Dailyhunt

ಇಂದು ಕೊಂಚ ಏರಿಕೆಯಾದ ಕೊರೊನಾ ಸೋಂಕು

ಬೆಂಗಳೂರು,ಅಕ್ಟೋಬರ್ 29: ಕಳೆದ 3-4 ದಿನಗಳಿಗೆ ಹೋಲಿಸಿದರೆ ರಾಜ್ಯದಲ್ಲಿ ಕೊರನಾ ಸೊಂಕು ಪ್ರಕರಣಗಳು ಇಂದು ಕೊಂಚ ಏರಿಕೆಯಾಗಿವೆ ಕಳೆದ ಮೂರು ನಾಲ್ಕು ದಿನಗಳಿಂದ ರಾಜ್ಯದಲ್ಲಿ 3500 ಆಸುಪಾಸಿನಲ್ಲಿದ್ದ ಪ್ರಕರಣಗಳು ಇಂದು 4000 ದಾಟಿದೆ ಬೆಂಗಳೂರಿನಲ್ಲೂ ಸೋಂಕು ಪ್ರಕರಣಗಳು ಇಂದು ಸ್ವಲ್ಪ ಮಟ್ಟಿಗೆ ಏರಿಕೆಯಾಗಿವೆ.

ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 4025 ಕೊರೋನಾ ಪ್ರಕರಣಗಳು ಧೃಡಪಟ್ಟಿದೆ ಹಾಗೆಯೇ ಸೋಂಕಿನಿಂದ 7661 ಮಂದಿ ಗುಣಮುಖರಾಗಿದ್ದಾರೆ. ಸೋಂಕಿಗೆ 45 ಸೋಂಕಿತರು ಮೃತಪಟ್ಟಿದ್ದಾರೆ.


ರಾಜ್ಯದಲ್ಲಿ ಒಟ್ಟು ಕೋವಿಡ್ ಸೋಂಕಿತರ ಸಂಖ್ಯೆ 816809ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಒಟ್ಟು 741219 ಕೋವಿಡ್ ಸೊಂಕಿತರು ಚೇತರಿಸಿಕೊಂಡಿದ್ದಾರೆ ಮತ್ತು ಸದ್ಯಕ್ಕೆ ರಾಜ್ಯದಲ್ಲಿ ಒಟ್ಟು 64480 ಸಕ್ರಿಯ ಸೋಂಕು ಪ್ರಕರಣಗಳಿವೆ.

ಸೋಂಕಿನಿಂದ ಈವರೆಗೆ 11091 ಜನ ಸಾವಿಗೀಡಾಗಿದ್ದಾರೆ.

ರಾಜ್ಯದಲ್ಲಿ 935 ಸೋಂಕಿತರು ತುರ್ತು ನಿಗಾ ಘಟಕದಲ್ಲಿ ದಾಖಲುಗೊಂಡು ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.

ಬೆಂಗಳೂರಿನಲ್ಲಿ ಕಳೆದ 24 ಗಂಟೆಯಲ್ಲಿ 2175 ಮಂದಿಗೆ ಕೊರೊನಾ ಸೋಂಕು ಪ್ರಕರಣಗಳು ದೃಢಪಟ್ಟಿದ್ದು, ಒಟ್ಟಾರೆ ಸೋಂಕಿನ ಸಂಖ್ಯೆ 333037ಕ್ಕೆ ಏರಿಕೆಯಾಗಿದೆ.

ನಗರದಲ್ಲು ಕಳೆದ 24 ಗಂಟೆಗಳಲ್ಲಿ ಸೊಂಕಿಗೆ 19ಮಂದಿ ಬಲಿಯಾಗಿದ್ದು , ಒಟ್ಟಾರೆ ಸಾವಿನ ಸಂಖ್ಯೆ 3820ಕ್ಕೆ ಏರಿಕೆಯಾಗಿದೆ.

ಇಂದು 4378 ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ ಬೆಂಗಳೂರುನಲ್ಲಿ ಒಟ್ಟು 41538 ಸಕ್ರಿಯ ಪ್ರಕರಣಗಳಿವೆ.

ಜಿಲ್ಲಾ ವಾರು ಸೊಂಕಿತರ ವಿವರ

ಬಾಗಲಕೋಟೆ 19 ಬಳ್ಳಾರಿ 74 ಬೆಳಗಾವಿ 42 ಬೆಂಗಳೂರು ಗ್ರಾಮಾಂತರ 81 ಬೀದರ್14 ಚಾಮರಾಜನಗರ 37 ಚಿಕ್ಕಬಳ್ಳಾಪುರ 42 ಚಿಕ್ಕಮಗಳೂರು 38 ಚಿತ್ರದುರ್ಗ 41 ದಕ್ಷಿಣ ಕನ್ನಡ 96 ದಾವಣಗೆರೆ 94 ಧಾರವಾಡ 76 ಗದಗ 12 ಹಾಸನ 114 ಹಾವೇರಿ 54 ಕಲಬುರಗಿ 35 ಕೊಡಗು 13 ಕೋಲಾರ 28 ಕೊಪ್ಪಳ 25 ಮಂಡ್ಯ 115 ಮೈಸೂರು 204 ರಾಯಚೂರು 20 ರಾಮನಗರ 48 ಶಿವಮೊಗ್ಗ 127 ತುಮಕೂರು 136 ಉಡುಪಿ 66 ಉತ್ತರ ಕನ್ನಡ 99 ವಿಜಯಪುರ 71 ಯಾದಗಿರಿ 29

Dailyhunt
Disclaimer: This content has not been generated, created or edited by Dailyhunt. Publisher: Hindusthan Samachar Kannada