Dailyhunt Logo
  • Light mode
    Follow system
    Dark mode
    • Play Story
    • App Story
ಅಮರನಾಥ ಯಾತ್ರೆ ಆರಂಭಕ್ಕೆ ಪ್ರಧಾನಿ ಮೋದಿ ಶುಭಾಶಯ

ಅಮರನಾಥ ಯಾತ್ರೆ ಆರಂಭಕ್ಕೆ ಪ್ರಧಾನಿ ಮೋದಿ ಶುಭಾಶಯ

ನವದೆಹಲಿ, 03 ಜುಲೈ (ಹಿ.ಸ.):

ಆಯಂಕರ್:

ವಿತ್ರ ಅಮರನಾಥ ಯಾತ್ರೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶ-ವಿದೇಶಗಳ ಸಮಸ್ತ ಶಿವಭಕ್ತರಿಗೆ ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸಿದ್ದಾರೆ. ಬಾಬಾ ಬರ್ಫಾನಿಯ ದಿವ್ಯ ದರ್ಶನದ ಈ ಪವಿತ್ರ ಯಾತ್ರೆಯು ಎಲ್ಲ ಭಕ್ತರ ಜೀವನದಲ್ಲಿ ಸುಖ-ಸಮೃದ್ಧಿ, ಸೌಭಾಗ್ಯ ಹಾಗೂ ಉತ್ತಮ ಆರೋಗ್ಯವನ್ನು ತರಲಿ ಎಂದು ಅವರು ಹಾರೈಸಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಸಂದೇಶ ಹಂಚಿಕೊಂಡಿರುವ ಪ್ರಧಾನಿ ಮೋದಿ, ಸಮಸ್ತ ಶಿವಭಕ್ತರಿಗೆ ಪವಿತ್ರ ಶ್ರೀ ಅಮರನಾಥ ಯಾತ್ರೆಯ ಆರಂಭದ ಅನಂತ ಶುಭಾಶಯಗಳು. ಬಾಬಾ ಬರ್ಫಾನಿಯ ದಿವ್ಯ ದರ್ಶನದ ಈ ಯಾತ್ರೆಯು ನಿಮ್ಮೆಲ್ಲರ ಜೀವನದಲ್ಲಿ ಸುಖ-ಸಮೃದ್ಧಿ, ಸೌಭಾಗ್ಯ ಮತ್ತು ಉತ್ತಮ ಆರೋಗ್ಯವನ್ನು ತರಲಿ. ಜಯ ಬಾಬಾ ಬರ್ಫಾನಿ ಎಂದು ಬರೆದುಕೊಂಡಿದ್ದಾರೆ.

ಈ ಸಂದರ್ಭದಲ್ಲಿ ಅವರು ಭಗವಾನ್ ಅಮರನಾಥರ ಮಹಿಮೆಯನ್ನು ಬಣ್ಣಿಸುವ ಸಂಸ್ಕೃತ ಸುಭಾಷಿತವೊಂದನ್ನೂ ಹಂಚಿಕೊಂಡಿದ್ದಾರೆ.

«ವಾಗ್ಬುದ್ಧಿಚಿತ್ತಕರಣೈಶ್ಚ ತಪೋಭಿರುಗ್ರೈಃ

ಶಕ್ಯಂ ಸಮಾಕಲಯಿತುಂ ನ ಯದೀಯರೂಪಮ್।

ತಂ ಭಕ್ತಿಭಾವಸುಲಭಂ ಶರಣಂ ನತಾನಾಂ

ನಿತ್ಯಂ ಭಜಾಮ್ಯಮರನಾಥಮಹಂ ದಯಾಲುಮ್॥»

ಈ ಶ್ಲೋಕದ ಅರ್ಥವನ್ನು ವಿವರಿಸಿರುವ ಪ್ರಧಾನಿ, ಭಗವಾನ್ ಅಮರನಾಥರ ನಿಜಸ್ವರೂಪವನ್ನು ವಾಣಿ, ಬುದ್ಧಿ, ಮನಸ್ಸು ಅಥವಾ ಕಠಿಣ ತಪಸ್ಸಿನ ಮೂಲಕ ಸಂಪೂರ್ಣವಾಗಿ ಅರಿಯಲು ಸಾಧ್ಯವಿಲ್ಲ. ಅವರು ನಿಷ್ಕಪಟ ಭಕ್ತಿ ಮತ್ತು ಸಂಪೂರ್ಣ ಸಮರ್ಪಣೆಯ ಭಾವ ಹೊಂದಿರುವ ಭಕ್ತರಿಗೆ ಮಾತ್ರ ಸುಲಭವಾಗಿ ದೊರೆಯುತ್ತಾರೆ ಎಂದು ಹೇಳಿದ್ದಾರೆ.

ಭಗವಾನ್ ಅಮರನಾಥರ ಶರಣಾಗಿ ಪ್ರತಿದಿನ ಅವರ ಸ್ಮರಣೆ ಹಾಗೂ ಭಜನೆ ಮಾಡುವುದು ಭಕ್ತನ ಪರಮ ಸೌಭಾಗ್ಯವಾಗಿದೆ ಎಂದು ಪ್ರಧಾನಿ ಮೋದಿ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.

Dailyhunt
Disclaimer: This content has not been generated, created or edited by Dailyhunt. Publisher: Hindusthan Samachar Kannada