Dailyhunt Logo
  • Light mode
    Follow system
    Dark mode
    • Play Story
    • App Story

ಆ. 7 ರಂದು ನಶಾ ಮುಕ್ತ ಯುವ-ವಿಕಸಿತ ಭಾರತ ವಿಶೇಷ ಜಾಗೃತಿ ಕಾರ್ಯಕ್ರಮ

ಧಾರವಾಡ, 05 ಆಗಸ್ಟ್ (ಹಿ.ಸ.):

ಆಯಂಕರ್:

ಭಾರತ ಸರ್ಕಾರದ ಮೈ ಭಾರತ ಕೇಂದ್ರ, ಯುವಜನ ಹಾಗೂ ಕ್ರೀಡಾ ಸಚಿವಾಲಯ, ಜನತಾ ಶಿಕ್ಷಣ ಸಮಿತಿ ಹಾಗೂ ಶ್ರೀ ಕುಮಾರೇಶ್ವರ ಕಲ್ಚರಲ್ ಸೊಸೈಟಿ(ರಿ), ಇವರ ಸಹಯೋಗದಲ್ಲಿ ಅಗಸ್ಟ್ 07, 2026 ರಂದು ಬೆಳಿಗ್ಗೆ 10 ಗಂಟೆಗೆ ಧಾರವಾಡದ ವಿದ್ಯಾಗಿರಿಯ ಜೆ.ಎಸ್.ಎಸ್.

ಮಹಾವಿದ್ಯಾಲಯದ ಉತ್ಸವ ಹಾಲ್‍ದಲ್ಲಿ "ನಶಾ ಮುಕ್ತ ಯುವ-ವಿಕಸಿತ ಭಾರತ" ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಕಾರ್ಯಕ್ರಮವನ್ನು ಹು-ಧಾ ಕಾನೂನು ಸುವ್ಯವಸ್ಥೆಯ ಉಪಪೊಲೀಸ್ ಆಯುಕ್ತರಾದ ಶುೃತಿ ಎನ್.ಎಸ್. ಅವರು ಉದ್ಘಾಟಿಸುವರು. ಅಧ್ಯಕ್ಷತೆಯನ್ನು ಜನತಾ ಶಿಕ್ಷಣ ಸಮಿತಿಯ ಕಾರ್ಯದರ್ಶಿಗಳಾದ ಡಾ. ಅಜಿತ ಪ್ರಸಾದ್ ವಹಿಸುವರು. ಮುಖ್ಯ ಅತಿಥಿಗಳಾಗಿ ಜೆ.ಎಸ್.ಎಸ್. ಆಡಳಿತಾಧಿಕಾರಿಗಳಾದ ಅರಿಹಂತ ಪ್ರಸಾದ್, ಸಂಸ್ಕøತಿ ಚಿಂತಕರಾದ ಡಾ.ಶಶಿಧರ ನರೇಂದ್ರ, ಜೆ.ಎಸ್.ಎಸ್. ಐ.ಟಿ.ಐ. ಪ್ರಾಚಾರ್ಯರಾದ ಮಹಾವೀರ ಉಪಾಧ್ಯಾಯ ಭಾಗವಹಿಸುವರು.

ಧಾರವಾಡ ಜಿಲ್ಲೆಯ ಮೈ ಭಾರತ ಕೇಂದ್ರದ ಜಿಲ್ಲಾ ಯುವಜನ ಅಧಿಕಾರಿ ಸಂಗ್ರಾಮ ವಿ. ಸಾವಂತ, ಶ್ರೀ ಕುಮಾರೇಶ್ವರ ಕಲ್ಚರಲ್ ಸೊಸೈಟಿ ಸಂಯೋಜಕ ಪ್ರಕಾಶ ಬಾಳಿಕಾಯಿ ಉಪಸ್ಥಿತರಿರುವರು.

16-29 ವರ್ಷದ ವಯೋಮಾನದ ಯುವಜನರಿಗಾಗಿ ನಶಾ ಮುಕ್ತ ಯುವ-ವಿಕಸಿತ ಭಾರತ ಧ್ಯೇಯದೊಂದಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಜಾನಪದ ಸಂಗೀತ (ಗುಂಪು), ಶಾಸ್ತ್ರೀಯ, ಜಾನಪದ ನೃತ್ಯ (ಗುಂಪು), ನಾಟಕ,ಮೂಕಾಭಿನಯ(ಮೈಮ್) (ಗುಂಪು), ಚಿತ್ರಕಲೆ, ಭಾಷಣ, ಡಿಬೇಟ್ (ವೈಯಕ್ತಿಕ), ಕಿರುಚಿತ್ರ, ರೀಲ್ಸ್ (ಏಕವ್ಯಕ್ತಿ, ಗುಂಪು), ಘೋಷವಾಕ್ಯ ಬರವಣಿಗೆ (ಏಕವ್ಯಕ್ತಿ) ಹಾಗೂ ಕವನ ವಾಚನ ಸ್ಪರ್ಧೆ (ಏಕವ್ಯಕ್ತಿ)ಯನ್ನು ಏರ್ಪಡಿಸಲಾಗಿದೆ.

ಆಸಕ್ತ ಯುವಕ, ಯುವತಿಯರು ಮೈ ಭಾರತ ಕೇಂದ್ರದ ಕಾರ್ಯಕ್ರಮ ಸಂಚಾಲಕ ಶಿವಾಜಿ ಕಡ್ಡೆಪ್ಪನವರ ಮೊ: 9743634525 ಗೆ ಸಂಪರ್ಕಿಸಿ, ಹೆಸರು ನೋಂದಾಯಿಸಬೇಕು ಎಂದು ಧಾರವಾಡ ಮೈ ಭಾರತ ಕೇಂದ್ರದ ಕಾರ್ಯಕ್ರಮ ಸಂಚಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.

Dailyhunt
Disclaimer: This content has not been generated, created or edited by Dailyhunt. Publisher: Hindusthan Samachar Kannada