Dailyhunt
ಯುದ್ಧದ ಇಂಪ್ಯಾಕ್ಟ್ ಏನು.? ಹಾರ್ಮುಜ್ ಜಲಸಂಧಿಯಲ್ಲಿ ದಾಟುವ ಹಡಗುಗಳಿಗೆ ಶುಲ್ಕ!

ಯುದ್ಧದ ಇಂಪ್ಯಾಕ್ಟ್ ಏನು.? ಹಾರ್ಮುಜ್ ಜಲಸಂಧಿಯಲ್ಲಿ ದಾಟುವ ಹಡಗುಗಳಿಗೆ ಶುಲ್ಕ!

Guaranteenews 3 weeks ago

ಧ್ಯಪ್ರಾಚ್ಯದ ಉದ್ವಿಗ್ನ ಪರಿಸ್ಥಿತಿಗಳು ಜಾಗತಿಕ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ ಬೀರುತ್ತಿವೆ. ತೈಲ ಸಾಗಾಟದ ಪ್ರಮುಖ ಮಾರ್ಗವಾಗಿರುವ ಹಾರ್ಮುಜ್ ಜಲಸಂಧಿ ಮೂಲಕವೇ ಕೂರ್ಗ್ ಶಿಪ್ಸ್ ಶುಲ್ಕ ಕಟ್ಟಿಯೇ ಪಾಸ್ ಆಗಬೇಕಾದ ಸ್ಥಿತಿ ಎದುರಾಗಿದೆ. ಇದರ ನೇರ ಪರಿಣಾಮವಾಗಿ ಪೆಟ್ರೋಲ್, ಡೀಸೆಲ್ ಮತ್ತು ಎಲ್ಪಿಜಿ ಬೆಲೆಗಳಲ್ಲಿ ಇಳಿಕೆಯ ಸಾಧ್ಯತೆಗಳು ಕಡಿಮೆ ಇದೆ ಎನ್ನಲಾಗಿದೆ.

ಈ ಹಿಂದೆ ಉಚಿತ ಸಂಚಾರಕ್ಕೆ ಹೆಸರಾಗಿದ್ದ ಹಾರ್ಮುಜ್ ಜಲಸಂಧಿ ಈಗ ಮೊದಲಿನಂತಿಲ್ಲ. ಇರಾನ್ ಮತ್ತು ಒಮನ್ ದೇಶಗಳು ಈ ಜಲಸಂಧಿಯ ಮೂಲಕ ಹಾದುಹೋಗುವ ಪ್ರತಿಯೊಂದು ಹಡಗಿಗೂ ಪ್ರಯಾಣ ಸುಂಕ (ಟೋಲ್) ವಿಧಿಸಲು ನಿರ್ಧರಿಸಿವೆ. ಇದನ್ನು 'ಹಾರ್ಮುಜ್ ಶುಲ್ಕ' ಅಥವಾ 'ಪುನರ್ ನಿರ್ಮಾಣ ಶುಲ್ಕ' ಎಂದು ಕರೆಯಲಾಗುತ್ತದೆ. ಈ ಹೊಸ ಸುಂಕದಿಂದಾಗಿ ಕಚ್ಚಾ ಎಣ್ಣೆಯ ಸಾಗಾಣಿಕಾ ವೆಚ್ಚ ಆಕಾಶಕ್ಕೇರಿದೆ.

ಇರಾನ್ನ ಬೇಡಿಕೆಯ ಪ್ರಕಾರ, ಪ್ರತಿಯೊಂದು ಹಡಗಿಗೆ 2 ಮಿಲಿಯನ್ ಡಾಲರ್ (ಸುಮಾರು 16.5 ಕೋಟಿ ರೂ.) ಪಾವತಿಸಬೇಕಾಗುತ್ತದೆ. ದಿನದ ಸರಾಸರಿ 138 ಹಡಗುಗಳು ಈ ಜಲಸಂಧಿ ದಾಟುತ್ತವೆ ಎಂದು ಅಂದಾಜಿಸಲಾಗಿದೆ. ಇದರಿಂದ ಇರಾನ್‌ಗೆ ಪ್ರತಿದಿನ 276 ಮಿಲಿಯನ್ ಡಾಲರ್ (ಸುಮಾರು 2,275 ಕೋಟಿ ರೂ.) ಆದಾಯ ಬೀಳಲಿದೆ. ಈ ಸಂಗ್ರಹವಾದ ಸುಂಕವನ್ನು ಇರಾನ್ ಮತ್ತು ಒಮನ್ 50:50 ಅನುಪಾತದಲ್ಲಿ ಹಂಚಿಕೊಳ್ಳುವ ಸಾಧ್ಯತೆಯಿದೆ.

ಒಂದು ತಿಂಗಳಲ್ಲಿ ಹಾರ್ಮುಜ್ ಟೋಲ್ ಮೂಲಕ ಸಂಗ್ರಹವಾಗುವ ಒಟ್ಟು ಮೊತ್ತ ಸುಮಾರು 8.28 ಬಿಲಿಯನ್ ಡಾಲರ್ (ಸುಮಾರು 6.82 ಲಕ್ಷ ಕೋಟಿ ರೂ.) ಆಗಿರುತ್ತದೆ.

ಕೇವಲ ಟೋಲ್ ಶುಲ್ಕ ಮಾತ್ರವಲ್ಲದೆ, ಯುದ್ಧದ ಹೆಚ್ಚುವರಿ ಅಪಾಯದ ಕಾರಣ ಹಡಗುಗಳ ವಿಮಾ ಮೌಲ್ಯದಲ್ಲೂ ಗಣನೀಯ ಏರಿಕೆಯಾಗಿದೆ. ಯುದ್ಧದ ಅಪಾಯವನ್ನು ಗಮನಿಸಿ ವಿಮಾ ಕಂಪನಿಗಳು ಈಗ ಶೇಕಡಾ 5 ರಷ್ಟು ಹೆಚ್ಚುವರಿ ಪ್ರೀಮಿಯಂ ವಿಧಿಸುತ್ತಿವೆ. ಇದು ಪ್ರತಿ ಹಡಗಿನ ಒಟ್ಟು ಖರ್ಚನ್ನು ಮತ್ತಷ್ಟು ಹೆಚ್ಚಿಸಿದೆ.

ಒಂದು ಹಡಗು ಹಾರ್ಮುಜ್ ಜಲಸಂಧಿ ದಾಟಲು ಒಟ್ಟಾರೆ ಸುಮಾರು 7 ಮಿಲಿಯನ್ ಡಾಲರ್ (ಸುಮಾರು 57.7 ಕೋಟಿ ರೂ.) ವೆಚ್ಚ ಮಾಡಬೇಕಾಗುತ್ತದೆ. ಇದರಲ್ಲಿ ಟೋಲ್ ಶುಲ್ಕ, ಹೆಚ್ಚುವರಿ ವಿಮಾ ಮೊತ್ತ ಮತ್ತು ಇತರ ಸುರಕ್ಷತಾ ವೆಚ್ಚಗಳು ಸೇರಿವೆ. ಈ ಬೃಹತ್ ವೆಚ್ಚ ಅಂತಿಮವಾಗಿ ಪೆಟ್ರೋಲ್, ಡೀಸೆಲ್ ಮತ್ತು ಎಲ್ಪಿಜಿಯ ಬೆಲೆಗಳ ಮೇಲೂ ಪರಿಣಾಮ ಬೀರುತ್ತದೆ.. ಸಾಮಾನ್ಯ ಗ್ರಾಹಕರು ಈ ಏರಿಕೆಯ ಭಾರವನ್ನು ನೇರವಾಗಿ ಅನುಭವಿಸಬೇಕಾಗುತ್ತದೆ.

Dailyhunt
Disclaimer: This content has not been generated, created or edited by Dailyhunt. Publisher: Guaranteenews