Dailyhunt Logo
  • Light mode
    Follow system
    Dark mode
    • Play Story
    • App Story
ಜಾಗತಿಕ ಮಾರುಕಟ್ಟೆಗಳಲ್ಲಿ ದುರ್ಬಲತೆ; ಏಷ್ಯಾದ ಮಾರುಕಟ್ಟೆಗಳಲ್ಲಿ ಮಾರಾಟದ ಒತ್ತಡ

ಜಾಗತಿಕ ಮಾರುಕಟ್ಟೆಗಳಲ್ಲಿ ದುರ್ಬಲತೆ; ಏಷ್ಯಾದ ಮಾರುಕಟ್ಟೆಗಳಲ್ಲಿ ಮಾರಾಟದ ಒತ್ತಡ

ನವದೆಹಲಿ, 18 ಆಗಸ್ಟ್ (ಹಿ.ಸ.):

ಯಂಕರ್:ಜಾಗತಿಕ ಮಾರುಕಟ್ಟೆಗಳಿಂದ ಇಂದು ದುರ್ಬಲತೆಯ ಸೂಚನೆಗಳು ವ್ಯಕ್ತವಾಗಿದ್ದು, ಏಷ್ಯಾದ ಷೇರು ಮಾರುಕಟ್ಟೆಗಳಲ್ಲೂ ಮಾರಾಟದ ಒತ್ತಡ ಮುಂದುವರಿದಿದೆ. ಹಿಂದಿನ ವಹಿವಾಟಿನಲ್ಲಿ ಅಮೆರಿಕದ ಪ್ರಮುಖ ಷೇರು ಸೂಚ್ಯಂಕಗಳು ಕುಸಿತದೊಂದಿಗೆ ವಹಿವಾಟು ಅಂತ್ಯಗೊಳಿಸಿವೆ.

ಯುರೋಪಿನ ಮಾರುಕಟ್ಟೆಗಳಲ್ಲೂ ಮಾರಾಟದ ಒತ್ತಡ ಕಂಡುಬಂದಿದೆ.

ಅಮೆರಿಕ-ಇರಾನ್ ನಡುವಿನ ಉದ್ವಿಗ್ನತೆ ಹಾಗೂ ಹಣದುಬ್ಬರದ ಆತಂಕದಿಂದ ಅಮೆರಿಕದ ಖಜಾನೆ ಬಾಂಡ್‌ಗಳ ಬಡ್ಡಿದರ ಏರಿಕೆಯಾಗಿದೆ. ಇದರ ಪರಿಣಾಮವಾಗಿ ಎಸ್‌ ಆಯಂಡ್‌ ಪಿ 500 ಸೂಚ್ಯಂಕ ಶೇ.0.52ರಷ್ಟು ಕುಸಿದು 7,745.06 ಅಂಕಗಳಿಗೆ ಮತ್ತು ನಾಸ್ಡಾಕ್ ಶೇ.0.32ರಷ್ಟು ಇಳಿದು 26,644.91 ಅಂಕಗಳಿಗೆ ತಲುಪಿದೆ. ಡೌ ಜೋನ್ಸ್ ಭವಿಷ್ಯ ಸೂಚ್ಯಂಕವೂ ಶೇ.0.09ರಷ್ಟು ದುರ್ಬಲವಾಗಿದೆ.

ಯುರೋಪಿನ ಮಾರುಕಟ್ಟೆಗಳ ಪೈಕಿ ಎಫ್‌ಟಿಎಸ್‌ಇ ಶೇ.0.28, ಸಿಎಸಿ ಶೇ.0.67 ಮತ್ತು ಡ್ಯಾಕ್ಸ್ ಶೇ.0.39ರಷ್ಟು ಕುಸಿತ ಕಂಡಿವೆ.

ಏಷ್ಯಾದ ಒಂಬತ್ತು ಪ್ರಮುಖ ಮಾರುಕಟ್ಟೆಗಳ ಪೈಕಿ ಎಂಟು ಸೂಚ್ಯಂಕಗಳು ಕೆಂಪು ನಿಶಾನೆಯಲ್ಲಿ ವಹಿವಾಟು ನಡೆಸುತ್ತಿವೆ. ಇಂಡೋನೇಷ್ಯಾದ ಜಕಾರ್ತಾ ಸಂಯೋಜಿತ ಸೂಚ್ಯಂಕ ಮಾತ್ರ ಶೇ.1.18ರಷ್ಟು ಏರಿಕೆ ದಾಖಲಿಸಿದೆ.

ಭಾರತೀಯ ಮಾರುಕಟ್ಟೆಯಲ್ಲೂ ದುರ್ಬಲತೆಯ ಸೂಚನೆ ಕಂಡುಬಂದಿದ್ದು, ನಿಫ್ಟಿ 130.50 ಅಂಕ ಕುಸಿದು 24,244.50 ಅಂಕಗಳಲ್ಲಿ ವಹಿವಾಟು ನಡೆಸುತ್ತಿದೆ. ಹ್ಯಾಂಗ್‌ಸೆಂಗ್ ಶೇ.0.72, ನಿಕ್ಕಿ ಶೇ.1.87, ಸ್ಟ್ರೇಟ್‌ಟೈಮ್ಸ್ ಶೇ.1.21, ತೈವಾನ್ ತೂಕಿತ ಸೂಚ್ಯಂಕ ಶೇ.1.01 ಮತ್ತು ಕೊಸ್ಪಿ ಶೇ.0.58ರಷ್ಟು ಕುಸಿದಿವೆ. ಶಾಂಘೈ ಸಂಯೋಜಿತ ಸೂಚ್ಯಂಕ ಶೇ.0.39 ಹಾಗೂ ಸೆಟ್ ಸಂಯೋಜಿತ ಸೂಚ್ಯಂಕ ಶೇ.0.09ರಷ್ಟು ಇಳಿಕೆಯಾಗಿದೆ

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.

Dailyhunt
Disclaimer: This content has not been generated, created or edited by Dailyhunt. Publisher: Hindusthan Samachar Kannada