Tuesday, 24 Nov, 5.03 pm Hindusthan Samachar

ಸುದ್ದಿ
ಇದು ಸೂಟು ಬೂಟಿನ ಸರ್ಕಾರವೆಂದು ಕೇಂದ್ರದ ವಿರುದ್ಧ ಕಿಡಿಕಾರಿದ ರಾಹುಲ್ ಗಾಂಧಿ

ನವದೆಹಲಿ, ನ.24 (ಹಿ.ಸ) : ಇದು ಸೂಟು ಬೂಟಿನ ಸರ್ಕಾರ ಎಂದು ಕೇಂದ್ರದ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತೊಮ್ಮೆ ಗುಡುಗಿದ್ದಾರೆ. ಸರ್ಕಾರ ನಿಧಾನವಾಗಿ ವ್ಯವಸ್ಥಿತ ವಿಧಾನದಲ್ಲಿ ಉದ್ಯಮಿಗಳ ಹಿತಾಸಕ್ತಿ ಕಾಪಾಡಲು ಕೆಲಸ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು, ಕ್ರಮಾಂಕವನ್ನು ಅರ್ಥ ಮಾಡಿಕೊಳ್ಳಿ. ಮೊದಲು ಕೆಲ ದೊಡ್ಡ ಕಂಪನಿಗಳ ಸಾಲ ಮನ್ನಾ, ನಂತರ ಕಂಪನಿಗಳಿಗೆ ದೊಡ್ಡ ಮಟ್ಟದ ತೆರಿಗೆ ವಿನಾಯತಿ. ಈಗ ಈ ಕಂಪನಿಗಳು ಆರಂಭಿಸಿರುವ ಬ್ಯಾಂಕ್‌ಗಳಿಗೆ ಜನರ ಉಳಿತಾಯವನ್ನು ನೇರವಾಗಿ ನೀಡಲು ಮುಂದಾಗಿದೆ" ಎಂದು ಆರೋಪಿಸಿದ್ದಾರೆ. ಇದಕ್ಕೆ ಅವರು ಸೂಟುಬೂಟಿನ ಸರ್ಕಾರ ಎಂದು ಹ್ಯಾಷ್‌ಟ್ಯಾಗ್‌ ಬಳಸಿದ್ದಾರೆ.

ಈ ಮೂಲಕ ಅವರು ಮಾಜಿ ಆರ್‌ಬಿಐ ಗವರ್ನರ್‌ ರಘುರಾಮ್‌ ರಾಜನ್‌ ಮತ್ತು ಪ್ರಸಿದ್ಧ ಆರ್ಥಿಕ ತಜ್ಞ ವೈರಲ್‌ ಆಚಾರ್ಯ ಅವರು, ಭಾರತೀಯ ಕಾರ್ಪೊರೇಟ್‌ ಕಂಪನಿಗಳಿಗೆ ಬ್ಯಾಂಕ್‌ ಆರಂಭಿಸಲು ಸಲಹೆ ನೀಡಿರುವುದು ತಪ್ಪು ಎಂದಿರುವ ವರದಿಯನ್ನು ಉಲ್ಲೇಖಿಸಿದ್ದಾರೆ. ಹಿಂದುಸ್ತಾನ ಸಮಾಚಾರ/ಎಂ.ಎಸ್ /ಯ.ಮ
Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Hindusthan Samachar Kannada
Top