ಹಾವೇರಿ:ಹಾವೇರಿ ಜಿಲ್ಲೆಯ ಶಿಗ್ಗಾವಿ ಪಟ್ಟಣದ ಗುಡ್ಡದ ಓಣಿಯಲ್ಲಿರುವ ಅಂಗನವಾಡಿ ಕೇಂದ್ರದಲ್ಲಿ ಭೀಕರ ಕೊಲೆ ಪ್ರಕರಣವೊಂದು ನಡೆದಿದೆ. ಅಂಗನವಾಡಿ ಕೇಂದ್ರದ ಸಹಾಯಕಿಯಾಗಿ (ಆಯಾ) ಕಾರ್ಯನಿರ್ವಹಿಸುತ್ತಿದ್ದ ಮಹಿಳೆಯನ್ನು ಆಕೆಯ ಸ್ವಂತ ಸಹೋದರನೇ ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿದ್ದಾನೆ
ಘಟನೆಯ ವಿವರ
ಶಿಗ್ಗಾವಿ ಪಟ್ಟಣದ ಗುಡ್ಡದ ಓಣಿಯಲ್ಲಿರುವ ಅಂಗನವಾಡಿ ಕೇಂದ್ರದಲ್ಲಿ ಆಯಾ ಆಗಿ ಕಾರ್ಯನಿರ್ವಹಿಸುತ್ತಿದ್ದ ಪ್ರೇಮಾ ಶಿವಶಂಕರ್ ವನಹಳ್ಳಿ (29) ಅವರ ಮೇಲೆ, ಅವರ ಒಡಹುಟ್ಟಿದ ತಮ್ಮ ಸಂಜೀವ (ಸಂಜು) ಮಚ್ಚಿನಿಂದ ಹಲ್ಲೆ ನಡೆಸಿದ್ದಾನೆ. ಆರೋಪಿ ಸಂಜು, ಪ್ರೇಮಾ ಅವರ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ್ದು, ತೀವ್ರ ಗಾಯಗೊಂಡ ಪ್ರೇಮಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕುತ್ತಿಗೆ ಹಾಗೂ ಕೈಗಳಿಗೆ ತೀವ್ರವಾಗಿ ಮಚ್ಚಿನ ಕೊಚ್ಚಿ ಕೊಂದಿದ್ದಾನೆ.
ಪ್ರೇಮಾ ಅವರ ನೋವಿನ ಚೀರಾಟವನ್ನು ಕೇಳಿ ಸ್ಥಳೀಯರು ಕೂಡಲೇ ಅಂಗನವಾಡಿ ಕೇಂದ್ರಕ್ಕೆ ದೌಡಾಯಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಸಾರ್ವಜನಿಕರು ಆರೋಪಿ ಸಂಜೀವನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಸದ್ಯ ಆರೋಪಿ ಪೊಲೀಸರ ವಶದಲ್ಲಿದ್ದು, ಶಿಗ್ಗಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಲೆಗೆ ಕಾರಣವೇನು?
ಮೃತೆ ಪ್ರೇಮಾ ಅವರಿಗೆ ಅನೈತಿಕ ಸಂಬಂಧವಿತ್ತು ಎಂಬ ಆರೋಪವೇ ಕೊಲೆಗೆ ಪ್ರಮುಖ ಕಾರಣವಾಗಿದೆ. ಮೃತೆ ತನ್ನ ಗಂಡನ ಜೊತೆಗೆ ಹಾಗೂ ತಮ್ಮನ ಜೊತೆಗೆ ಅನೈತಿಕ ಸಂಬಂಧದ ವಿಚಾರವಾಗಿ ಜಗಳ ಮಾಡುತ್ತಿದ್ದಳು ಎನ್ನಲಾಗಿದೆ. ಕುಟುಂಬದ ಮರ್ಯಾದೆ ಮತ್ತು ಗೌರವದ ಪ್ರಶ್ನೆಯ ಹಿನ್ನೆಲೆ ಸಹೋದರ ಸಂಜು ಈ ದಾರುಣ ಕೃತ್ಯಕ್ಕೆ ಕೈಹಾಕಿದ್ದಾನೆ ಎನ್ನಲಾಗಿದೆ.
ಪ್ರೇಮಾ ಅವರ ಅನೈತಿಕ ಸಂಬಂಧದಿಂದಾಗಿ ಕುಟುಂಬದಲ್ಲಿ ಸಾಕಷ್ಟು ಕಲಹಗಳು ನಡೆಯುತ್ತಿದ್ದವು. ಆಕೆಯ ನಡವಳಿಕೆಯಿಂದ ಕುಟುಂಬಕ್ಕೆ ಅಪಮಾನ ಉಂಟಾಗುತ್ತಿದೆ ಎಂದು ಆರೋಪಿ ಸಂಜು ಹಲವು ಬಾರಿ ಆಕ್ಷೇಪ ವ್ಯಕ್ತಪಡಿಸಿದ್ದನು. ಆದರೆ ಇದಕ್ಕೆ ಪ್ರೇಮಾ ಯಾವುದೇ ಕಿವಿಗೊಡದ ಕಾರಣ, ಸಂಜು ಸಿಟ್ಟಿನಿಂದ ಅಂಗನವಾಡಿ ಕೇಂದ್ರಕ್ಕೆ ಆಗಮಿಸಿ, ಅಲ್ಲಿದ್ದ ಮಚ್ಚಿನಿಂದಲೇ ತನ್ನ ಅಕ್ಕನನ್ನೇ ಕೊಚ್ಚಿ ಕೊಲೆ ಮಾಡಿದ್ದಾನೆ.
ಮೃತೆ ಸುಮಾ ಶಿವಶಂಕರ್ ವನಹಳ್ಳಿ ಅವರು ವೃತ್ತಿಯಲ್ಲಿ ಅಂಗನವಾಡಿ ಆಯಾ ಆಗಿದ್ದರು. ಅವರಿಗೆ ಗಂಡ ಮತ್ತು ಇಬ್ಬರು ಮಕ್ಕಳಿದ್ದಾರೆ. ಶಿಗ್ಗಾವಿ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 302 (ಕೊಲೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿ ಸಂಜೀವನನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಹಾಜರುಪಡಿಸಲಾಗಿದೆ. ಕೊಲೆಯಲ್ಲಿ ಬಳಸಿದ ಮಚ್ಚು ಸೇರಿದಂತೆ ಮಹತ್ವದ ಸಾಕ್ಷಿಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಮೃತೆಯ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಹಾವೇರಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.

