Dailyhunt Logo
  • Light mode
    Follow system
    Dark mode
    • Play Story
    • App Story
IPL ಕ್ರಶ್ ಕಾವ್ಯಾಗೆ ಮ್ಯೂಸಿಕ್ ಕಿಂಗ್ ಅನಿರುದ್ಧ್ ವರನಾಗ್ತಾರಾ..?

IPL ಕ್ರಶ್ ಕಾವ್ಯಾಗೆ ಮ್ಯೂಸಿಕ್ ಕಿಂಗ್ ಅನಿರುದ್ಧ್ ವರನಾಗ್ತಾರಾ..?

Guaranteenews 16 hrs ago

ಪಿಎಲ್ ಗ್ರೌಂಡ್‌ನಲ್ಲಿ ತಮ್ಮ ಕ್ಯೂಟ್ ಎಕ್ಸ್‌ಪ್ರೆಷನ್‌ಗಳಿಂದಲೇ ದೇಶದಾದ್ಯಂತ ಮಿಲಿಯನ್‌ಗಟ್ಟಲೆ ಅಭಿಮಾನಿಗಳ ನೆಚ್ಚಿನ 'ನ್ಯಾಷನಲ್ ಕ್ರಶ್' ಎನಿಸಿಕೊಂಡಿರೋ ಸನ್‌ರೈಸರ್ಸ್ ಹೈದರಾಬಾದ್ ಓನರ್ ಕಾವ್ಯಾ ಮಾರನ್ ಹಾಗೂ ತಮಿಳು-ಹಿಂದಿ ಚಿತ್ರರಂಗದ ಮ್ಯೂಸಿಕ್ ಮಾಂತ್ರಿಕ ಅನಿರುದ್ಧ್ ರವಿಚಂದರ್ ಮದುವೆಯಾಗ್ತಿದ್ದಾರಾ?

ಮದುವೆ ರೂಮರ್‌ಗೆ ಈಗ ಡೇಟ್ ಅಂಡ್ ವೆನ್ಯೂ ಕೂಡ ಫಿಕ್ಸ್ ಆಗಿದಿಯಾ..? ಈ ಸನ್‌ರೈಸರ್ಸ್ ಕ್ವೀನ್ ಅಂಡ್ ಮ್ಯೂಸಿಕ್ ಕಿಂಗ್ ಮದುವೆ ಗುಟ್ಟೇನು? ಇಲ್ಲಿದೆ ನೋಡಿ ಕಂಪ್ಲೀಟ್ ರಿಪೋರ್ಟ್…

  • IPL ಕ್ರಶ್ ಕಾವ್ಯಾಗೆ ಮ್ಯೂಸಿಕ್ ಕಿಂಗ್ ಅನಿರುದ್ಧ್ ವರನಾಗ್ತಾರಾ..?
  • ಗ್ರೀಕ್ ದ್ವೀಪದಲ್ಲಿ ಕಾವ್ಯಾ ಅನಿರುದ್ಧ್ ಡೆಸ್ಟಿನೇಶನ್ ವೆಡ್ಡಿಂಗ್..?
  • ಅನಿರುದ್ಧ್ ಮದುವೆ ಬಗ್ಗೆ ಮಾವ ಕೊಟ್ಟ ಸುಳಿವು ಏನು..?
  • ವೆಡ್ಡಿಂಗ್ ರೂಮರ್ಸ್ ಬಗ್ಗೆ ಕಾವ್ಯಾ ಅನಿರುದ್ಧ್ ಮೌನ

ಐಪಿಎಲ್ ಪಂದ್ಯಗಳ ವೇಳೆ ಅಂಪೈರ್ ತೀರ್ಪಿಗೆ, ಸಿಕ್ಸರ್-ಫೋರ್‌ಗಳಿಗೆ ಗ್ಯಾಲರಿಯಲ್ಲಿ ವಿಭಿನ್ನ ರಿಯಾಕ್ಷನ್ ಕೊಟ್ಟು ಲಕ್ಷಾಂತರ ಕ್ರಿಕೆಟ್ ಪ್ರೇಮಿಗಳ ಹೃದಯ ಗೆದ್ದಿದ್ದ ಸನ್‌ರೈಸರ್ಸ್ ಹೈದರಾಬಾದ್ ಕಾವ್ಯಾ ಮಾರನ್ ಸದ್ಯದಲ್ಲೇ ಮದುವೆಯಾಗಲಿದ್ದಾರೆ ಅನ್ನೋ ಸುದ್ದಿ ಕಾಡ್ಫಿಚ್ಚಿನಂತೆ ಹಬ್ಬಿದೆ. ಭಾರತೀಯ ಚಿತ್ರರಂಗದ ಟಾಪ್ ಅಂಡ್ ಹಾಟೆಸ್ಟ್ ಮ್ಯೂಸಿಕ್ ಡೈರೆಕ್ಟರ್ ಅನಿರುದ್ಧ್ ರವಿಚಂದರ್ ಜೊತೆ ಕಾವ್ಯಾ ಹೆಸರು ಸೌತ್ ಇಂಡಸ್ಟ್ರಿಯಲ್ಲಿ ಜೋರಾಗಿಯೇ ಸದ್ದು ಮಾಡುತ್ತಿದೆ. ಸಿನಿಮಾ ಮತ್ತು ಕ್ರಿಕೆಟ್ ಲೋಕದ ಈ ಹೈ-ಪ್ರೊಫೈಲ್ ಕಾಂಬಿನೇಷನ್ ನೋಡಿ ಅಭಿಮಾನಿಗಳು ವಾಹ್, ವಾಟ್ ಎ ಜೋಡಿ ಅಂತ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಮಾಡುತ್ತಿದ್ದಾರೆ.

ಇಷ್ಟು ದಿನ ಈ ಜೋಡಿಯ ಮದುವೆ ಸೀಶೆಲ್ಸ್ ದ್ವೀಪದಲ್ಲಿ ನಡೆಯಲಿದೆ ಎಂಬ ಚರ್ಚೆ ಇತ್ತು. ಆದರೆ ಈಗ ಸೀನ್ ಬದಲಾಗಿದ್ದು, ಈ ಲವ್ ಬರ್ಡ್ಸ್ ನವೆಂಬರ್ 10ರಂದು ಗ್ರೀಕ್ ದೇಶದ ಮೈಂಡ್-ಬ್ಲೋಯಿಂಗ್ ಲೋಕೇಶನ್‌ನಲ್ಲಿ ಗ್ರ್ಯಾಂಡ್ ಆಗಿ ಡೆಸ್ಟಿನೇಶನ್ ವೆಡ್ಡಿಂಗ್ ಮಾಡಿಕೊಳ್ಳಲಿದ್ದಾರೆ ಎಂಬ ಶಾಕಿಂಗ್ ಗಾಸಿಪ್ ಹೊರಬಿದ್ದಿದೆ. ಈ ಮದುವೆ ಚರ್ಚೆಗೆ ಗಾಸಿಪ್ ಗ್ಯಾಂಗ್ ಮಾತ್ರ ಕಾರಣವಲ್ಲ, ಸ್ವತಃ ಅನಿರುದ್ಧ್ ಮಾವ, ಹಿರಿಯ ನಟ ವೈ.ಜಿ. ಮಹೇಂದ್ರನ್ ಜೂನ್‌ನಲ್ಲೇ 'ಶೀಘ್ರದಲ್ಲೇ ಅನಿರುದ್ಧ್ ಮದುವೆ ನಡೆಯಲಿದೆ' ಎಂದು ಸುಳಿವು ಕೊಟ್ಟಿದ್ದಾರೆ.

ಸನ್ ನೆಟ್‌ವರ್ಕ್ ಸಾಮ್ರಾಜ್ಯದ ವಾರಸುದಾರರಾದ ಕಾವ್ಯಾ ಮಾರನ್ ಹಾಗೂ ರಜನಿಕಾಂತ್ ಸಂಬಂಧಿಯಾಗಿರೋ ಅನಿರುದ್ಧ್, ಇಬ್ಬರೂ ಅಪಾರ ಆಸ್ತಿ ಹಾಗೂ ಪ್ರಭಾವ ಹೊಂದಿರೋ ಕುಟುಂಬದವರು. ಆದರೆ, ಕೋಟಿ ಕೋಟಿ ಖರ್ಚು ಮಾಡಿ ಸಾರ್ವಜನಿಕವಾಗಿ ಹಂಗಾಮ ಮಾಡುವ ಬದಲು, ಅತ್ಯಂತ ಆಪ್ತರು ಹಾಗೂ ಕುಟುಂಬದವರ ಸಮ್ಮುಖದಲ್ಲಿ ತೀರಾ ಖಾಸಗಿಯಾಗಿ ಈ ವೆಡ್ಡಿಂಗ್ ಪ್ಲಾನ್ ಮಾಡಿದ್ದಾರೆ ಎನ್ನಲಾಗುತ್ತಿದೆ. ಗ್ರೀಸ್‌ನಲ್ಲಿ ತಾಳಿ ಕಟ್ಟಿದ ಬಳಿಕ, ಈ ಜೋಡಿ ಸುದೀರ್ಘ ವಿದೇಶಿ ಪ್ರವಾಸ ಕೈಗೊಂಡು ಒಟ್ಟಿಗೆ ಕ್ವಾಲಿಟಿ ಟೈಮ್ ಸ್ಪೆಂಡ್ ಮಾಡಲಿದೆ ಅನ್ನೋದು ಕಾಲಿವುಡ್ ಅಂಗಳದ ಹಾಟ್ ಟಾಕ್.

'ವೈ ದಿಸ್ ಕೊಲವೆರಿ ಡಿ' ಹಾಡಿನಿಂದ ಗ್ಲೋಬಲ್ ಫೇಮಸ್ ಆಗಿ, ಇತ್ತೀಚೆಗೆ 'ಜವಾನ್' ಹಾಗೂ 'ಜೈಲರ್' ಮೂಲಕ ಸೌಂಡ್ ಮಾಡಿದ್ದ ಅನಿರುದ್ಧ್, ಮದುವೆ ವಿರಾಮಕ್ಕೂ ಮುನ್ನ ತಮ್ಮ ಕೈಯಲ್ಲಿದ್ದ ಪ್ರಾಜೆಕ್ಟ್‌ಗಳನ್ನು ಕಂಪ್ಲೀಟ್ ಮಾಡೋ ಹರಿಬರದಲ್ಲಿದ್ದಾರೆ. ಶಾರುಖ್ ಖಾನ್ ಅಭಿನಯದ 'ಕಿಂಗ್', ಕಮಲ್ ಹಾಸನ್-ರಜನಿಕಾಂತ್ ಸಿನಿಮಾಗಳು ಸೇರಿದಂತೆ 'ಜೈಲರ್ 2' ಹಾಗೂ 'ದಿ ಪ್ಯಾರಡೈಸ್' ಸಿನಿಮಾಗಳ ಮ್ಯೂಸಿಕ್ ವರ್ಕ್ ಮುಗಿಸಿ, ಆಮೇಲಷ್ಟೇ ವೆಡ್ಡಿಂಗ್ ಸೂಟ್‌ಕೇಸ್ ಪ್ಯಾಕ್ ಮಾಡಲಿದ್ದಾರಂತೆ. ಮದುವೆಯ ನಂತರವೇ ಉಳಿದ ಮ್ಯೂಸಿಕ್ ಬ್ಯಾಕ್-ಲಾಂಡ್ರಿ ವರ್ಕ್ಸ್‌ಗೆ ಕೈಹಾಕಲಿದ್ದಾರೆ ಎನ್ನಲಾಗಿದೆ.

ಅಂದಹಾಗೆ ನವೆಂಬರ್ 10ರ ಮದುವೆ ಡೇಟ್, ಗ್ರೀಸ್ ವೆನ್ಯೂ ಎಷ್ಟೇ ವೈರಲ್ ಆಗ್ತಿದ್ದರೂ, ಕಾವ್ಯಾ ಮಾರನ್ ಆಗ್ಲಿ ಅಥವಾ ಅನಿರುದ್ಧ್ ರವಿಚಂದರ್ ಆಗ್ಲಿ ಈವರೆಗೆ ಎಲ್ಲೂ ಅಧಿಕೃತವಾಗಿ ಬಾಯಿ ಬಿಟ್ಟಿಲ್ಲ. ಸನ್ ಗ್ರೂಪ್ ಆಗಲಿ, ಅನಿರುದ್ಧ್ ಕುಟುಂಬವಾಗಲಿ ಈ ಸುದ್ದಿಯನ್ನು ಕನ್ಫರ್ಮ್ ಮಾಡದೇ ಇರೋದ್ರಿಂದ, ಸದ್ಯಕ್ಕಿದು ಬರೀ ಗಾಸಿಪ್ ಎನ್ನಬಹುದು. ಆದರೆ, ಈ ನ್ಯೂಸ್ ನಿಜವೇ ಆಗಿದ್ದರೆ ಭಾರತೀಯ ಎಂಟರ್‌ಟೈನ್‌ಮೆಂಟ್ ಅಂಡ್ ಕ್ರಿಕೆಟ್ ಹಿಸ್ಟರಿಯಲ್ಲೇ ಇದೊಂದು ಆಲ್-ಟೈಮ್ ಬಿಗ್ಗೆಸ್ಟ್ ವೆಡ್ಡಿಂಗ್ ಆಗೋದ್ರಲ್ಲಿ ಡೌಟೇ ಇಲ್ಲ.

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್

Dailyhunt
Disclaimer: This content has not been generated, created or edited by Dailyhunt. Publisher: Guaranteenews