Dailyhunt Logo
  • Light mode
    Follow system
    Dark mode
    • Play Story
    • App Story
'ಟಾಕ್ಸಿಕ್' ಚಿತ್ರ ನೋಡಿ ವ್ಹಾವ್ ಎಂದ ರಿಯಲ್ ಸ್ಟಾರ್: ಯಶ್ ಸಿನಿಮಾಗೆ ಉಪೇಂದ್ರ ಬಹುಪರಾಕ್

'ಟಾಕ್ಸಿಕ್' ಚಿತ್ರ ನೋಡಿ ವ್ಹಾವ್ ಎಂದ ರಿಯಲ್ ಸ್ಟಾರ್: ಯಶ್ ಸಿನಿಮಾಗೆ ಉಪೇಂದ್ರ ಬಹುಪರಾಕ್

Guaranteenews 1 week ago

ನ್ನಡ ಚಿತ್ರರಂಗದ ಹೆಮ್ಮೆಯ ನಟ, ರಾಕಿಂಗ್ ಸ್ಟಾರ್ ಯಶ್ ಅಭಿನಯದ ಮತ್ತು ಗೀತು ಮೋಹನ್ ದಾಸ್ ನಿರ್ದೇಶನದ ಸಿನಿಮಾ 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್ ಅಪ್ಸ್' ಈಗ ಇಡೀ ದೇಶಾದ್ಯಂತ ದೊಡ್ಡ ಮಟ್ಟದ ಸಂಚಲನ ಸೃಷ್ಟಿಸಿದೆ. ಚಿತ್ರ ಬಿಡುಗಡೆಯಾದ ಬೆನ್ನಲ್ಲೇ ಸಿನಿ ಪ್ರೇಕ್ಷಕರು ಮಾತ್ರವಲ್ಲದೆ ಚಿತ್ರರಂಗದ ಗಣ್ಯರು ಕೂಡ ಚಿತ್ರವನ್ನು ವೀಕ್ಷಿಸಿ ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಇದೀಗ ಸ್ಯಾಂಡಲ್‌ವುಡ್‌ನ ಕ್ರಾಂತಿಕಾರಿ ನಿರ್ದೇಶಕ, ರಿಯಲ್ ಸ್ಟಾರ್ ಉಪೇಂದ್ರ ಅವರು 'ಟಾಕ್ಸಿಕ್' ಸಿನಿಮಾವನ್ನು ವೀಕ್ಷಿಸಿದ್ದು, ಚಿತ್ರದ ಅದ್ಭುತ ಮೇಕಿಂಗ್‌ಗೆ ಮನಸೋತಿದ್ದಾರೆ.

ಸಿನಿಮಾವನ್ನು ಕಣ್ತುಂಬಿಕೊಂಡ ನಂತರ ಮಾತನಾಡಿದ ಉಪೇಂದ್ರ ಅವರು, ಚಿತ್ರದ ವಿಶಿಷ್ಟ ಕಥಾಹಂದರ ಹಾಗೂ ಮೇಕಿಂಗ್ ಶೈಲಿಗೆ 'ವ್ಹಾವ್' ಎಂದಿದ್ದಾರೆ. ಚಿತ್ರರಂಗದಲ್ಲಿ ತಾಂತ್ರಿಕವಾಗಿ ಹೊಸ ಆಯಾಮಗಳನ್ನು ಪ್ರಯೋಗಿಸುವ ಉಪೇಂದ್ರ ಅವರಿಗೆ 'ಟಾಕ್ಸಿಕ್' ಚಿತ್ರದ ದೃಶ್ಯ ವೈಭವ ಹಾಗೂ ಚಿತ್ರಕಥೆಯ ಸಂಯೋಜನೆ ವಿಶೇಷವಾಗಿ ಇಷ್ಟವಾಗಿದೆ. ಚಿತ್ರದಲ್ಲಿ ದುಡಿದಿರುವ ಪ್ರತಿಯೊಬ್ಬ ಕಲಾವಿದರು ಮತ್ತು ತಂತ್ರಜ್ಞರ ಶ್ರದ್ಧೆ, ಅಪಾರ ಶ್ರಮ ಹಾಗೂ ಕಲಾತ್ಮಕತೆಯನ್ನು ಉಪ್ಪಿ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

ಉಪೇಂದ್ರ ಅವರು, 'ಟಾಕ್ಸಿಕ್' ಚಿತ್ರದ ಇಡೀ ತಂಡಕ್ಕೆ ತಮ್ಮ ವಿಶೇಷ ಅಭಿನಂದನೆಗಳನ್ನು ಸಖತ್ ಕಾವ್ಯಮಯವಾಗಿ ಸಲ್ಲಿಸಿದ್ದಾರೆ. ಗೋವಾದ ಹಿನ್ನೆಲೆಯಲ್ಲಿ ನಡೆಯುವ ಅಫೀಮು ದಂಧೆ ಮತ್ತು ಕ್ರಿಮಿನಲ್ ಜಗತ್ತಿನ ಕಥೆಯನ್ನು ದೃಶ್ಯರೂಪಕ್ಕೆ ತಂದಿರುವ ರೀತಿ ಭಾರತೀಯ ಚಿತ್ರರಂಗದಲ್ಲೇ ವಿಭಿನ್ನ ಪ್ರಯೋಗವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಚಿತ್ರದ ನಾಯಕ ಯಶ್ ಅವರ ಅಭಿನಯ ಮತ್ತು ಚಿತ್ರದ ಮೇಲಿರುವ ಅವರ ದೃಷ್ಟಿಕೋನವನ್ನು ಹೊಗಳುವ ಮೂಲಕ ಇಡೀ ತಂಡಕ್ಕೆ 'ಹ್ಯಾಟ್ ಆಫ್' ಎಂದಿದ್ದಾರೆ.

ಯಶ್ ಅವರ Monster Mind Creations ಮತ್ತು KVN Productions ಜಂಟಿಯಾಗಿ ನಿರ್ಮಿಸಿರುವ ಈ ಚಿತ್ರವು ಸಂಚಲನ ಮೂಡಿಸಿದೆ. 'ಸಿನಿಮಾದ ಮೇಲೆ ಇಟ್ಟಿರುವ ಪ್ರೀತಿ ಮತ್ತು ಪ್ರತಿಯೊಂದು ಫ್ರೇಮ್‌ನಲ್ಲಿಯೂ ಕಾಣುವ ತಂತ್ರಜ್ಞರ ಕಲೆ ನಿಜಕ್ಕೂ ಬೆರಗುಗೊಳಿಸುತ್ತದೆ. ಇಂತಹ ಜಾಗತಿಕ ಮಟ್ಟದ ಸಿನಿಮಾಗಳು ನಮ್ಮ ಹೆಮ್ಮೆಯ ಸ್ಯಾಂಡಲ್‌ವುಡ್‌ನಿಂದ ಮೂಡಿಬರುತ್ತಿರುವುದು ಸಂತಸದ ವಿಷಯ' ಎಂದು ಉಪೇಂದ್ರ ನುಡಿದಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Guaranteenews