Dailyhunt Logo
  • Light mode
    Follow system
    Dark mode
    • Play Story
    • App Story

ಡೆಂಗ್ಯು ನಿಯಂತ್ರಣ 50 ಸ್ವಯಂ ಸೇವಕರ ನೇಮಕ: ಅರ್ಜಿ ಆಹ್ವಾನ

ಬಳ್ಳಾರಿ, 07 ಜುಲೈ (ಹಿ.ಸ.)

ಯಂಕರ್ : ಪ್ರಸ್ತಕ ಸಾಲಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧೀನದಲ್ಲಿ ಬರುವ 'ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಾರ್ಯಕ್ರಮ'ದಡಿ ಬಳ್ಳಾರಿ ನಗರ ಪ್ರದೇಶದಲ್ಲಿ ಡೆಂಗ್ಯು ರೋಗ ನಿಯಂತ್ರಣ ಚಟುವಟಿಕೆಯಾದ ಲಾರ್ವಾ ಉತ್ಪತ್ತಿ ತಾಣಗಳ ನಿರ್ಮೂಲನಾ ಕಾರ್ಯ ಹಾಗೂ ಸಮೀಕ್ಷೆಯನ್ನು ನಡೆಸಲು 50 ಸ್ವಯಂ ಸೇವಕರ ಸೇವೆಯ ಅವಶ್ಯಕತೆ ಇದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

*ಅರ್ಹತೆ:*

ಅಭ್ಯರ್ಥಿಗಳು ಕನಿಷ್ಠ ಎಸ್‌ಎಸ್‌ಎಲ್ಸಿ ವಿದ್ಯಾಹರ್ಹತೆಯನ್ನು ಹೊಂದಿರಬೇಕು. ಲಾರ್ವಾ ಸಮೀಕ್ಷೆ ಚಟುವಟಿಕೆಯ ನಮೂನೆಯನ್ನು ಭರ್ತಿ ಮಾಡಲು ಶಕ್ತರಾಗಿರಬೇಕು. ಕ್ರಿಯಾ ಯೋಜನೆಯ ಅನುಸಾರ ವೇಳಾಪಟ್ಟಿಯಂತೆ ತಪ್ಪದೇ ಎಲ್ಲಾ ಚಟುವಟಿಕೆಗಳಿಗೆ ಹಾಜರಾಗಬೇಕು. ಒಂದು ದಿನಕ್ಕೆ ಕನಿಷ್ಠ 60 ರಿಂದ 65 ಆವರಣಗಳನ್ನು (ಮನೆ, ಕಚೇರಿ, ಆಸ್ಪತ್ರೆ, ಶಾಲೆ, ಕಾಲೇಜು ಇತ್ಯಾದಿ) ಸಂದರ್ಶಿಸಿ, ಈಡೀಸ್ ಲಾರ್ವಾ ಉತ್ಪತ್ತಿ ತಾಣ ನಾಶ ಚಟುವಟಿಕೆಯನ್ನು ನಡೆಸಬೇಕು.

ದೈನಂದಿನ ಹಾಜರಿ ಮತ್ತು ಸಮೀಕ್ಷೆಯ ಜಿಯೋಟ್ಯಾಗ್ ಫೋಟೋಗಳೊಂದಿಗೆ ನಿಗದಿತ ವರದಿಯನ್ನು ಕಚೇರಿಗೆ ಸಲ್ಲಿಸುವುದು ಕಡ್ಡಾಯವಾಗಿದೆ. ಪ್ರತಿ ಸ್ವಯಂ ಸೇವಕರಿಗೆ ಸೇವೆಯನ್ನು ಗರಿಷ್ಠ 100 ದಿನಗಳಿಗೆ ನಿಗದಿಪಡಿಸಲಾಗಿರುತ್ತದೆ. ಸ್ವಯಂ ಸೇವಕರಿಗೆ ನಿಗದಿಪಡಿಸಿರುವ ಗೌರವಧನವನ್ನು ಪ್ರತಿ ದಿನ ಒಂದಕ್ಕೆ ರೂ. 400 ಗಳಂತೆ ನಿಯಮಾನುಸಾರ ಪಾವತಿಸಲಾಗುವುದು.

ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಕಚೇರಿಯ ದೂ. 08392294610 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ವಿಬಿಡಿಸಿ ಅಧಿಕಾರಿಗಳು ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್

Dailyhunt
Disclaimer: This content has not been generated, created or edited by Dailyhunt. Publisher: Hindusthan Samachar Kannada