Dailyhunt Logo
  • Light mode
    Follow system
    Dark mode
    • Play Story
    • App Story

ಮಹಿಳೆಯರಿಗೆ ಉಚಿತ ಸಾರಿಗೆ-ಕೇರಳ ಸರ್ಕಾರ ಗ್ರೀನ್ ಸಿಗ್ನಲ್

Freedomtv 1 week ago

ತಿರುವನಂತಪುರಂ: ಕೇರಳದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವ ವಿ.ಡಿ. ಸತೀಶನ್ ನೇತೃತ್ವದ ಯುಡಿಎಫ್ (UDF) ಸರ್ಕಾರವು ತನ್ನ ಮೊದಲ ಸಚಿವ ಸಂಪುಟ ಸಭೆಯಲ್ಲೇ ಜನಪರ ಯೋಜನೆಗಳ ಸುರಿಮಳೆಗರೆದಿದೆ. ಚುನಾವಣಾ ಪ್ರಚಾರದ ವೇಳೆ ನೀಡಿದ್ದ 'ಇಂದಿರಾ ಕ್ಯಾಂಟೀನ್' ಹಾಗೂ ಸರ್ಕಾರಿ ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಯೋಜನೆಗಳನ್ನು ಸರ್ಕಾರ ಅಧಿಕೃತವಾಗಿ ಘೋಷಿಸಿದೆ.

ಜೂನ್ 15 ರಿಂದಲೇ ಕೇರಳದಲ್ಲಿ ಮಹಿಳೆಯರ ಅನುಕೂಲಕ್ಕಾಗಿ ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ 'ಉಚಿತ ಪ್ರಯಾಣ'ವನ್ನು ವಿ.ಡಿ.ಸತೀಶನ್ ಸರ್ಕಾರ ಘೋಷಿಸಿದೆ. ಈ ಯೋಜನೆ ಕರ್ನಾಟಕದ 'ಶಕ್ತಿ' ಯೋಜನೆಯ ನಕಲು ಎಂಬುದು ಕರ್ನಾಟಕಕ್ಕೆ ಹೆಮ್ಮೆಯೇ ಸರಿ. ಕೆಎಸ್‌ಆರ್‌ಟಿಸಿ (KSRTC) ಬಸ್‌ಗಳಲ್ಲಿ ಮಹಿಳೆಯರು ಕೆಲಸ ಕಾರ್ಯ, ತಮ್ಮ ನೆಂಟರು ಹಾಗೂ ದೇವಸ್ಥಾನಗಳಿಗೆ ಪ್ರಯಾಣಿಸಲು ಈ ಸೇವೆಯನ್ನು ಮೀಸಲಿಡಲಾಗಿದೆ. ಇದರ ವಿವರವಾದ ಮಾರ್ಗಸೂಚಿಗಳನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಸರ್ಕಾರ ತಿಳಿಸಿದೆ.

ಅಂಗನವಾಡಿ ಸಿಬ್ಬಂದಿ ಆಶಾ ಕಾರ್ಯಕರ್ತರ ಗೌರವಧನದಲ್ಲಿ ರೂ. 3000 ಹೆಚ್ಚಳ ಮಾಡಿದ್ದು ಅವರಿಗೆ ಒಟ್ಟಾರೆ ರೂ.12000 ಸಿಗಲಿದೆ. ಇದರೊಂದಿಗೆ ಭವಿಷ್ಯದಲ್ಲಿ ಅವರಿಗೆ ನಿವೃತ್ತಿ ಪ್ರಯೋಜನ ಪ್ಯಾಕೇಜ್ (Retirement Package) ನೀಡುವ ಕುರಿತು ಸರ್ಕಾರ ಚಿಂತನೆ ನಡೆಸಿದೆ.ಅಂತೆಯೇ ಅಂಗನವಾಡಿ ಸಿಬ್ಬಂದಿಯ ವೇತನದಲ್ಲಿ ರೂ.1,000 ಹೆಚ್ಚಳ ಮಾಡಲಾಗಿದೆ.

ವೃದ್ಧರಿಗಾಗಿ ಜಪಾನ್ ಮಾದರಿ ತಂತ್ರಜ್ಞಾನ
ದೇಶದಲ್ಲಿ ಇದೇ ಮೊದಲ ಬಾರಿಗೆ ವೃದ್ಧರು ಮತ್ತು ಹಿರಿಯ ನಾಗರಿಕರಿಗಾಗಿ ಪ್ರತ್ಯೇಕ ಇಲಾಖೆಯನ್ನು ಸೃಷ್ಟಿಸಲು ಸರ್ಕಾರ ನಿರ್ಧರಿಸಿದೆ. ಹಿರಿಯ ನಾಗರಿಕರ ಆರೈಕೆಗಾಗಿ ಜಪಾನ್ ಮಾದರಿಯ ಅಂಶಗಳನ್ನು ಅಧ್ಯಯನ ಮಾಡಿ ಕೇರಳದಲ್ಲಿ ಅಳವಡಿಸಿಕೊಳ್ಳಲಾಗುವುದು ಎಂದು ಸಿಎಂ ವಿ.ಡಿ. ಸತೀಶನ್ ತಿಳಿಸಿದ್ದಾರೆ.

ವಿಧಾನಸಭೆಯ ನೂತನ ಅಧಿವೇಶನವು ಮೇ 21ರಂದು ಆರಂಭವಾಗಲಿದ್ದು, ಮೇ 22ರಂದು ಸ್ಪೀಕರ್ ಚುನಾವಣೆ ನಡೆಯಲಿದೆ. ಮೇ 29ರಂದು ಹಂಗಾಮಿ ಸ್ಪೀಕರ್ ಜಿ. ಸುಧಾಕರನ್ (ಪಕ್ಷೇತರ ಶಾಸಕ) ನೇತೃತ್ವದಲ್ಲಿ ರಾಜ್ಯಪಾಲರ ಭಾಷಣ ನೆರವೇರಲಿದೆ. ಅಧಿಕಾರಕ್ಕೆ ಬಂದ ಮೊದಲ ದಿನವೇ ಆರ್ಥಿಕ ಪರಿಸ್ಥಿತಿಯ ಕುರಿತು ಶ್ವೇತಪತ್ರ ಹೊರಡಿಸಲು ಸಚಿವ ಸಂಪುಟ ನಿರ್ಧರಿಸಿರುವುದು ರಾಜ್ಯದ ಆರ್ಥಿಕ ಶಿಸ್ತಿಗೆ ಸರ್ಕಾರ ಒತ್ತು ನೀಡುತ್ತಿರುವುದು ಶ್ಲಾಘನೀಯ.

#FreedomTV #KeralaNews #VDSatheesan #UDFGovernment #FreeBusTravel #WomenEmpowerment #IndiraGuarantees #KeralaPolitics #KSRTC #AshaWorkers #SeniorCitizenDept #BreakingNewsKannada #KeralaCabinet #JusticeForWomen #NewGovernment

Dailyhunt
Disclaimer: This content has not been generated, created or edited by Dailyhunt. Publisher: Freedomtv