Dailyhunt
ಐಪಿಎಲ್ ಪಂದ್ಯ ಹಿನ್ನೆಲೆ ಏ.5ರಂದು ಬೆಂಗಳೂರಲ್ಲಿ ಮೆಟ್ರೋ ಸೇವೆ ವಿಸ್ತರಣೆ

ಐಪಿಎಲ್ ಪಂದ್ಯ ಹಿನ್ನೆಲೆ ಏ.5ರಂದು ಬೆಂಗಳೂರಲ್ಲಿ ಮೆಟ್ರೋ ಸೇವೆ ವಿಸ್ತರಣೆ

Guaranteenews 1 month ago

ಬೆಂಗಳೂರು (ಏಪ್ರಿಲ್ 02): ಸಿಲಿಕಾನ್ ಸಿಟಿಯ ಕ್ರಿಕೆಟ್ ಪ್ರೇಮಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ. ಏಪ್ರಿಲ್ 5, 2026ರಂದು ನಡೆಯಲಿರುವ ಟಾಟಾ ಐಪಿಎಲ್ ಟಿ-20 ಪಂದ್ಯದ ಹಿನ್ನೆಲೆಯಲ್ಲಿ ನಮ್ಮ ಮೆಟ್ರೋ ಸೇವೆಯನ್ನು ವಿಸ್ತರಿಸಲಾಗಿದೆ. ಅಭಿಮಾನಿಗಳು ಸುಗಮವಾಗಿ ಸ್ಟೇಡಿಯಂ ತಲುಪಲು ಮತ್ತು ರಾತ್ರಿ ತಡವಾಗಿಯೂ ಮನೆ ಸೇರಲು ಬಿಎಂಆರ್ಸಿಎಲ್ ಈ ಕ್ರಮ ಕೈಗೊಂಡಿದೆ.

ಮೆಟ್ರೋ ಸಮಯ ವಿಸ್ತರಣೆ
ಪಂದ್ಯದ ದಿನ (ಏ.5) ಎಲ್ಲಾ ಟರ್ಮಿನಲ್ ನಿಲ್ದಾಣಗಳಿಂದ ಕೊನೆಯ ಮೆಟ್ರೋ ಸೇವೆಯನ್ನು ರಾತ್ರಿ 11 ಗಂಟೆಯ ಬದಲು ಮುಂಜಾನೆ 2 ಗಂಟೆಯವರೆಗೆ ವಿಸ್ತರಿಸಲಾಗಿದೆ. ವಿವಿಧ ನಿಲ್ದಾಣಗಳಿಂದ ಕೊನೆಯ ರೈಲುಗಳ ವೇಳಾಪಟ್ಟಿ ಇಲ್ಲಿದೆ.

  • ವೈಟ್ ಫೀಲ್ಡ್‌ (ಕಾಡುಗೋಡಿ) : ರಾತ್ರಿ 12:30 ಕ್ಕೆ

  • ಚಲ್ಲಘಟ್ಟ : ರಾತ್ರಿ 12:45 ಕ್ಕೆ

  • ರೇಷ್ಮೆ ಸಂಸ್ಥೆ ಮತ್ತು ಮಾದಾವರ : ರಾತ್ರಿ 12:45 ಕ್ಕೆ

  • ಬೊಮ್ಮಸಂದ್ರ : ರಾತ್ರಿ 12:30 ಕ್ಕೆ

  • ಆರ್.ವಿ. ರಸ್ತೆ : ರಾತ್ರಿ 02:00 ಕ್ಕೆ

  • ನಾಡಪ್ರಭು ಕೆಂಪೇಗೌಡ ನಿಲ್ದಾಣ (ಮೆಜೆಸ್ಟಿಕ್) : ಮಧ್ಯರಾತ್ರಿ 1:30 ಕ್ಕೆ ನಾಲ್ಕು ದಿಕ್ಕುಗಳಿಗೆ ಕೊನೆಯ ರೈಲು.

ಡಿಜಿಟಲ್ ಟಿಕೆಟ್‌ನಲ್ಲಿ QR ಕೋಡ್
ಪ್ರಯಾಣವನ್ನು ಮತ್ತಷ್ಟು ಸುಲಭಗೊಳಿಸಲು, ಐಪಿಎಲ್ ಪಂದ್ಯದ ಡಿಜಿಟಲ್ ಟಿಕೆಟ್‌ನಲ್ಲಿ ನಮ್ಮ ಮೆಟ್ರೋ ಪ್ರಯಾಣಕ್ಕೆ ಬೇಕಾದ QR ಕೋಡ್ ಅನ್ನು ಅಳವಡಿಸಲಾಗಿದೆ. ಇದರಿಂದ ಪ್ರತ್ಯೇಕವಾಗಿ ಮೆಟ್ರೋ ಟಿಕೆಟ್ ಖರೀದಿಸುವ ಅಗತ್ಯವಿಲ್ಲ.

ಸ್ಟೇಡಿಯಂ ಪ್ರವೇಶಕ್ಕೆ ಮಾರ್ಗದರ್ಶನ

  • ಕಬ್ಬನ್ ರಸ್ತೆ ಭಾಗ ದಿಂದ ಪ್ರವೇಶಿಸುವವರು ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣ ಬಳಸಿ.

  • ಲಿಂಕ್ ರಸ್ತೆ ಭಾಗ ದಿಂದ ಪ್ರವೇಶಿಸುವವರು ಮಹಾತ್ಮ ಗಾಂಧಿ ರಸ್ತೆ (ಎಂಜಿ ರಸ್ತೆ) ಮೆಟ್ರೋ ನಿಲ್ದಾಣ ಬಳಸಿ.
    ಈ ಎರಡೂ ನಿಲ್ದಾಣಗಳು ಸ್ಟೇಡಿಯಂಗೆ ನಡೆದುಕೊಂಡು ಹೋಗಬಹುದಾದ ದೂರದಲ್ಲಿವೆ.

ಪಾರ್ಕಿಂಗ್ ವ್ಯವಸ್ಥೆ ಮತ್ತು ದರ
ಪಂದ್ಯದ ದಿನ ವಾಹನಗಳ ದಟ್ಟಣೆ ಕಡಿಮೆ ಮಾಡಲು, 30+ ಮೆಟ್ರೋ ನಿಲ್ದಾಣಗಳಲ್ಲಿ ಹೆಚ್ಚುವರಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.

  • ದ್ವಿಚಕ್ರ ವಾಹನ: ರೂ. 30

  • ಕಾರು: ರೂ. 60
    ಈ ದರವು ಮೆಟ್ರೋ ಸೇವೆ ಮುಕ್ತಾಯವಾಗುವವರೆಗೆ ಇರಲಿದೆ. ಅಭಿಮಾನಿಗಳು ತಮ್ಮ ವಾಹನಗಳನ್ನು ಈ ನಿಲ್ದಾಣಗಳಲ್ಲಿ ಪಾರ್ಕ್ ಮಾಡಿ, ಮೆಟ್ರೋದಲ್ಲಿ ಕಬ್ಬನ್ ಪಾರ್ಕ್ ಅಥವಾ ಎಂಜಿ ರಸ್ತೆಗೆ ಬಂದು ಸ್ಟೇಡಿಯಂ ತಲುಪಬಹುದು.

ಹೆಚ್ಚುವರಿ ಪಾರ್ಕಿಂಗ್ ಇರುವ ಪ್ರಮುಖ ನಿಲ್ದಾಣಗಳ ಪಟ್ಟಿ
ವೈಟ್ಫೀಲ್ಡ್, ಚಿಕ್ಕಬಿದರಕಲ್ಲು, ಹೋಪ್ ಫಾರ್ಮ್, ಮಂಜುನಾಥನಗರ, ನಾಗಸಂದ್ರ, ಪಟ್ಟಂದೂರು ಅಗ್ರಹಾರ, ಜಾಲಹಳ್ಳಿ, ಮಹಾಲಕ್ಷ್ಮಿ, ಕುಂದಲಹಳ್ಳಿ, ಸೀತಾರಾಮ ಪಾಳ್ಯ, ಶ್ರೀರಾಂಪುರ, ಹೂಡಿ, ಚಿಕ್ಕಪೇಟೆ, ಸಿಂಗಯ್ಯನಪಾಳ್ಯ, ನ್ಯಾಷನಲ್ ಕಾಲೇಜು, ಕೆ.ಆರ್.ಪುರ, ಲಾಲ್ಬಾಗ್, ಜಯನಗರ, ಬನಶಂಕರಿ, ಎಸ್.ವಿ.ರಸ್ತೆ, ಮೆಜೆಸ್ಟಿಕ್, ದೊಡ್ಡಕಲ್ಲಸಂದ್ರ, ಸಿಟಿ ರೈಲ್ವೆ ನಿಲ್ದಾಣ, ಆರ್.ವಿ.ರಸ್ತೆ, ಮೈಸೂರು ರಸ್ತೆ, ನಾಯಂಡಹಳ್ಳಿ, ಸೆಂಟ್ರಲ್ ಸಿಲ್ಕ್ ಬೋರ್ಡ್, ಜ್ಞಾನಭಾರತಿ, ಕೆಂಗೇರಿ ಬಸ್ ಟರ್ಮಿನಲ್, ಎಲೆಕ್ಟ್ರಾನಿಕ್ ಸಿಟಿ, ಚಲ್ಲಘಟ್ಟ, ಮಾದಾವರ, ಬೊಮ್ಮಸಂದ್ರ ಮತ್ತು ಇತರೆ ಈ ಪ್ರದೇಶಗಳಲ್ಲಿ ಇರಲಿದೆ.

ಅಗತ್ಯವಿದ್ದಲ್ಲಿ ಮೆಟ್ರೋ ನಿಲ್ದಾಣಗಳ ಪ್ರವೇಶ ದ್ವಾರಗಳನ್ನು ನಿಯಂತ್ರಿಸುವ ಅಥವಾ ತಾತ್ಕಾಲಿಕವಾಗಿ ಮುಚ್ಚುವ ಹಕ್ಕನ್ನು ಬಿಎಂಆರ್ಸಿಎಲ್ ಹೊಂದಿದೆ. ಪೊಲೀಸ್ ಮತ್ತು ಮೆಟ್ರೋ ಸಿಬ್ಬಂದಿಯ ಸೂಚನೆಗಳನ್ನು ಪಾಲಿಸಬೇಕು.

ಏಪ್ರಿಲ್ 5 ರ ಐಪಿಎಲ್ ಪಂದ್ಯಕ್ಕೆ ನಮ್ಮ ಮೆಟ್ರೋ ತಡರಾತ್ರಿ 2 ಗಂಟೆವರೆಗೆ ಸೇವೆ ನೀಡಲಿದೆ. QR ಕೋಡ್ ಟಿಕೆಟ್, ಅಗ್ಗದ ಪಾರ್ಕಿಂಗ್, ಮತ್ತು ವಿಸ್ತೃತ ಸಮಯದೊಂದಿಗೆ ಬೆಂಗಳೂರು ಮೆಟ್ರೋ ಅಭಿಮಾನಿಗಳಿಗೆ ಸುಗಮ ಪ್ರಯಾಣವನ್ನು ಖಚಿತಪಡಿಸಿದೆ.

Dailyhunt
Disclaimer: This content has not been generated, created or edited by Dailyhunt. Publisher: Guaranteenews