Thursday, 26 Nov, 5.29 pm Hindusthan Samachar

ಸುದ್ದಿ
243.35 ಕೋಟಿ ರೂ.ವೆಚ್ಚದ ಬೃಹತ್ ನೀರಾವರಿ ಯೋಜನೆ

ಹೊಸಪೇಟೆ,ನ.26, (ಹಿ.ಸ); ಜಲಸಂಪನ್ಮೂಲ ಇಲಾಖೆ, ಕರ್ನಾಟಕ ನೀರಾವರಿ ನಿಗಮದ ನಿಯಮಿತದ ವತಿಯಿಂದ 243.35 ಕೋಟಿ ರೂ.ಗಳ ವೆಚ್ಚದಲ್ಲಿ ವಿಜಯನಗರ ಕ್ಷೇತ್ರ ವ್ಯಾಪ್ತಿಯ ಪಾಪಿನಾಯನಕನಹಳ್ಳಿ ಹಾಗೂ ಸುತ್ತಮುತ್ತಲಿನ 22 ಗ್ರಾಮಗಳಿಗೆ ನೀರನ್ನು ಎತ್ತಿ ಶಾಶ್ವತ ಕುಡಿಯುವ ನೀರು ಪೂರೈಸುವ ಮತ್ತು 22ಕೆರೆಗಳನ್ನು ತುಂಬಿಸುವ ಬೃಹತ್ ನೀರಾವರಿ ಯೋಜನೆಯಿಂದ ಈ ಭಾಗದ ಜನರ ಬದುಕೇ ಬದಲಾಗಿದೆ. ಇನ್ಮುಂದೆ ಇದುವರೆಗೆ ಪಡುತ್ತಿದ್ದ ನೀರಿನ ಬವಣೆ ಅಂತ್ಯವಾಗಲಿದೆ.


ಹೊಸಪೇಟೆ ತಾಲ್ಲೂಕಿನ ಪಾಪಿನಾಯಕನಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳು ತುಂಗಭದ್ರಾ ಬಲದಂಡೆ ಮೇಲ್ಮಟ್ಟದ ಕಾಲುವೆಯ ಮೇಲ್ಬಾಗದಲ್ಲಿ ಬರುತ್ತಿದ್ದು, ಸದರಿ ಗ್ರಾಮಗಳು ಗಣಿ ಬಾಧಿತ ಹಾಗೂ ಅತಿ ಹಿಂದುಳಿದ ಗ್ರಾಮಗಳಾಗಿದ್ದು, ಇವುಗಳು ಸುಸ್ಥಿರ, ಸುರಕ್ಷಿತ ಕುಡಿಯುವ ನೀರಿನ ಬವಣೆಯನ್ನು ಅನುಭವಿಸುತ್ತಿವೆ. ಈ ಹಿನ್ನೆಲೆಯಲ್ಲಿ ಈ ಗ್ರಾಮಗಳಿಗೆ ತುಂಗಭದ್ರಾ ನದಿಯಿಂದ ನೀರನ್ನು ಎತ್ತಿ ಕೆರೆಗಳನ್ನು ತುಂಬಿಸುವುದು ಮತ್ತು ಇಂಪೌAಡಿAಗ್ ಕೆರೆಗಳನ್ನು ನಿರ್ಮಿಸಿ ನೀರನ್ನು ಸಂಗ್ರಹಿಸಲು ಈ ಯೋಜನೆ ಅಡಿ ನಿರ್ಧರಿಸಲಾಗಿದೆ.


ಪಾಪಿನಾಯಕನಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳು ಅತಿ ಹಿಂದುಳಿದ ಗಣಿ ಭಾದಿತ ಹಾಗೂ ಕುಡಿಯುವ ನೀರಿನ ಭಾದಿತ ಗ್ರಾಮಗಳಾಗಿವೆ.ಈ ಯೋಜನೆಯ ಅಡಿಯಲ್ಲಿ 10 ಗ್ರಾಮಗಳ ವ್ಯಾಪ್ತಿಯಲ್ಲಿ ಬರುವ ಹಾಲಿ 22 ಕೆರೆಗಳಿಗೆ ಮತ್ತು ಹೊಸ 4 ಇಂಪೌAಡಿಗ್ ರಿಸರ್ವಯರ್‌ಗಳನ್ನು ನಿರ್ಮಿಸಿ ತುಂಗಭದ್ರಾ ನದಿಯಿಂದ ನಿಂಬಾಪುರ, ಗ್ರಾಮದ ಹತ್ತಿರ ಜಾಕ್ವೆಲ್ ನಿರ್ಮಿಸಿ ರೈಸಿಂಗ್ ಮೇನ್ ಮತ್ತು ವಿತರಣಾ ಪೈಪ್ ಲೈನ್ ಮುಖಾಂತರ 0.304 ಟಿ.ಎಮ್.ಸಿ. ನೀರನ್ನು ತುಂಬಿಸಲು ಯೋಜಿಸಲಾಗಿದೆ.


ಈ ಯೋಜನೆಯಿಂದ ಪ್ರಯೋಜನಕ್ಕೊಳಪಡುವ ಗ್ರಾಮಗಳು ಇಂತಿವೆ:

ಇAಗಳಿಗಿ,ಬೈಲುವದ್ದಿಗೇರಿ,ಕಾಕುವಾಳು,ಚಿನ್ನಾಪುರ,ನಲ್ಲಾಪುರ,ಗಾಳೇಮ್ಮಗುಡಿ,ಭುವನಹಳ್ಳಿ,ಜೋಗ,ಗಾದಿಗನೂರು,ಕಾರಿಗನೂರು, ವಡ್ಡರಹಳ್ಳಿ ,ಧರ್ಮಸಾಗರ,ಕೊಟಗಿನಹಾಳ್,ಗುಂಡ್ಲವದ್ದಿಗೇರಿ ಗ್ರಾಮಗಳ 22 ಕೆರೆಗಳಿಗೆ ನೀರನ್ನು ತುಂಬಿಸಲಾಗುತ್ತದೆ.


ಈ ಯೋಜನೆಡಿಯಲ್ಲಿ ಇನ್ ಟೇಕ್ ಕಾಲುವೆ, ಜಾಕ್ ವೆಲ್ ಪಂಪ್ ಹೌಸ್ , ತಲಾ 1310ಊIP 5 ವರ್ಟಿಕಲ್ ಟರ್ಬೈನ್ ಪಂಪ್ ಗಳು (4ತಿoಡಿಞiಟಿg+1sಣಚಿಟಿಜbಥಿ),ಪಂಪಿAಗ್ ಯಂತ್ರೋಪಕರಣಗಳು, 33ಞv/6.6ಞಗಿ ಸಬ್ ಸ್ಪೆಷನ್,16.80 ಕಿ.ಮೀ ಉದ್ದದ ಎಮ್. ಎಸ್, ರೈಸಿಂಗ್ ಮೇನ್,ಡೆಲಿವರಿ ಚೆಂಬರ್‌ಗಳ ನಿರ್ಮಾಣ,52.55 ಕಿ.ಮೀ ಉದ್ದದ ಒS/ಊಆPಇ ಉಡಿಚಿviಣಥಿ ಜisಣಡಿibuಣioಟಿ, ಹೊಸ 4 ಇಂಪೌAಡಿAಗ್ ರಿಸರ್ವಯರ್‌ಗಳನ್ನು ಮತ್ತು ಹಾಲಿ ಕೆರೆಗಳನ್ನು ಪುನಶ್ವೇತನಗೊಳಿಸಿ ನೀರನ್ನು ತುಂಬಿಸಲು ಉದ್ದೇಶಿಸಲಾಗಿದೆ.


ಈ ಯೋಜನೆಯಿಂದ ಹೊಸಪೇಟೆ ತಾಲ್ಲೂಕಿನ 10 ಗ್ರಾಮಗಳ 22 ಕೆರೆಗಳನ್ನು ತುಂಬಿಸುವುದರಿAದ ಅಂತರ್ಜಲಮಟ್ಟ ಹೆಚ್ಚಾಗಿ ಕೊಳವೆ ಬಾವಿಗಳು ಪುನಶ್ವೇತನಗೊಳ್ಳುತ್ತವೆ ಮತ್ತು ಗ್ರಾಮಗಳ ಜನಜಾನುವಾರುಗಳಿಗೆ ಶಾಶ್ವತ ಸುಸ್ಥಿರ ಕುಡಿಯುವ ನೀರನ್ನು ಒದಗಿಸಲು ಅನುವಾಗುವುದು ಮತ್ತು ಕರೆಗಳಡಿಯಲ್ಲಿ ಬರುವ ನೀರಾವರಿ ಕ್ಷೇತ್ರ ಅಭಿವೃದ್ಧಿಗೊಳ್ಳುತ್ತದೆ.


ಸದರಿ ಯೋಜನೆಗೆ ಸರ್ಕಾರದಿಂದ ರೂ:243.35 ಕೋಟಿಗಳಿಗೆ ಆಡಳಿತಾತ್ಮಕ ಅನುಮೋದನೆಯಾಗಿದ್ದು ಪ್ರಸ್ತುತ ಟೆಂಡರ್ ಮೂಲಕ ಕಾಮಗಾರಿಯನ್ನು ಹೊಸಪೇಟೆಯ ಪ್ರಥಮ ದರ್ಜೆಯ ಗುತ್ತಿಗೆದಾರ ದೊಡ್ಡ ಹನುಮಂತಪ್ಪ ಮತ್ತು ಮೇ.ಸುಧಾಕರ ಇನ್ಫ್ರಾಟೆಕ್, ಪ್ರೈ.ಲೀ ಹೊಸಪೇಟೆ ಜಂಟಿ ಸಹಭಾಗಿತ್ವ (ಎoiಟಿಣ ಗಿeಟಿಣuಡಿe) ದೊಂದಿಗೆ ನಿರ್ವಹಿಸಲು ವಹಿಸಲಾಗಿದೆ.

--

ಮುಖ್ಯಾಂಶಗಳು

*243.35ಕೋಟಿ ರೂ. ಅಂದಾಜು ಮೊತ್ತ

*ನೀರಿನ ಮೂಲ: ತುಂಗಭದ್ರಾ ನದಿ ನಿಂಬಾಪುರ ಗ್ರಾಮದ ಹತ್ತಿರ

*ನೀರಿನ ಪ್ರಮಾಣ:0.304ಟಿಎಂಸಿ

*ಇನ್ ಟೆಕ್ ಕಾಲುವೆಯ ಉದ್ದ:100ಮೀ.

*01ಪಂಪ್ ಹೌಸ್ ನಿರ್ಮಾಣ

*16.8ಕಿ.ಮೀ ಎಂಎಸ್ ರೈಸಿಂಗ್ ಮೇನ್ ಉದ್ದ.

52.55ಕಿ.ಮೀ ವಿತರಣಾ ಪೈಪ್ ಎಂಎಸ್/ಎಚ್ಡಿಪಿಇ ಉದ್ದ

*04 ವಿತರಣಾ ತೊಟ್ಟಿಗಳ ಸಂಖ್ಯೆ

*ವಿಟಿ ಪಂಪ್ ಗಳ ಸಂಖ್ಯೆ: ತಲಾ1310ಎಚ್ಪಿಯ 05.

*22ನೀರನ್ನು ಕೆರೆಗಳು ತುಂಬಿಸಲಾಗುವುದು

*04 ಇಂಪೌAಡಿAಗ್ ರಿಸರ್ವರ್ ಗಳು

*22ಗ್ರಾಮಗಳ 48ಸಾವಿರ ಜನರಿಗೆ ಇದರ ಪ್ರಯೋಜನ.


Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Hindusthan Samachar Kannada
Top