Dailyhunt Logo
  • Light mode
    Follow system
    Dark mode
    • Play Story
    • App Story
ಹಾಟ್..ಬ್ಯೂಟಿಫುಲ್ ಎಂದು ಮೆಸೇಜ್ ಮಾಡುತ್ತಿದ್ದ ರಾಜಸ್ಥಾನ ರಾಯಲ್ಸ್ ಕ್ರಿಕೆಟಿಗ; ನಟಿ ನೆಹಾಲ್ ಆರೋಪ

ಹಾಟ್..ಬ್ಯೂಟಿಫುಲ್ ಎಂದು ಮೆಸೇಜ್ ಮಾಡುತ್ತಿದ್ದ ರಾಜಸ್ಥಾನ ರಾಯಲ್ಸ್ ಕ್ರಿಕೆಟಿಗ; ನಟಿ ನೆಹಾಲ್ ಆರೋಪ

Guaranteenews 3 weeks ago

ಮುಂಬೈ:ಐಪಿಎಲ್ 2026 ಟೂರ್ನಿ ಅದ್ಧೂರಿಯಾಗಿ ಮುಕ್ತಾಯಗೊಂಡಿದೆ. ಆರ್‌ಸಿಬಿ ಟ್ರೋಫಿ ಗೆದ್ದರೆ, ರಾಜಸ್ಥಾನ ರಾಯಲ್ಸ್ ತಂಡ 3ನೇ ಸ್ಥಾನ ಪಡೆದುಕೊಂಡಿದೆ. ಇದೀಗ ಟೂರ್ನಿ ಮುಗಿದ ಬೆನ್ನಲ್ಲೇ ನಟಿ ನೆಹಾಲ್ ವಡೋಲಿಯಾ (Nehal Vadoliya) ಅವರು ಸ್ಫೋಟಕ ಹೇಳಿಕೆಯೊಂದನ್ನು ನೀಡಿದ್ದು, ರಾಜಸ್ಥಾನ ರಾಯಲ್ಸ್ ತಂಡದ ವಿಚ್ಛೇದಿತ ಕ್ರಿಕೆಟಿಗನೊಬ್ಬರ ಮೇಲೆ ಗಂಭೀರ ಆರೋಪ ಮಾಡಿದ್ದಾರೆ.

ಏನಿದು ಪ್ರಕರಣ?
'ಸುನೋ ಇಂಡಿಯಾ' ಸಂದರ್ಶನದಲ್ಲಿ ಮಾತನಾಡಿದ ನೆಹಾಲ್, ರಾಜಸ್ಥಾನ ರಾಯಲ್ಸ್ ತಂಡದ ವಿಚ್ಛೇದಿತ ಕ್ರಿಕೆಟಿಗನೊಬ್ಬರು ತಮಗೆ ಅನುಚಿತ ಸಂದೇಶಗಳನ್ನು ಕಳುಹಿಸುತ್ತಿದ್ದರು ಎಂದು ಆರೋಪಿಸಿದ್ದಾರೆ. ಆದರೆ ಆ ಆಟಗಾರನ ಹೆಸರನ್ನು ಬಹಿರಂಗಪಡಿಸಲು ಅವರು ನಿರಾಕರಿಸಿದ್ದಾರೆ.

ಸುನೋ ಇಂಡಿಯಾ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ ನೆಹಾಲ್, 'ಆಟಗಾರನೊಬ್ಬ ನನ್ನ ಫೋಟೋಗಳಿಗೆ ನಿರಂತರವಾಗಿ ಕಮೆಂಟ್ ಮಾಡುತ್ತಿದ್ದ. 'ಹಾಟ್', 'ಬ್ಯೂಟಿಫುಲ್', 'ನೀವು ತುಂಬಾ ಸುಂದರವಾಗಿ ಕಾಣುತ್ತಿದ್ದೀರಿ' ಎಂಬ ರೀತಿಯ ಸಂದೇಶಗಳನ್ನು ಕಳುಹಿಸುತ್ತಿದ್ದ. ಡೈರೆಕ್ಟ್ ಮೆಸೇಜ್‌ಗಳ ಮೂಲಕವೂ ಸಂಪರ್ಕಿಸಲು ಪ್ರಯತ್ನಿಸುತ್ತಿದ್ದ' ಎಂದು ಹೇಳಿದ್ದಾರೆ.

ಆದರೆ ಆ ಸಂದೇಶಗಳಿಗೆ ತಾನು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ ಎಂದು ನೆಹಾಲ್ ಸ್ಪಷ್ಟಪಡಿಸಿದ್ದಾರೆ. 'ನನಗೆ ಅವರೊಂದಿಗೆ ಮಾತನಾಡುವ ಆಸಕ್ತಿ ಇರಲಿಲ್ಲ. ಹೀಗಾಗಿ ಯಾವುದೇ ಕಮೆಂಟ್‌ಗೆ ಅಥವಾ ಮೆಸೇಜ್‌ಗೆ ಉತ್ತರ ನೀಡಲಿಲ್ಲ' ಎಂದು ಅವರು ತಿಳಿಸಿದ್ದಾರೆ.

ನೆಹಾಲ್ ಅವರ ಪ್ರಕಾರ, ಆರಂಭದಲ್ಲಿ ಸಾಮಾನ್ಯವಾಗಿ ಕಂಡಿದ್ದ ಸಂದೇಶಗಳು ನಂತರ ಹೆಚ್ಚಾಗತೊಡಗಿದವು. ಡೈರೆಕ್ಟ್ ಮೆಸೇಜ್‌ಗಳು ಮತ್ತು ಪ್ರತಿಕ್ರಿಯೆಗಳು ನಿರಂತರವಾಗಿ ಬರುತ್ತಿದ್ದ ಕಾರಣ ಪರಿಸ್ಥಿತಿ ಗಂಭೀರವಾಗುತ್ತಿದೆ ಎಂದು ಭಾಸವಾಯಿತು. 'ಇದು ಮುಂದುವರಿದರೆ ಸಮಸ್ಯೆಯಾಗಬಹುದು ಎಂದು ಭಾವಿಸಿ, ನಾನು ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ ಬ್ಲಾಕ್ ಮಾಡಿದೆ' ಎಂದು ಹೇಳಿದ್ದಾರೆ.

ಅವರ ಆರೋಪಿಸಿರುವ ಆಟಗಾರ ರಾಜಸ್ಥಾನ ರಾಯಲ್ಸ್ ತಂಡದ ಸದಸ್ಯನಾಗಿದ್ದು, ಅವರಿಗೆ ಈಗಾಗಲೇ ವಿಚ್ಛೇದನವಾಗಿದೆ ಎಂದು ಮಾತ್ರ ಅವರು ತಿಳಿಸಿದ್ದಾರೆ. ಆದರೆ ಹೆಸರು ಬಹಿರಂಗಪಡಿಸಿಲ್ಲ.

'ಅವರು ತಂಡದ ಅತ್ಯಂತ ಜನಪ್ರಿಯ ಆಟಗಾರರಲ್ಲ. ಆದರೆ ನಾನು ಈಗ ಅವರಿಗೆ ಒಂದು ಸಂದೇಶ ಕಳುಹಿಸಿದರೂ ತಕ್ಷಣ ಪ್ರತಿಕ್ರಿಯೆ ಬರುತ್ತದೆ ಎಂಬ ವಿಶ್ವಾಸವಿದೆ. ಸದ್ಯಕ್ಕೆ ಅವರ ಹೆಸರನ್ನು ಹೇಳಲು ನಾನು ಇಷ್ಟಪಡುವುದಿಲ್ಲ' ಎಂದು ನೆಹಾಲ್ ಹೇಳಿದ್ದಾರೆ.

ಈ ಹೇಳಿಕೆ ಹೊರಬಿದ್ದ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಹಲವು ಊಹಾಪೋಹಗಳು ಹರಿದಾಡುತ್ತಿವೆ. ರಾಜಸ್ಥಾನ ರಾಯಲ್ಸ್ ತಂಡದ ಯಾವ ಆಟಗಾರನ ಬಗ್ಗೆ ನೆಹಾಲ್ ಮಾತನಾಡಿದ್ದಾರೆ ಎಂಬುದನ್ನು ಅಭಿಮಾನಿಗಳು ಮತ್ತು ನೆಟ್ಟಿಗರು ಹುಡುಕತೊಡಗಿದ್ದಾರೆ. ಆದರೆ ಇದುವರೆಗೆ ನೆಹಾಲ್ ಯಾವುದೇ ಹೆಸರು ಬಹಿರಂಗಪಡಿಸಿಲ್ಲ. ಅಲ್ಲದೆ, ಆರೋಪಕ್ಕೆ ಸಂಬಂಧಿಸಿದಂತೆ ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿ ಅಥವಾ ಯಾವುದೇ ಆಟಗಾರರಿಂದ ಅಧಿಕೃತ ಪ್ರತಿಕ್ರಿಯೆ ಕೂಡ ಹೊರಬಂದಿಲ್ಲ.

ಹೀಗಾಗಿ ಸದ್ಯಕ್ಕೆ ಈ ವಿಷಯ ನೆಹಾಲ್ ಅವರ ಹೇಳಿಕೆಗೆ ಮಾತ್ರ ಸೀಮಿತವಾಗಿದ್ದು, ಆರೋಪದ ಸತ್ಯಾಸತ್ಯತೆ ಕುರಿತು ಯಾವುದೇ ಅಧಿಕೃತ ದೃಢೀಕರಣ ಲಭ್ಯವಾಗಿಲ್ಲ.

Dailyhunt
Disclaimer: This content has not been generated, created or edited by Dailyhunt. Publisher: Guaranteenews