಿನ ಹೆಚ್ಚುವರಿ ಉಸ್ತುವಾರಿ ಹೊಂದಿರುವ ರಾಜ್ಯಪಾಲ ಆರ್.ವಿ. ಅರ್ಕ್ಲೇಕರ್ ಅವರಿಗೆ ಸಚಿವರ ಪಟ್ಟಿಯನ್ನು ಅಧಿಕೃತವಾಗಿ ಹಸ್ತಾಂತರಿಸಲಾಯಿತು. ಹಿರಿಯ ನಾಯಕರಾದ ರಮೇಶ್ ಚೆನ್ನಿತ್ತಲ ಅವರು ಸಂಪುಟದಲ್ಲಿ ಸ್ಥಾನ ಪಡೆದಿದ್ದಾರೆ.

ನೂತಸ ಸಚಿವ ಸಂಪುಟದಲ್ಲಿ 20 ಸಚಿವರು

ಮಿತ್ರಪಕ್ಷಗಳ ಪಾಲುದಾರಿಕೆ
ಯುಡಿಎಫ್ ಮೈತ್ರಿಕೂಟದ ಪ್ರಮುಖ ಪಾಲುದಾರ ಪಕ್ಷವಾದ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (IUML) ಈ ಬಾರಿ 5 ಸಚಿವ ಸ್ಥಾನಗಳನ್ನು ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಪಿ.ಕೆ. ಕುನ್ಹಾಲಿಕುಟ್ಟಿ, ಕೆ.ಎಂ. ಶಾಜಿ, ವಿ. ಅಬ್ದುಲ್ ಗಫೂರ್, ಎನ್. ಶಂಸುದ್ದೀನ್ ಮತ್ತು ಪಿ.ಕೆ. ಬಶೀರ್ ಇವರು IUML ನೂತನ ಸಚಿವರುಗಳಾಗಿದ್ದಾರೆ.ಇತರ ಮಿತ್ರಪಕ್ಷಗಳಿಂದ ಕೇರಳ ಕಾಂಗ್ರೆಸ್‌ನಿಂದ ಮಾನ್ಸ್ ಜೋಸೆಫ್ ಮತ್ತು ಅನೂಪ್ ಜಾಕೋಬ್, ಆರ್‌ಎಸ್‌ಪಿಯಿಂದ ಶಿಬು ಬೇಬಿ ಜಾನ್ ಹಾಗೂ ಸಿಎಂಪಿ ಪಕ್ಷದಿಂದ ಸಿ.ಪಿ. ಜಾನ್ ಸಂಪುಟ ಸೇರಲಿದ್ದಾರೆ.

ಸರಳತೆಗೆ ಆದ್ಯತೆ- ಸತೀಶನ್ ಹೊಸ ಆದೇಶ!
ಇಂಧನ ಉಳಿತಾಯ ಮತ್ತು ಸಾರ್ವಜನಿಕ ಹಣ ಪೋಲಾಗುವುದನ್ನು ತಡೆಯಲು ನೂತನ ಸಿಎಂ ವಿ.ಡಿ. ಸತೀಶನ್ ಕ್ರಾಂತಿಕಾರಿ ನಿರ್ಧಾರ ಕೈಗೊಂಡಿದ್ದಾರೆ. ಕೇಂದ್ರದ ಸಲಹೆಯಂತೆ, ಸಚಿವರ ಸಂಚಾರದ ವೇಳೆ ಯಾವುದೇ ಬೆಂಗಾವಲು ವಾಹನಗಳು, ಭದ್ರತಾ ವಾಹನಗಳು ಅಥವಾ ಆಂಬ್ಯುಲೆನ್ಸ್‌ಗಳು ಇರಬಾರದು ಎಂದು ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ ಈ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ,ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ,ತೆಲಂಗಾಣ ಸಿಎಂ ರೇವಂತ್ ರೆಡ್ಡಿ, ಹಿಮಾಚಲ ಸಿಎಂ ಸುಖವಿಂದರ್ ಸುಖು,ಕರ್ನಾಟಕ ಡಿಸಿಎಂ ಡಿ.ಕೆ. ಶಿವಕುಮಾರ್ ಭಾಗವಹಿಸಿದ್ದರು.

#FreedomTV #KeralaPolitics #VDSatheesan #UDFGovernment #KeralaCabinet #RahulGandhi #Congress #IUML #BreakingNews #KeralaNewCM #PoliticalUpdate

Dailyhunt
Disclaimer: This content has not been generated, created or edited by Dailyhunt. Publisher: Freedomtv