Dailyhunt Logo
  • Light mode
    Follow system
    Dark mode
    • Play Story
    • App Story
ತುಮಕೂರಿನಲ್ಲಿ ಹಕ್ಕಿಜ್ವರ ಅಟ್ಟಹಾಸ! ಒಂದೇ ದಿನ ರಾಷ್ಟ್ರಪಕ್ಷಿ 8 ನವಿಲುಗಳ ದಾರುಣ ಸಾವು

ತುಮಕೂರಿನಲ್ಲಿ ಹಕ್ಕಿಜ್ವರ ಅಟ್ಟಹಾಸ! ಒಂದೇ ದಿನ ರಾಷ್ಟ್ರಪಕ್ಷಿ 8 ನವಿಲುಗಳ ದಾರುಣ ಸಾವು

Guaranteenews 2 weeks ago

ರ್ನಾಟಕದಲ್ಲಿ ಹಕ್ಕಿಜ್ವರ ಆತಂಕ ತೀವ್ರಗೊಂಡಿದೆ. ತುಮಕೂರು ಜಿಲ್ಲೆಯಲ್ಲಿ ಮತ್ತೊಮ್ಮೆ ರಾಷ್ಟ್ರಪಕ್ಷಿ ನವಿಲುಗಳ ಸಾವಿನ ಸರಣಿ ಮುಂದುವರೆದಿದೆ. ತುಮಕೂರು ತಾಲೂಕಿನ ಊರ್ಡಿಗೆರೆ ಮತ್ತು ಕೋಳಿಹಳ್ಳಿ ಪ್ರದೇಶಗಳಲ್ಲಿ ಒಂದೇ ದಿನ 8 ನವಿಲುಗಳು ಸಾವನ್ನಪ್ಪಿವೆ. ಈವರೆಗೆ ಜಿಲ್ಲೆಯಲ್ಲಿ ಒಟ್ಟು 54 ನವಿಲುಗಳು ಹಕ್ಕಿಜ್ವರಕ್ಕೆ ಬಲಿಯಾಗಿವೆ ಎಂದು ವರದಿಯಾಗಿದೆ.

ಗ್ರಾಮಸ್ಥರಲ್ಲಿ ಆತಂಕ

ಸಾಲು ಸಾಲು ನವಿಲುಗಳು ಸಾವನ್ನಪ್ಪುತ್ತಿರುವುದು ಸ್ಥಳೀಯರಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ. ಈ ಪ್ರದೇಶಗಳಲ್ಲಿ ಜನರಲ್ಲಿ ಪ್ರಾಣಭಯ ಮೂಡಿದ್ದು, ವೈರಸ್ ಮನುಷ್ಯರಿಗೂ ಹರಡುವ ಸಾಧ್ಯತೆಯ ಬಗ್ಗೆ ಚರ್ಚೆ ನಡೆಯುತ್ತಿದೆ.

ಆರೋಗ್ಯ ಇಲಾಖೆ ಅಧಿಕಾರಿಗಳು ಪ್ರಭಾವಿತ 38 ಗ್ರಾಮಗಳಲ್ಲಿ ಮನೆಮನೆಗೆ ಭೇಟಿ ನೀಡಿ ತುರ್ತು ಆರೋಗ್ಯ ತಪಾಸಣೆ ನಡೆಸುತ್ತಿದ್ದಾರೆ. ನವಿಲುಗಳ ಸಾವು ಸಂಭವಿಸಿರುವ ಪ್ರದೇಶಗಳ ಸುತ್ತಮುತ್ತಲಿನ ಕೋಳಿ ಫಾರ್ಮ್‌ಗಳು ಮತ್ತು ಮಾಂಸದ ಅಂಗಡಿಗಳನ್ನು ತುರ್ತಾಗಿ ಮುಚ್ಚುವಂತೆ ಜಿಲ್ಲಾಡಳಿತ ಆದೇಶ ಹೊರಡಿಸಿದೆ.

ಸ್ಥಳೀಯರ ಆಕ್ರೋಶ

ಆದರೆ ಕೆಲವು ಕೋಳಿ ಮತ್ತು ಮಾಂಸದ ಅಂಗಡಿಗಳು ಇನ್ನೂ ವ್ಯಾಪಾರ ಮುಂದುವರಿಸುತ್ತಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಅಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಏನಿದು ಹಕ್ಕಿಜ್ವರ?

H5N1 ವೈರಸ್‌ನಿಂದ ಉಂಟಾಗುವ ಹಕ್ಕಿಜ್ವರ ಪಕ್ಷಿಗಳಿಗೆ ಬಹಳ ಅಪಾಯಕಾರಿ. ಇದು ತೀವ್ರ ಸೋಂಕು ಬೀರುವ ಸಾಮರ್ಥ್ಯ ಹೊಂದಿದ್ದು, ಅಪರೂಪವಾಗಿ ಮನುಷ್ಯರಿಗೂ ಹರಡುವ ಸಾಧ್ಯತೆ ಇದೆ. ಆದ್ದರಿಂದ ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ಎಚ್ಚರಿಕೆಯಿಂದ ಕಾರ್ಯನಿರ್ವಹಿಸುತ್ತಿದೆ.

ನವಿಲು ಅಥವಾ ಯಾವುದೇ ಪಕ್ಷಿಗಳ ಸಾವು ಕಂಡುಬಂದಲ್ಲಿ ತಕ್ಷಣ ಸ್ಥಳೀಯ ಪಶುವೈದ್ಯಾಲಯ ಅಥವಾ ಆರೋಗ್ಯ ಕೇಂದ್ರಕ್ಕೆ ಮಾಹಿತಿ ನೀಡಿ. ಮೃತ ಪಕ್ಷಿಗಳನ್ನು ನೇರ ಸ್ಪರ್ಶಿಸದಂತೆ ಎಚ್ಚರಿಕೆ ವಹಿಸಿ.

Dailyhunt
Disclaimer: This content has not been generated, created or edited by Dailyhunt. Publisher: Guaranteenews