Dailyhunt
ಬಲ್ಡೋಟ ವಿರೋಧಿ ಹೋರಾಟ ದಿಲ್ಲಿ, ದೇವನಹಳ್ಳಿ ಹೋರಾಟದಂತೆ ಗೆಲ್ಲುತ್ತದೆ : ಸಮತಳ

ಬಲ್ಡೋಟ ವಿರೋಧಿ ಹೋರಾಟ ದಿಲ್ಲಿ, ದೇವನಹಳ್ಳಿ ಹೋರಾಟದಂತೆ ಗೆಲ್ಲುತ್ತದೆ : ಸಮತಳ

ಕೊಪ್ಪಳ, 04 ಏಪ್ರಿಲ್ (ಹಿ.ಸ.) :

ಯಂಕರ್ : ನಗರಸಭೆ ಮುಂದಿನ ಬಲ್ಡೋಟ ತೊಲಗಿಸಿ ಕೊಪ್ಪಳ ಉಳಿಸಿ, ಇಪ್ಪತ್ತೆರಡು ಹಳ್ಳಿಗಳ ಐವತ್ತು ಸಾವಿರ ಜನರ ಜೀವ, ಆರೋಗ್ಯ ರಕ್ಷಿಸಿ, ಬಸಾಪುರ ಕೆರೆ ಸಾರ್ವಜನಿಕರಿಗೆ ಮುಕ್ತಗೊಳಿಸಿ, ತುಂಗಭದ್ರಾ ಜಲಾಶಯ ವಿಷ ಗೊಳಿಸುವ ಕಾರ್ಖಾನೆಗಳನ್ನು ಸೀಜ್ ಮಾಡಿ, ಸಂತ್ರಸ್ತ ಹಳ್ಳಿಗಳಿಗೆ ವಿಶೇಷ ಪ್ಯಾಕೇಜ್ ಘೋಷಿಸಿ ಎಂದು ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ಇದರ ಜಂಟಿ ಕ್ರಿಯಾ ವೇದಿಕೆ ಮೂಲಕ ನಡೆಸುತ್ತಿರುವ 156ನೇ ದಿನದ ಧರಣಿಗೆ ಕರ್ನಾಟಕ ಜನಶಕ್ತಿ ಸಂಘಟನೆಯಿಂದ ಕುಮಾರ ಸಮತಳ ಅವರು ಬೆಂಬಲಿಸಿದರು.

ಅವರು ಮಾತನಾಡಿ, ಕೊಪ್ಪಳ ಈ ಹೋರಾಟ ಜೀವ ಉಳಿಸಿಕೊಳ್ಳಲು, ಆರೋಗ್ಯ ಕಾಪಾಡಿಕೊಳ್ಳಲು ಎನ್ನುವುದು ದೊಡ್ಡ ವಿಪರ್ಯಾಸವಾಗಿದೆ.ಕಾರ್ಖಾನೆಗಳು ಮಾಲಿನ್ಯ ಮಾಡುವ ಮೂಲಕ ಇಲ್ಲಿನ ಜನರ ಬದುಕುವ ಹಕ್ಕನ್ನೇ ಕಿತ್ತುಕೊಂಡಿವೆ. ಇಲ್ಲಿನ ತುಂಗಭದ್ರಾ ಕೋಟಿಗಟ್ಟಲೆ ಜನರಿಗೆ ಬದುಕು ಕೊಟ್ಟಿದೆ. ಆ ತುಂಗಭದ್ರಾ ಇವತ್ತು ವಿಷವಾಗಿದ್ದಲ್ಲದೆ ಕಾರ್ಖಾನೆಗಳು ನೀರು ಬಳಸಿಕೊಂಡು ಕೃಷಿಗೆ ನೀರಿನ ಕೊರತೆಯಾಗಿದೆ. ಈ ನೀರನ್ನು ಕುಡಿಯುವ ಜನರು ರೋಗಗ್ರಸ್ತರಾಗುತ್ತಿದ್ದಾರೆ. ಕೊಪ್ಪಳ ಹೋರಾಟವು ದಿಲ್ಲಿ ರೈತರ ಹೋರಾಟ, ದೇವನಹಳ್ಳಿ ರೈತರ ಹೋರಾಟದಂತೆ ಗೆದ್ದು ಇತಿಹಾಸ ಸೃಷ್ಟಿಸುತ್ತದೆ ಎಂದರು. ಈ ಹೋರಾಟಕ್ಕೆ ನಮ್ಮ ಬೆಂಬಲ ಸದಾ ಇರುತ್ತದೆ. ನಮ್ಮ ಸಂಘಟನೆ ತುಂಗಭದ್ರಾ ಅಚ್ಚುಕಟ್ಟು ವ್ಯಾಪ್ತಿಯಲ್ಲಿ ಸಕ್ರಿಯವಾಗಿದ್ದು ಅಲ್ಲಿಂದಲೇ ಹೋರಾಟ ಆರಂಭ ಮಾಡುತ್ತೇವೆ ಎಂದರು. ವಕೀಲರಾದ ಎನ್.ಎಂ. ಸೌದತ್ತಿ ಅವರು ಮಾತನಾಡಿ ಕೊಪ್ಪಳ ಅತ್ಯಂತ ಪುರಾತನ, ಪೌರಾಣಿಕ ಹಿನ್ನೆಲೆಯ ನಗರ ಸಾಂಸ್ಕೃತಿಕವಾಗಿ ಇತಿಹಾಸದಲ್ಲಿ ದಾಖಲಾದ ಈ ನಗರಕ್ಕೆ ಇವತ್ತು ಆಪತ್ತು ಬಂದಿದೆ. ನಾವು ಎಚ್ಚೆತ್ತುಕೊಂಡು ಹೋರಾಡಬೇಕಿದೆ. ನಾವು ವಕೀಲರು ಗಂಭೀರವಾಗಿ ಚಿಂತಿಸುತ್ತಿದ್ದೇವೆ. ಸದಾ ನಮ್ಮ ಬೆಂಬಲ ಇರುತ್ತದೆ ಎಂದರು.

ಧರಣಿಗೆ ಬೆಂಬಲಿಸಿದ ಕರ್ನಾಟಕ ಜನಶಕ್ತಿ ಸಂಘಟನೆಯ ಎಂಡಿ ಶಿರಾಜ್ ಸಿದ್ದಾಪುರ, ರವಿ ನವಲಹಳ್ಳಿ ಮಾತನಾಡಿದರು. ಧರಣಿಯಲ್ಲಿ ಪ್ರಧಾನ ಸಂಚಾಲಕರಾದ ಅಲ್ಲಮಪ್ರಭು ಬೆಟ್ಟದೂರು, ಸಂಚಾಲಕರಾದ ಮಲ್ಲಿಕಾರ್ಜುನ ಬಿ. ಗೋನಾಳ, ಮಂಜುನಾಥ ಜಿ. ಗೊಂಡಬಾಳ, ಡಾ. ಬಸವರಾಜ್ ಪೂಜಾರ, ಎಸ್.ಬಿ. ರಾಜಜೂರು, ಲಿಂಗರಾಜ ನವಲಿ, ದುರ್ಗೇಶ್ ಬರಗೂರು, ಎಲ್.ಎಫ್. ಪಾಟೀಲ್, ರಾಜಾ ನಾಯಕ ತಾವರಗೇರಿ, ಮುಕಪ್ಪ ಮೇಸ್ತ್ರಿ ಬಸಾಪುರ, ಬಿ.ಜಿ. ಕರಿಗಾರ, ಗಂಗಾಧರ ಖಾನಾಪುರ, ರಾಜಶೇಖರ ಏಳುಭಾವಿ, ಉಮೇಶ್ ಬಿ, ರವಿ ಕಾಂತನವರ, ನಾಗರಾಜ್ ಕುಷ್ಟಗಿ, ಬಸವರಾಜಪ್ಪ ಶೆಟ್ಟರ್, ಗುರಪ್ಪ, ಭೀಮಪ್ಪ ಯಲಬುರ್ಗಿ, ವಿಜಯ ಮಾಹಾಂತೇಶ ಹಟ್ಟಿ, ಚಿದಾನಂದಪ್ಪ ಬಸಾಪುರ, ಮಹಾದೇವಪ್ಪ ಮಾವಿನಮಡು ಬಸವರಾಜ ಪೂಜಾರ ಕಾಸನಕಂಡಿ, ಯಮನೂರಪ್ಪ ಹಾಲಳ್ಳಿ ಬಸಾಪುರ, ಸವರಾಜ ನರೇಗಲ್, ರತ್ನಮ್ಮ ದೊಡ್ಡಮನಿ, ಮಲ್ಲಪ್ಪ ಮಾ. ಪಾಟೀಲ್ ಕುಣಿಕೇರಿ ಮುಂತಾದವರು ಇದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್

Dailyhunt
Disclaimer: This content has not been generated, created or edited by Dailyhunt. Publisher: Hindusthan Samachar Kannada