Dailyhunt Logo
  • Light mode
    Follow system
    Dark mode
    • Play Story
    • App Story
49ರ ಹರೆಯದಲ್ಲೂ 20ರಂತೆ ಕಂಗೊಳಿಸುವ ಮಲ್ಲಿಕಾ ಶೆರಾವತ್: ಫಿಟ್‌ನೆಸ್ ರಹಸ್ಯ ಬಹಿರಂಗ!

49ರ ಹರೆಯದಲ್ಲೂ 20ರಂತೆ ಕಂಗೊಳಿಸುವ ಮಲ್ಲಿಕಾ ಶೆರಾವತ್: ಫಿಟ್‌ನೆಸ್ ರಹಸ್ಯ ಬಹಿರಂಗ!

Guaranteenews 2 weeks ago

ಬಾಲಿವುಡ್‌ನ ಬೋಲ್ಡ್ ಮತ್ತು ಬ್ಯೂಟಿಫುಲ್ ನಟಿ ಮಲ್ಲಿಕಾ ಶೆರಾವತ್ ಸದ್ಯ ತಮ್ಮ ಫಿಟ್‌ನೆಸ್ ಹಾಗೂ ಸೌಂದರ್ಯದ ರಹಸ್ಯವನ್ನು ಬಿಚ್ಚಿಡುವ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸಂಚಲನ ಮೂಡಿಸುತ್ತಿದ್ದಾರೆ. 49ನೇ ವಯಸ್ಸಿನಲ್ಲೂ ತಮ್ಮ ಟೋನ್ಡ್ ಬಾಡಿ ಮತ್ತು ಹೊಳೆಯುವ ಚರ್ಮದಿಂದ ಯುವತಿಯರಿಗೂ ಪೈಪೋಟಿ ನೀಡುತ್ತಿರುವ ಮಲ್ಲಿಕಾ, 'ಇದು ಅದೃಷ್ಟದಿಂದ ಬಂದಿದ್ದಲ್ಲ.

ಯಾವುದೇ ಶಾರ್ಟ್‌ಕಟ್ ಇಲ್ಲ. ಪ್ರತಿದಿನ ಶ್ರಮಪಟ್ಟು ಈ ದೇಹವನ್ನು ರೂಪಿಸಿದ್ದೇನೆ' ಎಂದು ಹೇಳಿದ್ದಾರೆ.

ಇತ್ತೀಚೆಗೆ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವರ್ಕೌಟ್ ವಿಡಿಯೋ ಹಂಚಿಕೊಂಡಿರುವ ಮಲ್ಲಿಕಾ, 'ವಯಸ್ಸು ಫಿಟ್‌ನೆಸ್ ಅನ್ನು ನಿರ್ಧರಿಸುವುದಿಲ್ಲ. ನಾವು ಕಾಪಾಡಿಕೊಳ್ಳುವ ನಿರಂತರತೆ ನಿರ್ಧರಿಸುತ್ತದೆ. ನಿಮ್ಮ ದೇಹವನ್ನು ನೀವು ಚೆನ್ನಾಗಿ ನೋಡಿಕೊಂಡರೆ, ಅದು ನಿಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತದೆ' ಎಂದು ಬರೆದುಕೊಂಡಿದ್ದಾರೆ. ಯಾವುದೇ ಕಠಿಣ ನಿಯಮಗಳಿಲ್ಲದೆ ಪ್ರತಿದಿನ ಸ್ವಲ್ಪ ಸಮಯ ದೇಹಕ್ಕೆ ದಂಡನೆ ನೀಡುವುದು ಮುಖ್ಯ ಎಂದು ಅಭಿಮಾನಿಗಳಿಗೆ ಸ್ಫೂರ್ತಿ ತುಂಬಿದ್ದಾರೆ.

ಯೋಗ ಮತ್ತು ಸಸ್ಯಾಹಾರಿ ಜೀವನಶೈಲಿ ಮಲ್ಲಿಕಾ ಅವರ ಫಿಟ್‌ನೆಸ್ ರಹಸ್ಯ ಕೇವಲ ಜಿಮ್ ಮಾತ್ರವಲ್ಲ. ಅವರು ಪ್ರತಿದಿನ ಬೆಳಿಗ್ಗೆ ಲಘು ಯೋಗಾಸನಗಳೊಂದಿಗೆ ದಿನ ಆರಂಭಿಸುತ್ತಾರೆ. 'ಯೋಗ ನನ್ನ ಜೀವನದ ಪ್ರಮುಖ ಭಾಗ' ಎಂದು ಹೇಳುವ ಅವರು, ತಮ್ಮ ಆಹಾರ ಪದ್ಧತಿಯ ಬಗ್ಗೆಯೂ ಮಾಹಿತಿ ನೀಡಿದ್ದಾರೆ. ಅವರು ಸಂಪೂರ್ಣ ಸಸ್ಯಾಹಾರಿ (ವೇಗನ್) ಜೀವನಶೈಲಿ ಅನುಸರಿಸುತ್ತಾರೆ. ಹಾಲು, ಲಸ್ಸಿ, ಪನೀರ್, ಚೀಸ್ ಸೇರಿದಂತೆ ಎಲ್ಲಾ ಪ್ರಾಣಿಜನ್ಯ ಮತ್ತು ಡೈರಿ ಉತ್ಪನ್ನಗಳಿಂದ ದೂರವಿದ್ದಾರೆ.

ಬೆಳಗಿನ ಉಪಹಾರಕ್ಕೆ ತಾಜಾ ಹಣ್ಣುಗಳು, ವಿಶೇಷವಾಗಿ ಮಾವಿನ ಹಣ್ಣು ಅವರಿಗೆ ಪ್ರಿಯ. ಸಿಹಿ ತಿನ್ನಬೇಕು ಎನಿಸಿದರೆ ಖರ್ಜೂರವನ್ನು ಮಾತ್ರ ಸೇವಿಸುತ್ತಾರೆ. ಮಧ್ಯಾಹ್ನ ಮತ್ತು ರಾತ್ರಿಯ ಊಟದಲ್ಲಿ ಹಸಿರು ತರಕಾರಿ ಸಲಾಡ್, ಆವಕಾಡೊ ಮತ್ತು ಬೆಂಡೆಕಾಯಿ ಪಲ್ಯ ನಿಯಮಿತವಾಗಿ ಇರುತ್ತದೆ. ತೆಂಗಿನ ಹಾಲಿನಿಂದ ತಯಾರಿಸುವ ಥಾಯ್ ಗ್ರೀನ್ ಕರಿ ಅವರ ಅಚ್ಚುಮೆಚ್ಚು.

ಅಭಿಮಾನಿಗಳಿಗೆ ಸಂದೇಶ 'ನೀವು ಯಾವಾಗ ಬೇಕಾದರೂ ಫಿಟ್‌ನೆಸ್ ಜರ್ನಿ ಆರಂಭಿಸಬಹುದು. ನಿಮ್ಮ ಮನಸ್ಸು ದೃಢವಾಗಿದ್ದರೆ ದೇಹ ಅದಕ್ಕೆ ತಕ್ಕಂತೆ ಸ್ಪಂದಿಸುತ್ತದೆ' ಎಂದು ಮಲ್ಲಿಕಾ ಅಭಿಮಾನಿಗಳಿಗೆ ಸಂದೇಶ ನೀಡಿದ್ದಾರೆ. ಅವರ ಈ ನಿರಂತರ ಪ್ರಯತ್ನ ಮತ್ತು ಶಿಸ್ತು ಯುವತಿಯರಿಗೆ ಪ್ರೇರಣೆಯಾಗುತ್ತಿದೆ.

ಮಲ್ಲಿಕಾ ಶೆರಾವತ್ ಅವರ ಫಿಟ್‌ನೆಸ್ ಜರ್ನಿ ಸಾಮಾನ್ಯರಿಗೆ ಮಾದರಿಯಾಗಿದೆ. ವಯಸ್ಸು ಯಾವುದೇ ಅಡ್ಡಿ ಎನ್ನುವುದನ್ನು ಅವರು ತಮ್ಮ ಜೀವನಶೈಲಿಯಿಂದ ಸಾಬೀತುಪಡಿಸುತ್ತಿದ್ದಾರೆ. ಅವರ ಈ ರಹಸ್ಯಗಳು ಅನೇಕರಿಗೆ ಪ್ರೇರಣೆಯಾಗುವ ಸಾಧ್ಯತೆ ಇದೆ.

Dailyhunt
Disclaimer: This content has not been generated, created or edited by Dailyhunt. Publisher: Guaranteenews