Dailyhunt Logo
  • Light mode
    Follow system
    Dark mode
    • Play Story
    • App Story
ಜನರ ನೋವಿಗಿಂತ ಕಾಂಗ್ರೆಸ್ ಗೆ ಕುರ್ಚಿ ರಾಜಕಾರಣವೇ ಮುಖ್ಯ : ಅಶೋಕ

ಜನರ ನೋವಿಗಿಂತ ಕಾಂಗ್ರೆಸ್ ಗೆ ಕುರ್ಚಿ ರಾಜಕಾರಣವೇ ಮುಖ್ಯ : ಅಶೋಕ

ಬೆಂಗಳೂರು, 28 ಮೇ (ಹಿ.ಸ.) :

ಯಂಕರ್ : ಕಲ್ಯಾಣ ಕರ್ನಾಟಕ ಭಾಗದಲ್ಲಿ ಸುರಿಯುತ್ತಿರುವ ಅಕಾಲಿಕ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ನಾಯಕ ಆರ್. ಅಶೋಕ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಹೇಳಿಕೆ ನೀಡಿರುವ ಅವರು, "ಕಲ್ಯಾಣ ಕರ್ನಾಟಕದಲ್ಲಿ ಅಕಾಲಿಕ ಮಳೆಯಿಂದ ರೈತರು ಬೆಳೆ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಹಲವೆಡೆ ಮನೆಗಳು ಕುಸಿದು ಕುಟುಂಬಗಳು ಕಷ್ಟದ ದಿನಗಳನ್ನು ಎದುರಿಸುತ್ತಿವೆ. ಆದರೆ ರಾಜ್ಯ ಸರ್ಕಾರಕ್ಕೆ ಜನರ ಸಮಸ್ಯೆಗಳಿಗಿಂತ ಕುರ್ಚಿ ರಾಜಕಾರಣವೇ ಮುಖ್ಯವಾಗಿದೆ" ಎಂದು ಟೀಕಿಸಿದ್ದಾರೆ.

ಇದೇ ವೇಳೆ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧವೂ ಪರೋಕ್ಷವಾಗಿ ವಾಗ್ದಾಳಿ ನಡೆಸಿದ ಅಶೋಕ, "ರಾಜ್ಯದಲ್ಲಿ ಎಲೆ ಅಲ್ಲಾಡಿದರೂ ಪ್ರತಿಕ್ರಿಯೆ ನೀಡುವವರು ತಮ್ಮದೇ ಭಾಗದ ಜನರ ಸಂಕಷ್ಟದ ಬಗ್ಗೆ ಮೌನವಾಗಿರುವುದು ಏನನ್ನು ತೋರಿಸುತ್ತದೆ?" ಎಂದು ಪ್ರಶ್ನಿಸಿದ್ದಾರೆ.

"ಒಂದೆಡೆ ಜನರು ಬದುಕಿಗಾಗಿ ಹೋರಾಟ ಮಾಡುತ್ತಿದ್ದರೆ, ಮತ್ತೊಂದೆಡೆ ಕಾಂಗ್ರೆಸ್ ನಾಯಕರು ಹೊಸ ಸೂಟ್-ಬೂಟ್ ಧರಿಸಿ ಪ್ರಮಾಣ ವಚನದ ತಯಾರಿಯಲ್ಲಿ ನಿರತರಾಗಿದ್ದಾರೆ" ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ "ಜನಪರ ಆಡಳಿತ" ಹಾಗೂ "ರೈತರ ಮೇಲಿನ ಕಾಳಜಿ" ಇದೇನಾ ಎಂದು ಪ್ರಶ್ನಿಸಿರುವ ಅಶೋಕ, ತಕ್ಷಣ ಸಂಕಷ್ಟದಲ್ಲಿರುವ ಜನರ ನೆರವಿಗೆ ಸರ್ಕಾರ ಧಾವಿಸಬೇಕು ಎಂದು ಒತ್ತಾಯಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh.M.B.

Dailyhunt
Disclaimer: This content has not been generated, created or edited by Dailyhunt. Publisher: Hindusthan Samachar Kannada