Dailyhunt Logo
  • Light mode
    Follow system
    Dark mode
    • Play Story
    • App Story
ಬೆಂಗಳೂರು ಸಂಚಾರ ಪೊಲೀಸರಿಗೆ ಐದು ಇವಿ ಪೆಟ್ರೋಲಿಂಗ್ ವಾಹನಗಳ ಹಸ್ತಾಂತರ

ಬೆಂಗಳೂರು ಸಂಚಾರ ಪೊಲೀಸರಿಗೆ ಐದು ಇವಿ ಪೆಟ್ರೋಲಿಂಗ್ ವಾಹನಗಳ ಹಸ್ತಾಂತರ

ಬೆಂಗಳೂರು, 08 ಜುಲೈ (ಹಿ.ಸ.):

ಆಯಂಕರ್:

ಗರದ ರಸ್ತೆ ಸುರಕ್ಷತೆ ಮತ್ತು ಸಂಚಾರ ನಿಯಂತ್ರಣವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ನ್ಯೂಮೆರೋಸ್ ಮೋಟರ್ಸ್ ಸಂಸ್ಥೆಯು ತನ್ನ ಸಿಎಸ್‌ಆರ್ ಯೋಜನೆಯಡಿ ಐದು ವಿಶೇಷ ವಿನ್ಯಾಸದ ವಿದ್ಯುತ್ ಚಾಲಿತ ಪೆಟ್ರೋಲಿಂಗ್ ವಾಹನಗಳನ್ನು ಬೆಂಗಳೂರು ಸಂಚಾರ ಪೊಲೀಸ್ ಇಲಾಖೆಗೆ ದೇಣಿಗೆಯಾಗಿ ನೀಡಿದೆ.

ಈ ವಾಹನಗಳನ್ನು ಸಂಚಾರ ದಟ್ಟಣೆ ಹೆಚ್ಚಿರುವ ಪ್ರದೇಶಗಳಲ್ಲಿ ತ್ವರಿತವಾಗಿ ಸ್ಥಳಕ್ಕೆ ತಲುಪಲು, ಸ್ಥಳೀಯ ಪೆಟ್ರೋಲಿಂಗ್ ನಡೆಸಲು ಹಾಗೂ ಸಂಚಾರ ನಿಯಂತ್ರಣ ಕಾರ್ಯವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ನಿರ್ವಹಿಸಲು ಬಳಸಲಾಗುತ್ತದೆ.

ಈ ಕುರಿತು ಬೆಂಗಳೂರು ಸಂಚಾರ ಪೊಲೀಸರು ತಮ್ಮ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ನ್ಯೂಮೆರೋಸ್ ಮೋಟರ್ಸ್ನ ಸಿಎಸ್‌ಆರ್ ಉಪಕ್ರಮದಡಿ ಈ ವಾಹನಗಳನ್ನು ಪಡೆಗೆ ಸೇರಿಸಲಾಗಿದೆ ಎಂದು ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / SNEHA K

Dailyhunt
Disclaimer: This content has not been generated, created or edited by Dailyhunt. Publisher: Hindusthan Samachar Kannada