Dailyhunt
ಎನ್‌ಸಿಸಿ ವತಿಯಿಂದ ಅಂತರಾಷ್ಟಿçÃಯ ಯೋಗ ದಿನ ಆಚರಣೆ

ಎನ್‌ಸಿಸಿ ವತಿಯಿಂದ ಅಂತರಾಷ್ಟಿçÃಯ ಯೋಗ ದಿನ ಆಚರಣೆ

ಬಳ್ಳಾರಿ, ಜೂ. 21(ಹಿ.ಸ): ಎನ್‌ಸಿಸಿ ಕರ್ನಾಟಕ ಬೆಟಾಲಿಯನ್-34 ವತಿಯಿಂದ ಬಳ್ಳಾರಿ,ಕೊಪ್ಪಳ ಮತ್ತು ವಿಜಯನಗರ ಜಿಲ್ಲೆಗಳ ವಿವಿಧ ಶಾಲಾ-ಕಾಲೇಜುಗಳಲ್ಲಿ ಎನ್‌ಸಿಸಿ ವಿದ್ಯಾರ್ಥಿಗಳು ಸೋಮವಾರ ಅಂತರಾಷ್ಟಿçÃಯ ಯೋಗ ದಿನ ಆಚರಿಸಿದರು.

ಎನ್‌ಸಿಸಿ ಕಮಾಂಡಿAಗ್ ಆಫೀಸರ್ ಕರ್ನಲ್ ರಾಜೇಂದರ್ ಮಲಿಕ್ ಅವರು ಈ ಸಂದರ್ಭದಲ್ಲಿ ಮಾತನಾಡಿ, ಉತ್ತಮ ಆರೋಗ್ಯಕ್ಕಾಗಿ ಯೋಗಮಂತ್ರವನ್ನು ತಮ್ಮ ದಿನನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳಲು ಸಲಹೆ ನೀಡಿದರು.

ಆಡಳಿತಾಧಿಕಾರಿ ಕರ್ನಲ್ ಅಯ್ಯುಪ್ ಕೆ.ಎ, 1112 ಎನ್‌ಸಿಸಿ ಕೆಡೆಟ್‌ಗಳು, 13 ಸೇನಾ ತರಬೇತಿದಾರರು, 29 ಎನ್‌ಸಿಸಿ ಅಧಿಕಾರಿಗಳು ತಮ್ಮ ತಮ್ಮ ಮನೆಗಳಲ್ಲಿಯೇ ಯೋಗಭ್ಯಾಸ ಮಾಡುವ ಮೂಲಕ ಅಂತರಾಷ್ಟಿçÃಯ ಯೋಗ ದಿನ ಆಚರಿಸಿದರು.


ಎನ್‌ಸಿಸಿ ಕೆಡೆಟ್‌ಗಳ ಜೊತೆಗೆ ಕುಟುಂಬದ ಸದಸ್ಯರು ಸಹ ಯೋಗ ದಿನಾಚರಣೆ ಪ್ರಯುಕ್ತ ಯೋಗಾಭ್ಯಾಸದಲ್ಲಿ ಪಾಲ್ಗೊಂಡಿದ್ದರು.

Dailyhunt
Disclaimer: This content has not been generated, created or edited by Dailyhunt. Publisher: Hindusthan Samachar Kannada