Dailyhunt Logo
  • Light mode
    Follow system
    Dark mode
    • Play Story
    • App Story
ದರ್ಶನ್- ಪ್ರದೋಶ್ ಮುಖಾಮುಖಿ: ಕೋರ್ಟ್‌ನಲ್ಲಿ ಏನಾಯ್ತು.? ಲಾಕ್ ಆಗೇಬಿಟ್ರಾ ಡಿಬಾಸ್ ದಚ್ಚು?

ದರ್ಶನ್- ಪ್ರದೋಶ್ ಮುಖಾಮುಖಿ: ಕೋರ್ಟ್‌ನಲ್ಲಿ ಏನಾಯ್ತು.? ಲಾಕ್ ಆಗೇಬಿಟ್ರಾ ಡಿಬಾಸ್ ದಚ್ಚು?

Guaranteenews 11 hrs ago

ಡಿಬಾಸ್ ದರ್ಶನ್‌ಗೆ ಢವ ಢವ ಶುರು. ಯಾಕಂದ್ರೆ ಒಂದ್ಕಡೆ ಪ್ರದೋಶ್ ಹೇಳಿಕೆ ದಾಖಲು ಮುಂದೂಡುವಂತೆ ಹೈಕೋರ್ಟ್‌ನಲ್ಲಿ ಸಿಲ್ಲಿಸಿದ್ದ ಅರ್ಜಿ ವಜಾ ಆಗಿದೆ. ಮತ್ತೊಂದ್ಕಡೆ ಸೆಷನ್ಸ್ ಕೋರ್ಟ್‌ಗೆ ಹಾಜರಾಗಿರೋ ಪ್ರದೋಶ್ ಮಾಫಿ ಸಾಕ್ಷಿ ನುಡಿದಿದ್ದಾರೆ. ಇಷ್ಟಕ್ಕೂ ಅಪ್ರೂವರ್ ಆಗಿರೋ ಪ್ರದೋಶ್ ಖುಲಾಸೆಯಾಗಿ ಹೊರಬರ್ತಾರಾ..?

ದರ್ಶನ್ ಪರ್ಮನೆಂಟ್ ಆಗಿ ಪರಪ್ಪನ ಅಗ್ರಹಾರದಲ್ಲೇ ತಗ್ಲಾಕಿಕೊಳ್ತಾರಾ ಅನ್ನೋ ನಿಮ್ಮ ಕ್ಯೂರಿಯಾಸಿಟಿಗೆ ಉತ್ತರ ಇಲ್ಲಿದೆ.

ಆರೋಪಿ ದರ್ಶನ್- 'ಮಾಫಿ ಸಾಕ್ಷಿ' ಪ್ರದೋಶ್ ಮುಖಾಮುಖಿ

ಕೋರ್ಟ್‌ನಲ್ಲಿ ಏನಾಯ್ತು.? ಲಾಕ್ ಆಗೇಬಿಟ್ರಾ ಡಿಬಾಸ್ ದಚ್ಚು?

ದಾಸ ವಿಡಿಯೋ ಕಾನ್ಫರೆನ್ಸ್‌… ಕಟಕಟೆಯಲ್ಲಿ ಹೇಳಿಕೆ ದಾಖಲು

ಪ್ರದೋಶ್ ಬಿಚ್ಚಿಟ್ರು ಜೂನ್ 8ರ ನಂಟು.. ಕೇಳಿದ್ರೆ ಶಾಕ್ ಆಗ್ತೀರಾ

ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ನಟ ದರ್ಶನ್‌‌ಗೆ ಸಂಕಷ್ಟದ ಮೇಲೆ ಸಂಕಷ್ಟ ಎದುರಾಗ್ತಿದೆ. ಜೈಲು ಸೇರಿ ಎರಡು ವರ್ಷಗಳಾದ್ರೂ ಇನ್ನೂ ಹೊರಬರುವ ಲಕ್ಷಣಗಳೇ ಕಾಣ್ತಿಲ್ಲ. ಅಭಿಮನ್ಯು ಚಕ್ರವ್ಯೂಹದೊಳಗೆ ಸಿಲುಕಿದಂತೆ ಮರ್ಡರ್ ಕೇಸ್‌ನಲ್ಲಿ ಲಾಕ್ ಆಗಿಬಿಟ್ಟಿದ್ದಾರೆ ದಾಸ. ಸದ್ಯಕ್ಕೆ ಹೊರಕ್ಕೆ ಬರೋದು ಅಷ್ಟು ಸುಲಭವಾಗಿಲ್ಲ. ಜಾಮೀನೇ ಸಿಗ್ತಿಲ್ಲ.. ಅಂಥದ್ರಲ್ಲಿ ಖುಲಾಸೆ ಆಗಿ ಹೊರಬರೋದಂತೂ ಕಷ್ಟ ಕಷ್ಟ.

ಮಾಫಿ ಸಾಕ್ಷಿಯಾಗಲು ಒಪ್ಪಿದ್ದ ಪ್ರದೋಶ್ ಹೇಳಿಕೆಯನ್ನ ದಾಖಲಿಸಲು ಕಾಲಾವಕಾಶ ಕೇಳಿ ಹೈ ಕೋರ್ಟ್‌ಗೆ ಮೊರೆ ಹೋಗಿದ್ದ ದರ್ಶನ್‌ಗೆ ಹಿನ್ನಡೆಯಾಗಿದೆ. ಅರ್ಜಿ ವಜಾಗೊಳ್ಳುವ ಮೂಲಕ ಶಾಕ್ ನೀಡಿದೆ ಹೈ ಕೋರ್ಟ್. ಅದ್ರ ಬೆನ್ನಲ್ಲೇ ಅಪ್ರೂವರ್ ಪ್ರದೋಶ್‌ನ ಸೆಷನ್ಸ್‌ ಕೋರ್ಟ್‌ಗೆ ಕರೆತಂದು, ಮಾಫಿ ಸಾಕ್ಷಿಯನ್ನ ದಾಖಲಿಸಿಕೊಂಡಿದೆ ಕೋರ್ಟ್. ಆಗ ಆರೋಪಿ ನಂ.2 ದರ್ಶನ್, ಆರೋಪಿ ನಂ.1 ಪವಿತ್ರಾ ಗೌಡ ಸೇರಿದಂತೆ ಉಳಿದ ಆರೋಪಿಗಳೆಲ್ಲಾ ವಿಡಿಯೋ ಕಾನ್ಫರೆನ್ಸ್ ಮೂಲಕ ಕೋರ್ಟ್ ಕಲಾಪದಲ್ಲಿ ಭಾಗಿಯಾಗಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದ ವಕೀಲರು ಬಿಟ್ಟು.. ಉಳಿದಂತೆ ಎಲ್ಲರನ್ನೂ ಕೋರ್ಟ್‌ ಹಾಲ್‌ನಿಂದ ಹೊರನಡೆಯುವಂತೆ ಸೂಚಿಸಿದ ನ್ಯಾಯಮೂರ್ತಿಗಳು, ಪ್ರದೋಶ್ ಹೇಳಿಕೆಯನ್ನ ಲಿಖಿತ, ಆಡಿಯೋ ಹಾಗೂ ವಿಡಿಯೋ ಮೂಲಕ ದಾಖಲಿಸಿಕೊಂಡಿದೆ. ಇಷ್ಟಕ್ಕೂ ಪ್ರದೋಶ್ ಬಿಚ್ಚಿಟ್ಟ 2024ರ ಜೂನ್ 8ರ ನಂಟು ಏನೇನು..? ಪಟ್ಟಣಗೆರೆ ಶೆಡ್‌ಗೆ ಹೋಗೋಕೆ ಮುನ್ನ ಏನೆಲ್ಲಾ ಆಯ್ತು..? ಶೆಡ್‌ನಲ್ಲಿ ನಡೆದದ್ದೇನು..? ಇಲ್ಲಿದೆ ಪಿನ್ ಟು ಪಿನ್ ಡಿಟೈಲ್ಸ್.

'ಪಟ್ಟಣಗೆರೆ ಶೆಡ್‌'‌ಗೆ ಹೋಗೋಕೆ ಮುನ್ನ ಏನೆಲ್ಲಾ ಆಯ್ತು..?

ಸ್ಟೋನಿ ಬ್ರೂಕ್‌ನಲ್ಲಿ ಪಾರ್ಟಿ.. ಯಶಸ್, ಚಿಕ್ಕಣ್ಣನೂ ಇದ್ರಂತೆ

ದರ್ಶನ್ ಜೊತೆಗಿನ ಸ್ನೇಹ ಎಷ್ಟು ವರ್ಷದ್ದು ಎಂದು ವಿವರವಾಗಿ ಹೇಳಿದ ಅಪ್ರೂವರ್ ಪ್ರದೋಶ್, 2024ರ ಜೂನ್ 8ರಂದು ಬೆಳಗ್ಗೆ 10 ಗಂಟೆಗೆ ಬೈಕ್‌ನಲ್ಲಿ ದರ್ಶನ್ ಮನೆಗೆ ತೆರಳಿದ್ದಾಗಿ ಹೇಳಿದರು. ಐಟಿ ಸೆಕ್ಟರ್‌ನಲ್ಲಿ ಕೆಲಸ ಮಾಡೋದ್ರಿಂದ ವೀಕೆಂಡ್‌ ಶನಿವಾರ ಹಾಗೂ ಭಾನುವಾರ ನನಗೆ ರಜೆ ಇರುತ್ತೆ. ಆಗ ದರ್ಶನ್‌ನ ಭೇಟಿ ಆಗೋದ್ರ ಜೊತೆ ಕಾರ್ಯಕ್ರಮಗಳಲ್ಲಿ ಭಾಗಿಯಾಗ್ತಿದ್ದೆ, ಹೊರಗೆ ಕೂಡ ಜೊತೆಯಾಗುತ್ತಿದ್ದೆ.

ನಾನು ದರ್ಶನ್ ಮನೆಗೆ ಹೋದಾಗ ಅವರು ಜಿಮ್‌ನಲ್ಲಿ ವರ್ಕೌಟ್ ಮಾಡ್ತಿದ್ರು. ಸಿನಿಮಾ ಶೂಟಿಂಗ್ ಬಗ್ಗೆ ಎಲ್ಲಾ ಮಾತಾಡಿದೆ. 15-20 ನಿಮಿಷಗಳ ನಂತ್ರ ಮಗಳನ್ನ ಸ್ವಿಮ್ಮಿಂಗ್‌ಗೆ ಕರೆದೊಯ್ಯುವ ನಿಟ್ಟಿನಲ್ಲಿ ಹೊರಡುತ್ತೇನೆ ಎಂದೆ. ಮಧ್ಯಾಹ್ನ ಸ್ಟೋನಿ ಬ್ರೂಕ್‌ನಲ್ಲಿ ಒಂದು ಪಾರ್ಟಿ ಇದೆ ಬಾ ಎಂದರು. ಸುಸ್ತಾಗಿದೆ ರೆಸ್ಟ್ ಮಾಡ್ಬೇಕು ಅಂದ್ರೂ ಕೇಳದೆ.. ಯಶಸ್ ಸೂರ್ಯ, ಚಿಕ್ಕಣ್ಣನೂ ಬರ್ತಾರೆ ಬಾ ಅಂತ ಒತ್ತಾಯಿಸಿದ್ರು ದರ್ಶನ್. ಆಗ ಮನೆಗೆ ಹೋಗಿ ಕಾರ್‌ನಲ್ಲಿ ಬಂದೆ. ನಿಮ್ಮ ಕಾರ್‌ನಲ್ಲೇ ಹೋಗೋಣ ಅಂದ್ರು. ಹೊರಗೆ ಬಂದಾಕ್ಷಣ ನಾಗರಾಜ್ ಸಿಕ್ಕರು. ನಾಗರಾಜ್ ದರ್ಶನ್ ಸ್ನೇಹಿತ ಹಾಗೂ ಮೈಸೂರು ಫಾರ್ಮ್ ಹೌಸ್ ನೋಡಿಕೊಳ್ತಿದ್ರು ಅಂತ ವಿಡಿಯೋ ಕಾನ್ಫರೆನ್ಸ್‌ನಲ್ಲಿ ನಾಗರಾಜ್‌ನ ನೋಡಿ ಗುರುತು ಹಿಡಿದ್ರು ಪ್ರದೋಶ್.

ದಚ್ಚು ಆದೇಶ.. ಶೆಡ್‌ಗೆ ಪವಿತ್ರಾನ ಕರೆತಂದ ಪ್ರದೋಶ್

ಸ್ವಾಮಿ ಮರ್ಮಾಂಗಕ್ಕೆ ಒದ್ದು, ಭುಜಕ್ಕೆ ಹೊಡೆದು ಹಿಂಸೆ

ಇವಳು ನನ್ನ ಹೆಂಡ್ತಿ.. ಮೆಸೇಜ್ ಮಾಡೋಕೆ ಎಷ್ಟು ಧೈರ್ಯ

ಪವಿತ್ರಾ ಇಂದ ಸ್ವಾಮಿಗೆ ಚಪ್ಪಲಿಯಲ್ಲಿ ಹೊಡೆಸಿದ ದರ್ಶನ್

SPP ಪ್ರಸನ್ನ ಕುಮಾರ್ ಪ್ರಶ್ನೆಗಳಿಗೆ ಉತ್ತರಿಸುತ್ತಾ.. ರೇಣುಕಾಸ್ವಾಮಿ ಕಿಡ್ನ್ಯಾಪ್, ಶೆಡ್‌ನಲ್ಲಿ ನಡೆದ ಕ್ರೌರ್ಯ ಎಲ್ಲವನ್ನ ಪ್ರದೋಶ್ ಪಿನ್ ಟು ಪಿನ್ ಡಿಟೈಲ್ಡ್ ಆಗಿ ಬಿಚ್ಚಿಟ್ಟಿದ್ದಾರೆ. ನಟ ದರ್ಶನ್ ಆದೇಶದಂತೆ ಸ್ಟೋನಿ ಬ್ರೂಕ್‌ನಲ್ಲಿ ಪಾರ್ಟಿ ಬಳಿಕ ಪಟ್ಟಣಗೆರೆ ಶೆಡ್‌ಗೆ ಪವಿತ್ರಾ ಗೌಡನ ಕರೆತಂದ ಪ್ರದೋಶ್‌. ದಚ್ಚು ಸೂಚನೆಯಂತೆ ಪವಿತ್ರಾನ ಪಟ್ಟಣಗೆರೆ ಶೆಡ್‌ಗೆ ಕರೆತಂದರು. ಆಗ ಪವಿತ್ರಾಗೆ ಚಪ್ಪಲಿಯಲ್ಲಿ ಹೊಡೆಯುವಂತೆ ಹೇಳಿದ ದರ್ಶನ್. ಸೂಳೆ ಮಗನೆ ಇವಳ್ಯಾರು ಗೊತ್ತಾ..? ನನ್ನ ಹೆಂಡ್ತಿ. ಮೆಸೇಜ್ ಮಾಡೋಕೆ ಎಷ್ಟು ಧೈರ್ಯ ಎಂದು ಮರ್ಮಾಂಗಕ್ಕೆ ಒದ್ದು, ಭುಜಕ್ಕೆ ಹೊಡೆದು ಚಿತ್ರಹಿಂಸೆ ನೀಡಿದ ದರ್ಶನ್.

ಬಾಯಿಂದ ಎಂಜಲು ಉಗಿದು, ಅದನ್ನ ನೆಕ್ಕುವಂತೆ ರೇಣುಕಾಸ್ವಾಮಿಗೆ ಹೇಳಿದ್ದ ದರ್ಶನ್. ಆ ನಂತ್ರ ರೇಣುಕಾಸ್ವಾಮಿಯನ್ನ ಸುತ್ತುವರೆದ ದರ್ಶನ್, ಪವನ್ ಹಾಗೂ ನಂದೀಶ್‌ರಿಂದ ನಿರಂತರ ಹಲ್ಲೆ. ನೈಲಾಗ್ ಹಗ್ಗ, ಮರದ ರೆಂಬೆ ಹಾಗೂ ಪೊಲೀಸ್ ಲಾಠಿಯಿಂದ ನಿರಂತರ ಹಲ್ಲೆ ನಡೆಸಿದರು ಎಂದು ಡಿ ಗ್ಯಾಂಗ್ ಕ್ರೌರ್ಯವನ್ನ ಎಳೆ ಎಳೆಯಾಗಿ ಬಿಚ್ಚಿಟ್ಟ ಪ್ರದೋಶ್.

ರೇಣುಕಾಸ್ವಾಮಿಗೆ ಪ್ಯಾಂಟ್ ಬಿಚ್ಚಲು ಸೂಚಿಸಿದ ದರ್ಶನ್. ನಿರಾಕರಿಸಿದ್ದಕ್ಕೆ ನೈಲಾಗ್ ಹಗ್ಗದಿಂದ ಥಳಿತ. ಆಗ ತಾನಾಗಿಯೇ ಬ್ಲೂ ಜೀನ್ಸ್ ಪ್ಯಾಂಟ್ ಬಿಚ್ಚಿದ ರೇಣುಕಾಸ್ವಾಮಿ. ಆಗ ಬೂಟ್ ಹಾಕಿದ್ದ ಕಾಲಲ್ಲೇ ರೇಣುಕಾಸ್ವಾಮಿಗೆ ಮರ್ಮಾಂಗಕ್ಕೆ ಒದ್ದಿದ್ದಾರೆ. ಎದೆಯ ಮೇಲೆಯೂ ಕಾಲಿಟ್ಟಿದ್ದಾರೆ ಅಂತ ಆ ಭಯಾನಕ ಸತ್ಯಾಂಶಗಳನ್ನ ಪ್ರದೋಶ್ ಹೊರ ಹಾಕಿದ್ದಾರೆ.

ಪ್ರದೋಶ್ ಹೇಳಿಕೆಯನ್ನ ಕ್ರಾಸ್ ಚೆಕ್ ಮಾಡಲಿದೆ ಕೋರ್ಟ್..!

ಹೇಳಿಕೆ ನಿಜವಾದ್ರೆ ಖುಲಾಸೆ.. ಸುಳ್ಳಾದ್ರೆ ಪ್ರದೋಶ್‌ಗೆ ಜೈಲು ಫಿಕ್ಸ್

ಪ್ರದೋಶ್ ಹೇಳಿಕೆ ದಾಖಲಿಸಿರೋ ಕೋರ್ಟ್ ಅದನ್ನ ಉಳಿದ ಸಾಕ್ಷಿಗಳ ಜೊತೆ ಕ್ರಾಸ್ ಚೆಕ್ ಮಾಡಲಿದೆ. ಇನ್ ಕೇಸ್ ಎಲ್ಲವೂ ನಿಜವಾಗಿದ್ದಲ್ಲಿ ದರ್ಶನ್‌ಗೆ ಶಿಕ್ಷೆ ಆಗೋದು ಕನ್ಫರ್ಮ್. ಅಲ್ಲದೆ.. ಪ್ರದೋಶ್ ಹೇಳಿಕೆ ತಪ್ಪಾಗಿದ್ದಲ್ಲಿ ಸಾಕ್ಷಿಯಿಂದ ಮತ್ತೆ ಆರೋಪಿ ನಂ.14 ಆಗ್ತಾರೆ ಪ್ರದೋಶ್. ಆಗ ಆತನಿಗೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ ಆಗಲಿದೆ. ಅಂದಹಾಗೆ ಇದೆಲ್ಲಾ ಆಗ್ಬೇಕು ಅಂದ್ರೆ ಕನಿಷ್ಟ ಒಂದು ವರ್ಷ ಆದ್ರೂ ಬೇಕಾಗುತ್ತೆ. ಅಲ್ಲಿಯ ತನಕ ದರ್ಶನ್, ಪ್ರದೋಶ್, ಪವಿತ್ರಾ ಗೌಡ ಸೇರಿದಂತೆ ಎಲ್ಲರೂ ಜೈಲಲ್ಲೇ ಇರ್ತಾರೆ. ಫೈನಲ್ ಜಡ್ಜ್‌ಮೆಂಟ್ ಬಳಿಕ ಪ್ರದೋಶ್ ಹೇಳಿಕೆ ನಿಜವಾಗಿದ್ರೆ ಆತ ಈ ರೇಣುಕಾಸ್ವಾಮಿ ಮರ್ಡರ್ ಕೇಸ್‌ನಿಂದ ಖುಲಾಸೆಯಾಗಿ ಹೊರಬರ್ತಾನೆ. ದರ್ಶನ್ ಪರ್ಮನೆಂಟ್ ಆಗಿ ಜೈಲಲ್ಲೇ ಲಾಕ್ ಆಗ್ತಾರೆ. ಸೋ.. ಜಡ್ಜ್‌ಮೆಂಟ್ ತನಕ ಏನೆಲ್ಲಾ ಟ್ವಿಸ್ಟ್ & ಟರ್ನ್ಸ್ ಆಗುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.

Dailyhunt
Disclaimer: This content has not been generated, created or edited by Dailyhunt. Publisher: Guaranteenews