Dailyhunt Logo
  • Light mode
    Follow system
    Dark mode
    • Play Story
    • App Story
ಇಂದು ಪಾಟ್ನಾದಲ್ಲಿ ಸಾಮ್ರಾಟ್ ಸಚಿವ ಸಂಪುಟ ವಿಸ್ತರಣೆ

ಇಂದು ಪಾಟ್ನಾದಲ್ಲಿ ಸಾಮ್ರಾಟ್ ಸಚಿವ ಸಂಪುಟ ವಿಸ್ತರಣೆ

ಪಾಟ್ನಾ, 07 ಮೇ (ಹಿ.ಸ.) :

ಯಂಕರ್ : ಬಿಹಾರದ ರಾಜಕೀಯ ವಲಯದ ಗಮನ ಸೆಳೆದಿರುವ ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ನೇತೃತ್ವದ ಸಚಿವ ಸಂಪುಟ ವಿಸ್ತರಣೆ ಇಂದು ಮಧ್ಯಾಹ್ನ ಪಾಟ್ನಾದ ಐತಿಹಾಸಿಕ ಗಾಂಧಿ ಮೈದಾನದಲ್ಲಿ ನಡೆಯಲಿದೆ. ಮಧ್ಯಾಹ್ನ 12:10ಕ್ಕೆ ಆರಂಭವಾಗಲಿರುವ ಪ್ರಮಾಣವಚನ ಸಮಾರಂಭಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಪಾಟ್ನಾದಲ್ಲಿ ಭವ್ಯ ರೋಡ್ ಶೋ ನಡೆಸಲಿದ್ದು, ರಾಜಧಾನಿ ನಗರ ರಾಜಕೀಯ ಚಟುವಟಿಕೆಗಳಿಂದ ಕಂಗೊಳಿಸುತ್ತಿದೆ.

ಗಾಂಧಿ ಮೈದಾನದಲ್ಲಿ ಇದೇ ಮೊದಲ ಬಾರಿಗೆ ಸಚಿವ ಸಂಪುಟ ವಿಸ್ತರಣೆ ಕಾರ್ಯಕ್ರಮ ನಡೆಯುತ್ತಿರುವ ಹಿನ್ನೆಲೆಯಲ್ಲಿ ಆಡಳಿತವು ವಿಶೇಷ ಸಿದ್ಧತೆ ಕೈಗೊಂಡಿದೆ. ಸಮಾರಂಭದಲ್ಲಿ ಜೆಡಿಯು, ಬಿಜೆಪಿ, ಎಲ್ಜೆಪಿ (ರಾಮ್ ವಿಲಾಸ್), ಎಚ್‌ಎಎಂ ಹಾಗೂ ರಾಷ್ಟ್ರೀಯ ಲೋಕ ಮೋರ್ಚಾ ಪಕ್ಷಗಳ ನಾಯಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಜರ್ಮನ್ ಮಂಟಪದಲ್ಲಿ ವೇದಿಕೆ ಸಜ್ಜು

ಹವಾಮಾನ ಅಸ್ಥಿರತೆಯನ್ನು ಗಮನದಲ್ಲಿಟ್ಟುಕೊಂಡು ಗಾಂಧಿ ಮೈದಾನದಲ್ಲಿ ವಿಶೇಷ ಜರ್ಮನ್ ಮಾದರಿಯ ಮಂಟಪ ನಿರ್ಮಿಸಲಾಗಿದೆ. ಅದರೊಳಗೆ ಮುಖ್ಯ ವೇದಿಕೆಯನ್ನು ಸಜ್ಜುಗೊಳಿಸಲಾಗಿದ್ದು, ಸಾವಿರಾರು ಜನರು ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಬಿಹಾರದ ವಿವಿಧ ಜಿಲ್ಲೆಗಳಿಂದ ಬಿಜೆಪಿ, ಜೆಡಿಯು ಮತ್ತು ಮೈತ್ರಿ ಪಕ್ಷಗಳ ಕಾರ್ಯಕರ್ತರು ಪಾಟ್ನಾಕ್ಕೆ ಆಗಮಿಸುತ್ತಿದ್ದಾರೆ.

ನಗರದ ಪ್ರಮುಖ ರಸ್ತೆಗಳಲ್ಲಿ ಪಕ್ಷದ ಧ್ವಜಗಳು, ಸ್ವಾಗತ ಕಮಾನುಗಳು ಹಾಗೂ ನಾಯಕರ ಭಾರೀ ಕಟೌಟ್ಗಳನ್ನು ಅಳವಡಿಸಲಾಗಿದ್ದು, ರಾಜಧಾನಿ ನಗರ ಹಬ್ಬದ ವಾತಾವರಣವನ್ನು ಪಡೆದುಕೊಂಡಿದೆ.

ಪ್ರಧಾನಿ ಮೋದಿ ರೋಡ್ ಶೋಗೆ ವಿಶೇಷ ಸಿದ್ಧತೆ

ರಾಜ್ಯ ಬಿಜೆಪಿ ಘಟಕದ ಮಾಹಿತಿಯ ಪ್ರಕಾರ, ಪ್ರಧಾನಿ ನರೇಂದ್ರ ಮೋದಿ ಪಾಟ್ನಾ ವಿಮಾನ ನಿಲ್ದಾಣದಿಂದ ಗಾಂಧಿ ಮೈದಾನದವರೆಗೆ ಅವರು ಭವ್ಯ ರೋಡ್ ಶೋ ನಡೆಸಲಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಹಾಗೂ ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಕೂಡ ಪ್ರಧಾನಿಯವರೊಂದಿಗೆ ರೋಡ್ ಶೋನಲ್ಲಿ ಭಾಗವಹಿಸಲಿದ್ದಾರೆ.

ರೋಡ್ ಶೋ ಮಾರ್ಗದುದ್ದಕ್ಕೂ ಭಾರಿ ಜನಸ್ತೋಮ ಸೇರುವ ನಿರೀಕ್ಷೆಯಿದ್ದು, ಹಲವೆಡೆ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಪುಷ್ಪವರ್ಷದ ವ್ಯವಸ್ಥೆ ಮಾಡಲಾಗಿದೆ. ಪಕ್ಷದ ಕಾರ್ಯಕರ್ತರು ಪ್ರಧಾನಿ ಸ್ವಾಗತಕ್ಕೆ ವಿಶೇಷ ಸಿದ್ಧತೆ ನಡೆಸಿದ್ದಾರೆ.

"ಜನರಲ್ಲಿ ಅಪಾರ ಉತ್ಸಾಹ" - ರಾಮಕೃಪಾಲ್ ಯಾದವ್

ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ರಾಮಕೃಪಾಲ್ ಯಾದವ್ ಮಾತನಾಡಿ, ಬಿಹಾರದ ವಿವಿಧ ಭಾಗಗಳಿಂದ ಸಾವಿರಾರು ಜನರು ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಪ್ರಧಾನಿಯನ್ನು ಸ್ವಾಗತಿಸಲು ಜನರಲ್ಲಿ ಅಪಾರ ಉತ್ಸಾಹವಿದ್ದು, ಇದು ಎನ್ಡಿಎ ಸರ್ಕಾರದ ಮೇಲಿನ ಸಾರ್ವಜನಿಕ ವಿಶ್ವಾಸವನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ಹೇಳಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa

Dailyhunt
Disclaimer: This content has not been generated, created or edited by Dailyhunt. Publisher: Hindusthan Samachar Kannada