Dailyhunt Logo
  • Light mode
    Follow system
    Dark mode
    • Play Story
    • App Story
ಡೀಸೆಲ್ - ಪೆಟ್ರೋಲ್ ದರ ಕೊಂಚ ಹೆಚ್ಚಳ

ಡೀಸೆಲ್ - ಪೆಟ್ರೋಲ್ ದರ ಕೊಂಚ ಹೆಚ್ಚಳ

ನವದಹೆಲಿ, ನ.29 (ಹಿ.ಸ) : ತೈಲ ಮಾರುಕಟ್ಟೆ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ತುಸು ಹೆಚ್ಚಿಸಿವೆ.

ಇದರೊಂದಿಗೆ ದೆಹಲಿಯಲ್ಲಿ ಪೆಟ್ರೋಲ್ ಇಂದು ಲೀಟರ್ ಗೆ 82 ರೂ ಮತ್ತು ಡೀಸೆಲ್ 72 ರೂ. ಗೆ ಏರಿದೆ. ಡೀಸೆಲ್‍ ದರವನ್ನು 26ರಿಂದ 28 ಪೈಸೆಯಷ್ಟು, ಪೆಟ್ರೋಲ್‍ ದರವನ್ನು ಲೀಟರ್ ಗೆ 21ರಿಂದ 24 ಪೈಸೆಯಷ್ಟು ಹೆಚ್ಚಿಸಲಾಗಿದೆ.

ದೇಶದ ನಾಲ್ಕು ಪ್ರಮುಖ ಮಹಾನಗರಗಳಲ್ಲಿ ಡೀಸೆಲ್ ದರವನ್ನು 22 ರಿಂದ 26 ಪೈಸೆ ಮತ್ತು ಪೆಟ್ರೋಲ್ ದರವನ್ನು ಪ್ರತಿ ಲೀಟರ್‌ಗೆ 17 ರಿಂದ 19 ಪೈಸೆ ಹೆಚ್ಚಿಸಲಾಗಿತ್ತು.

ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾದ ನಂತರ ನವೆಂಬರ್ 25 ರಂದು ಎರಡೂ ಇಂಧನಗಳ ದರಗಳು ಸ್ಥಿರವಾಗಿದ್ದವು.

ಹೆಚ್ಚಳದ ನಂತರ ದೆಹಲಿಯಲ್ಲಿ ಪೆಟ್ರೋಲ್ ದರ ಲೀಟರ್‍ ಗೆ 82.13 ರೂ., ಡೀಸೆಲ್ ದರ ಲೀಟರ್‌ಗೆ 72.13 ರೂ.ನಷ್ಟಿದೆ. ವಾಣಿಜ್ಯ ನಗರಿ ಮುಂಬೈ ನಲ್ಲಿ ಪೆಟ್ರೋಲ್ ಲೀಟರ್‌ಗೆ 88.81 ರೂ ಮತ್ತು ಡೀಸೆಲ್ ದರ ಲೀಟರ್‌ಗೆ 78.66 ರೂ.ನಷ್ಟಿದೆ.

ಕೋಲ್ಕತ್ತಾದಲ್ಲಿ ಪೆಟ್ರೋಲ್ ಲೀಟರ್‌ಗೆ 83.67 ರೂ. ಮತ್ತು ಡೀಸೆಲ್ ದರ ಲೀಟರ್‌ 75.70 ರೂ. ಮತ್ತು ಚೆನ್ನೈನಲ್ಲಿ ಪೆಟ್ರೋಲ್ ದರ ಲೀಟರ್‌ಗೆ 85.12 ರೂ., ಡೀಸೆಲ್ ದರ ಲೀಟರ್‌ಗೆ 77.56 ರೂ.ಗೆ ಏರಿಕೆಯಾಗಿದೆ.
ಹಿಂದುಸ್ತಾನ ಸಮಾಚಾರ/ಎಂ.ಎಸ್ /ಯ.ಮ
Dailyhunt
Disclaimer: This content has not been generated, created or edited by Dailyhunt. Publisher: Hindusthan Samachar Kannada