Dailyhunt Logo
  • Light mode
    Follow system
    Dark mode
    • Play Story
    • App Story

ಆಕಾಶವಾಣಿಯಲ್ಲಿ ಜೂನ್ 2ರಂದು 'ಬಾನುಲಿ ಬರಹ' ವಿಶೇಷ ಕಾರ್ಯಾಗಾರ

ಶಿವಮೊಗ್ಗ, 28 ಮೇ (ಹಿ.ಸ.) :

ಯಂಕರ್ : ಭಾರತದ ಸಾರ್ವಜನಿಕ ಪ್ರಸಾರ ಸೇವೆ ಸಂಸ್ಥೆಯಾದ ಪ್ರಸಾರ ಭಾರತಿಯ ಆಕಾಶವಾಣಿಗೆ 90 ವರ್ಷ ತುಂಬುತ್ತಿರುವ ಸಂಭ್ರಮದ ಅಂಗವಾಗಿ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಕೇಂದ್ರದ ವತಿಯಿಂದ 'ಬಾನುಲಿ ಬರಹ' ವಿಶೇಷ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ.

ಈ ವಿಶೇಷ ಕಾರ್ಯಕ್ರಮವು ಜೂನ್ 2ರ ಮಂಗಳವಾರದಂದು ಬೆಳಿಗ್ಗೆ 10:30ಕ್ಕೆ ಭದ್ರಾವತಿಯ ಜೆ.ಪಿ.ಎಸ್. ಕಾಲೋನಿಯಲ್ಲಿರುವ ಆಕಾಶವಾಣಿ ಕೇಂದ್ರದ ಆವರಣದಲ್ಲಿ ಜರುಗಲಿದೆ.

ಕಾರ್ಯಾಗಾರದಲ್ಲಿ ಸತೀಶ್ ಕುಮಾರ್ ಅಡಂಜೆ ಅವರು ಬಾನುಲಿ ಹಾಗೂ ಇತರ ಮಾಧ್ಯಮಗಳ ಬರವಣಿಗೆ ಬಗ್ಗೆ, ಡಾ. ಎನ್. ಸುಧೀಂದ್ರರವರು ಬಾನುಲಿ ನಾಟಕ ರಚನೆ

ಶ್ರೀ ಜಿ. ವಿಜಯಕುಮಾರ್ - ಬಾನುಲಿ ಕೇಳುಗರ ಬರಹ, ಎಸ್. ಆರ್. ಭಟ್ ಬಾನುಲಿ ಬರವಣಿಗೆ ಬಗ್ಗೆ, ಎಸ್. ಎಸ್. ಕೃಷ್ಣಪ್ಪ ಇವರು ಬಾನುಲಿ ತಂತ್ರಜ್ಞಾನ,

ಡಾ. ಎಸ್. ಎಂ. ಸುಧಾಕರ್ ಇವರು ಬಾನುಲಿ ಕೃಷಿ ಬರವಣಿಗೆ ಹಾಗೂ

ಎಂ. ಕೆ. ಶಿವಕುಮಾರ್ ಇವರು ಬಾನುಲಿ ಉದ್ಘೋಷಕ ಬರವಣಿಗೆ ಕುರಿತು ಉಪನ್ಯಾಸ ನೀಡುವರು ಎಂದು ಆಕಾಶವಾಣಿ ಭದ್ರಾವತಿ ಪ್ರಕಟಣೆ ತಿಳಿಸಿದೆ.

ಹಿಂದೂಸ್ತಾನ್ ಸಮಾಚಾರ್ / Rakesh.M.B.

Dailyhunt
Disclaimer: This content has not been generated, created or edited by Dailyhunt. Publisher: Hindusthan Samachar Kannada