Dailyhunt Logo
  • Light mode
    Follow system
    Dark mode
    • Play Story
    • App Story
ಇರಾನ್-ಅಮೆರಿಕ ಉದ್ವಿಗ್ನತೆ ನಡುವೆ ಸಿರಿಯಾಗೆ 'ಬಿಗ್ ಗಿಫ್ಟ್' ನೀಡಿದ ಅಮೆರಿಕಾ!

ಇರಾನ್-ಅಮೆರಿಕ ಉದ್ವಿಗ್ನತೆ ನಡುವೆ ಸಿರಿಯಾಗೆ 'ಬಿಗ್ ಗಿಫ್ಟ್' ನೀಡಿದ ಅಮೆರಿಕಾ!

Guaranteenews 1 week ago

ಸಿರಿಯಾ : ಮಧ್ಯಪ್ರಾಚ್ಯದಲ್ಲಿ ಇರಾನ್ ಮತ್ತು ಅಮೆರಿಕ ನಡುವಿನ ಉದ್ವಿಗ್ನತೆ ಹೆಚ್ಚುತ್ತಿರುವ ಬೆನ್ನಲ್ಲೇ, ಸಿರಿಯಾ ದೇಶಕ್ಕೆ ಅಮೆರಿಕ ದೊಡ್ಡ ಮಟ್ಟದ ರಾಜಕೀಯ ಮತ್ತು ಆರ್ಥಿಕ ಸಡಿಲಿಕೆ ನೀಡಿದೆ. ಇಷ್ಟು ದಿನ ಸಿರಿಯಾ ಮೇಲಿದ್ದ ಕಠಿಣ ಆರ್ಥಿಕ ನಿರ್ಬಂಧಗಳನ್ನು ಅಮೆರಿಕ ಸಡಿಲಗೊಳಿಸಿದ್ದು, ಇದನ್ನು ಸಿರಿಯಾಗೆ ಸಿಕ್ಕ ಪ್ರಮುಖ 'ಉಡುಗೊರೆ' ಎಂದೇ ವಿಶ್ಲೇಷಿಸಲಾಗುತ್ತಿದೆ.

ಬ್ಲಾಕ್ ಲಿಸ್ಟ್ನಿಂದ ಸಿರಿಯಾ ಮುಕ್ತಿ-ಅಹ್ಮದ್ ಅಲ್-ಶರಾಗೆ ಬಿಗ್ ಬಂಪರ್

ಸುಮಾರು ದಶಕಗಳಿಂದ ಭಯೋತ್ಪಾದನೆ ಹಾಗೂ ಆಂತರಿಕ ಸಂಘರ್ಷದ ಕಾರಣಕ್ಕಾಗಿ ಸಿರಿಯಾವನ್ನು ಅಮೆರಿಕ ಕಪ್ಪುಪಟ್ಟಿಗೆ (Blacklist) ಸೇರಿಸಿ ದಿಗ್ಬಂಧನ ಹೇರಿತ್ತು. ಆದರೆ ಇದೀಗ ಸಿರಿಯಾ ಮೇಲಿನ ಕಠಿಣ ನಿರ್ಬಂಧಗಳನ್ನು ಸಡಿಲಗೊಳಿಸಿರುವುದು ದೇಶದ ಆರ್ಥಿಕ ಚೇತರಿಕೆಗೆ ದೊಡ್ಡ ಪ್ಲಸ್ ಪಾಯಿಂಟ್ ಆಗಿದೆ. ಪ್ರಸ್ತುತ ಸಿರಿಯಾದ ರಾಜಕೀಯ ಬದಲಾವಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಅಹ್ಮದ್ ಅಲ್-ಶರಾಗೆ ಅಮೆರಿಕದ ಈ ನಡೆಯು ರಾಜಕೀಯವಾಗಿ ದೊಡ್ಡ ಬಲ ತಂದೊಡ್ಡಿದೆ.

ಜಾಗತಿಕ ಹೂಡಿಕೆಗೆ ಬಾಗಿಲು ಮುಕ್ತ

ಅಮೆರಿಕದ ದಿಗ್ಬಂಧನದಿಂದಾಗಿ ಇಷ್ಟು ದಿನ ವಿದೇಶಿ ಕಂಪನಿಗಳು ಹಾಗೂ ಇತರ ರಾಷ್ಟ್ರಗಳು ಸಿರಿಯಾದಲ್ಲಿ ಹೂಡಿಕೆ (Investment) ಮಾಡಲು ಹಿಂಜರಿಯುತ್ತಿದ್ದವು. ಇದೀಗ ನಿರ್ಬಂಧ ಸಡಿಲಿಕೆಯಾಗಿರುವುದರಿಂದ, ಸಿರಿಯಾದಲ್ಲಿ ಮೂಲಸೌಕರ್ಯ ಮತ್ತು ವ್ಯಾಪಾರ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಹೂಡಿಕೆದಾರರ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ. ಇದು ಮುಂದಿನ ದಿನಗಳಲ್ಲಿ ಸಿರಿಯಾ ತನ್ನ ಆರ್ಥಿಕ ಪಥವನ್ನು ಹೊಸದಾಗಿ ನಿರ್ಮಿಸಿಕೊಳ್ಳಲು ನೆರವಾಗಲಿದೆ.

ಜಾಗತಿಕ ಬಲಪ್ರದರ್ಶನ

ಅಮೆರಿಕ vs ರಷ್ಯಾ-ಚೀನಾ: * ಜಾಗತಿಕ ರಾಜಕೀಯದಲ್ಲಿ ಅಮೆರಿಕ ಬೆಂಬಲಿತ ದೇಶಗಳು ಒಂದು ತಟ್ಟೆಯಲ್ಲಿದ್ದರೆ, ರಷ್ಯಾ ಮತ್ತು ಚೀನಾ ಬೆಂಬಲಿತ ದೇಶಗಳು ಮತ್ತೊಂದು ಬಣದಲ್ಲಿ ನಿಲ್ಲುತ್ತವೆ. ಅಮೆರಿಕ ಬೆಂಬಲಿಸದ ಅಥವಾ ನಿರ್ಬಂಧ ಹೇರಿದ ದೇಶಗಳ ಬೆನ್ನಿಗೆ ರಷ್ಯಾ ಹಾಗೂ ಚೀನಾ ನಿಲ್ಲುವುದು ಸಾರ್ವತ್ರಿಕ. ಈ ಸೂಪರ್ ಪವರ್ ದೇಶಗಳ ಪೈಪೋಟಿಯು ಇತರೆ ಸಣ್ಣ ದೇಶಗಳಿಗೆ ಒಂದು ಕಡೆ ಲಾಭ ತಂದರೂ, ಮತ್ತೊಂದೆಡೆ ಜಾಗತಿಕ ಸಂಘರ್ಷದ ಅಪಾಯವನ್ನು ತಂದೊಡ್ಡುತ್ತದೆ.

Dailyhunt
Disclaimer: This content has not been generated, created or edited by Dailyhunt. Publisher: Guaranteenews