Dailyhunt

ಭಾಗ್ಯನಗರ ಪ.ಪಂ. : ಆಸ್ತಿ ತೆರಿಗೆ ಪಾವತಿಸಲು ಸೂಚನೆ

Hindusthan Samachar 0 months ago

ಕೊಪ್ಪಳ, 02 ಏಪ್ರಿಲ್ (ಹಿ.ಸ.) :

ಯಂಕರ್ : ಭಾಗ್ಯನಗರ ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿನ ಆಸ್ತಿ ಮಾಲೀಕರು ಸನ್ 2026-27 ನೇ ಸಾಲಿನ ಆಸ್ತಿ ತೆರಿಗೆಯನ್ನು ಏಪ್ರಿಲ್ ಮಾಹೆಯೊಳಗೆ ಪಾವತಿಸಿದರೆ ಶೇ. 5 ರಷ್ಟು ವಿನಾಯಿತಿ ನೀಡಲಾಗುವುದು.

ಮೇ ಹಾಗೂ ಜೂನ್ ತಿಂಗಳಲ್ಲಿ ಆಸ್ತಿ ತೆರಿಗೆಯನ್ನು ಪಾವತಿಸಿದಲ್ಲಿ ಯಾವುದೇ ರಿಯಾಯಿತಿ ಹಾಗೂ ದಂಡ ಇರುವುದಿಲ್ಲ.

ಜುಲೈ ತಿಂಗಳಿನಿಂದ ಶೇ.2 ರಷ್ಟು ದಂಡದೊಂದಿಗೆ ತೆರಿಗೆ ಪಾವತಿಸಬೇಕಾಗುತ್ತದೆ. ಆದ್ದರಿಂದ ಆಸ್ತಿ ಮಾಲೀಕರು ಏಪ್ರಿಲ್ ಮಾಹೆಯೊಳಗೆ ತೆರಿಗೆ ಪಾವತಿಸಿ, ರಿಯಾಯಿತಿ ಲಾಭವನ್ನು ಪಡೆದುಕೊಳ್ಳಬೇಕೆಂದು ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್

Dailyhunt
Disclaimer: This content has not been generated, created or edited by Dailyhunt. Publisher: Hindusthan Samachar Kannada