ಚೆನ್ನೈ: ಸರ್ಕಾರಿ ಶಾಲಾ ಮಕ್ಕಳಿಗೆ ಭರ್ಜರಿ ಗುಡ್ ನ್ಯೂಸ್ ನೀಡಲು ತಮಿಳುನಾಡು ಸರ್ಕಾರ ಮುಂದಾಗಿದೆ. ಶಾಲಾ ಮಕ್ಕಳ ಬಿಸಿಯೂಟ ಯೋಜನೆಯಲ್ಲಿ ಬದಲಾವಣೆ ತರಲು ಚಿಂತನೆ ನಡೆಸಿರುವ ತಮಿಳುನಾಡು ಸರ್ಕಾರ, ಇನ್ನು ಮುಂದೆ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಸಿದ್ಧತೆ ನಡೆಸಿದೆ.
ರಾಜ್ಯದ ಎಲ್ಲ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಬಿಸಿಯೂಟದ ಜೊತೆಗೆ ಚಿಕನ್ ಬಿರಿಯಾನಿ ನೀಡುವುದಾಗಿ ಶಿಕ್ಷಣ ಸಚಿವ ರಾಜ್ ಮೋಹನ್ ಅವರು ಅಧಿಕೃತವಾಗಿ ಪ್ರಮುಖ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಮಕ್ಕಳಿಗೆ ಪೌಷ್ಟಿಕಾಂಶಯುಕ್ತ ಹಾಗೂ ಅವರ ನೆಚ್ಚಿನ ಊಟವನ್ನು ಶಾಲೆಗಳಲ್ಲೇ ಒದಗಿಸಬೇಕು ಎಂಬುದು ಮುಖ್ಯಮಂತ್ರಿ ವಿಜಯ್ ಅವರ ಕನಸಾಗಿದೆ. ಸಿಎಂ ಅವರ ಈ ಮಹತ್ವಾಕಾಂಕ್ಷೆಯ ಆಶಯದಂತೆ, ಬಿಸಿಯೂಟದ ಮೆನುವಿನಲ್ಲಿ ಚಿಕನ್ ಬಿರಿಯಾನಿಯನ್ನು ಸೇರಿಸುವ ಕುರಿತು ಗಂಭೀರ ಪ್ರಸ್ತಾವನೆಯನ್ನು ಸಿದ್ಧಪಡಿಸಲಾಗಿದೆ.
ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ವಾರದಲ್ಲಿ ಒಂದು ದಿನ ಚಿಕನ್ ಬಿರಿಯಾನಿಯನ್ನು ಬಿಸಿಯೂಟದ ರೂಪದಲ್ಲಿ ನೀಡಲು ಯೋಜಿಸಲಾಗಿದೆ. ಈ ನೂತನ ಉಪಕ್ರಮದಿಂದ ಶಾಲೆಯಲ್ಲಿ ಮಕ್ಕಳ ಹಾಜರಾತಿ ಹೆಚ್ಚಾಗುವುದರ ಜೊತೆಗೆ, ಬಡ ಮತ್ತು ಮಧ್ಯಮ ವರ್ಗದ ಮಕ್ಕಳಿಗೆ ಉತ್ತಮ ಪೌಷ್ಟಿಕ ಆಹಾರ ದೊರೆತಂತಾಗುತ್ತದೆ.

