Friday, 20 Nov, 11.21 am Hindusthan Samachar

ಸುದ್ದಿ
48 ದಿನಗಳ ಬಳಿಕ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಮೂರು ಪೈಸೆ ಏರಿಕೆ

ನವದೆಹಲಿ, ನ.19 (ಹಿ.ಸ) : ದೇಶದಲ್ಲಿ 48 ದಿನಗಳ ಬಳಿಕ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ತುಸು ಹೆಚ್ಚಳವಾಗಿದೆ. ಲೀಟರ್ ಗೆ ತಲಾ ಮೂರು ಪೈಸೆ ಏರಿಕೆಯಾಗಿದೆ.

ಸಾರ್ವಜನಿಕ ವಲಯದ ಪ್ರಮುಖ ತೈಲ ಮಾರುಕಟ್ಟೆ ಕಂಪನಿಯಾದ ಇಂಡಿಯನ್ ಆಯಿಲ್ ಪ್ರಕಾರ, ದೇಶದ ನಾಲ್ಕು ಪ್ರಮುಖ ಮಹಾನಗರಗಳಲ್ಲಿ ಡೀಸೆಲ್ ಬೆಲೆಯನ್ನು 22 ರಿಂದ 25 ಪೈಸೆ ಮತ್ತು ಪೆಟ್ರೋಲ್ ಅನ್ನು ಪ್ರತಿ ಲೀಟರ್ ಗೆ 17 ರಿಂದ 20 ಪೈಸೆ ಹೆಚ್ಚಿಸಲಾಗಿದೆ. ಕಳೆದ ವಾರ ಒಪೆಕ್ ಸದಸ್ಯರು ತೈಲ ನಿಕ್ಷೇಪ ಮತ್ತು ಉತ್ಪಾದನೆಯನ್ನು ಹೆಚ್ಚಿಸಲು ಅಮೆರಿಕ ಒಪ್ಪಿಕೊಂಡ ನಂತರ ಈ ಬೆಳವಣಿಗೆ ಕಂಡು ಬಂದಿದೆ.

ಹಿಂದುಸ್ತಾನ ಸಮಾಚಾರ/ಎಂ.ಎಸ್ /ಯ.ಮ

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Hindusthan Samachar Kannada
Top