Tuesday, 07 Sep, 9.54 am Good Returns

ಸುದ್ದಿ
ಸೆಪ್ಟೆಂಬರ್ 07ರ ಪೆಟ್ರೋಲ್, ಡೀಸೆಲ್ ದರ ಎಷ್ಟು?

ಸರ್ಕಾರಿ ಸ್ವಾಮ್ಯದ ತೈಲ ಸಂಸ್ಥೆಗಳು ಮಂಗಳವಾರ (ಸೆ. 07) ತೈಲ ದರದಲ್ಲಿ ಯಾವುದೇ ಬದಲಾವಣೆ ಮಾಡದೆ ಹಾಗೆಯೇ ಉಳಿಸಿವೆ. ಕಳೆದ ಭಾನುವಾರ(ಸೆ.05) ಕೆಲವೊಂದು ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ದರ 10 ರಿಂದ 15 ಪೈಸೆ ತಗ್ಗಿದ ಬಳಿಕ ಇಂದು ಬಹುತೇಕ ನಗರಗಳಲ್ಲಿ ಬದಲಾಗದೆ ಉಳಿದಿದೆ.

ಏಳು ದಿನಗಳವರೆಗೆ ಇಂಧನ ಸುಂಕವನ್ನು ಸ್ಥಿರವಾಗಿರಿಸಿದ ನಂತರ, ತೈಲ ಮಾರುಕಟ್ಟೆ ಕಂಪನಿಗಳು (OMC ಗಳು) ಸೆಪ್ಟೆಂಬರ್ 1 ರಂದು ಅವುಗಳನ್ನು ನವೀಕರಿಸಿದವು. ಮೆಟ್ರೋ ನಗರಗಳಾದ್ಯಂತ ಭಾನುವಾರ ಪೆಟ್ರೋಲ್ ಬೆಲೆಯನ್ನು 10 ರಿಂದ 15 ಪೈಸೆ ಕಡಿಮೆ ಮಾಡಲಾಯಿತು, ಆದರೆ ಡೀಸೆಲ್ ಬೆಲೆಯನ್ನು 14-15 ಪೈಸೆ ಇಳಿಸಲಾಗಿದೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ದರ ಲೀಟರ್‌ಗೆ 101.19 ರೂಪಾಯಿ ಮತ್ತು ಡೀಸೆಲ್ ದರ ಲೀಟರ್‌ಗೆ 88.62 ರೂಪಾಯಿಗೆ ತಲುಪಿದೆ. ಸರ್ಕಾರಿ ತೈಲ ಕಂಪನಿಗಳು ಬೆಲೆಗಳನ್ನು ಪರಿಶೀಲಿಸಿದ ನಂತರ ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ನಿಗದಿಪಡಿಸುತ್ತವೆ. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ಪ್ರತಿದಿನ ಸಂಜೆ 6 ಗಂಟೆಯಿಂದ ಪರಿಷ್ಕರಿಸುತ್ತವೆ.

ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಕಳೆದ ನಾಲ್ಕು ದಿನಗಳಲ್ಲಿ ಎಷ್ಟಿದೆ ಎಂಬುದರ ಮಾಹಿತಿ ಈ ಕೆಳಗಿದೆ.


ಬೆಂಗಳೂರಿನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

ಪೆಟ್ರೋಲ್ (ಪ್ರತಿ ಲೀಟರ್)
ಸೆ. 07: 104.70 (10 ಪೈಸೆ ಇಳಿಕೆ)
ಸೆ. 06: 104.80
ಸೆ. 05: 104.70
ಸೆ. 04: 104.84

ಡೀಸೆಲ್ (ಪ್ರತಿ ಲೀಟರ್)
ಸೆ. 07: 94.04 (10 ಪೈಸೆ ಇಳಿಕೆ)
ಸೆ. 06: 94.14
ಸೆ. 05: 94.04
ಸೆ. 04: 94.19

ನವದೆಹಲಿಯಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

ಪೆಟ್ರೋಲ್ (ಪ್ರತಿ ಲೀಟರ್)
ಸೆ. 06: 101.19
ಸೆ. 05: 101.19
ಸೆ. 04: 101.34
ಸೆ. 03: 101.34

ಡೀಸೆಲ್ (ಪ್ರತಿ ಲೀಟರ್)
ಸೆ. 06: 88.62
ಸೆ. 05: 88.62
ಸೆ. 04: 88.77
ಸೆ. 03: 88.77

ಮುಂಬೈನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

ಪೆಟ್ರೋಲ್ (ಪ್ರತಿ ಲೀಟರ್)
ಸೆ. 06: 107.26
ಸೆ. 05: 107.39
ಸೆ. 04: 107.39
ಸೆ. 03: 107.39

ಡೀಸೆಲ್ (ಪ್ರತಿ ಲೀಟರ್)
ಸೆ. 06: 96.19
ಸೆ. 05: 96.19
ಸೆ. 04: 96.33
ಸೆ. 03: 96.33

ಚೆನ್ನೈನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

ಪೆಟ್ರೋಲ್ (ಪ್ರತಿ ಲೀಟರ್)
ಸೆ. 07: 98.96
ಸೆ. 06: 98.96
ಸೆ. 05: 99.12
ಸೆ. 04: 99.08

ಡೀಸೆಲ್ (ಪ್ರತಿ ಲೀಟರ್)
ಸೆ. 07: 93.26
ಸೆ. 06: 93.26
ಸೆ. 05: 93.40
ಸೆ. 04: 93.38

ಹೈದ್ರಾಬಾದ್‌ನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

ಪೆಟ್ರೋಲ್ (ಪ್ರತಿ ಲೀಟರ್)
ಸೆ. 07: 105.26
ಸೆ. 06: 105.26
ಸೆ. 05: 105.26
ಸೆ. 04: 105.40

ಡೀಸೆಲ್ (ಪ್ರತಿ ಲೀಟರ್)
ಸೆ. 07: 96.69
ಸೆ. 06: 96.69
ಸೆ. 05: 96.69
ಸೆ. 04: 96.84

ಪೆಟ್ರೋಲ್, ಡೀಸೆಲ್ ದರ ಹೇಗೆ ನಿರ್ಧರಿಸಲಾಗುತ್ತದೆ?

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ ಮತ್ತು ಡಾಲರ್-ರುಪಾಯಿ ವಿನಿಮಯ ದರದ ಆಧಾರದ ಮೇಲೆ ಪೆಟ್ರೋಲ್-ಡೀಸೆಲ್ ಬೆಲೆಯು ಏರಿಳಿತ ಕಾಣುತ್ತದೆ. ಸರ್ಕಾರಿ ತೈಲ ಕಂಪನಿಗಳು, ಬೆಲೆಗಳನ್ನು ಪರಿಶೀಲಿಸಿದ ನಂತರ, ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪರಿಷ್ಕರಿಸುತ್ತವೆ ಮತ್ತು ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ನೀಡುತ್ತವೆ.

source: goodreturns.in

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Goodreturns Kannada
Top